ಮಾರ್ಟಿನ್ ಕನ್ನಡ ಚಿತ್ರರಂಗದಿಂದ ತಯಾರಾಗುತ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಬಿಡುಗಡೆಯಾದ ಎರಡೇ ಗಂಟೆಗಳಲ್ಲಿ ಹತ್ತು ಲಕ್ಷ ಮಂದಿ ಟೀಸರ್ ನೋಡಿ ದಾಖಲೆ ಬರೆದಿತ್ತು. ‘ಮಾರ್ಟಿನ್’ ಸಿನಿಮಾ ಇಲ್ಲಿಯವರೆಗೂ ಯೂಟ್ಯೂಬ್ನಲ್ಲಿ 70 ಮಿಲಿಯನ್ ವ್ಯೂಸ್ ಪಡೆದುಕೊಂಡಿದೆ. ಯೂಟ್ಯೂಬ್ನಲ್ಲಿ ಟಾಪ್ ಟ್ರೆಂಡಿಂಗ್ನಲ್ಲಿರುವ ‘ಮಾರ್ಟಿನ್’ ಟೀಸರ್ಗೆ 680 ಸಾವಿರಕ್ಕೂ ಹೆಚ್ಚು ಲೈಕ್ಸ್ ಲಭಿಸಿವೆ.
ಮಾರ್ಟಿನ್’ ಸಿನಿಮಾ ಟೀಸರ್ನಲ್ಲಿ ಧ್ರುವ ಸರ್ಜಾ ಮತ್ತು ಡಬ್ಲ್ಯೂಡಬ್ಲ್ಯೂಎಫ್ ಫೈಟರ್ಗಳಾದ ನೇಥನ್ ಜೋನಸ್ ಹಾಗೂ ರುಬೆಲ್ ಮಸ್ಕೆರ ನಡುವಿನ ಫೈಟ್ ಅಭಿಮಾನಿಗಳಿಗೆ ಥ್ರಿಲ್ ನೀಡಿದೆ. ಇದರಲ್ಲಿ ಪಾಕಿಸ್ತಾನದ ಜೈಲ್ ಮೇಕಿಂಗ್, ವಿಎಫ್ಎಕ್ಸ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ. ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದು, ವಾಸವಿ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ಉದಯ್ ಕೆ ಮೆಹ್ತಾ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಟೀಸರ್ಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದರೆ ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ಗೊತ್ತಾಗಿದೆ. ಮಾರ್ಟಿನ್ ಚಿತ್ರದ ಟೀಸರ್ ಬಿಡುಗಡೆಯನ್ನು ಪೇಯ್ಡ್ ಶೋ ಆಗಿ ಮಾಡಿ, ಅದರಿಂದ ಸಂಗ್ರಹವಾದ ಒಟ್ಟೂ ಹಣವನ್ನು ಗೋಶಾಲೆಗೆ ನೀಡಿದ್ದೇವೆ ಎಂದಿದ್ದಾರೆ ಉದಯ್ ಮೆಹ್ತಾ. ಇದೆಲ್ಲದರ ಮಧ್ಯೆ ಚಿತ್ರವನ್ನು ಕೆಜಿಎಫ್, ಕಾಂತಾರ ಚಿತ್ರಗಳ ಗುಂಗಿನಲ್ಲಿಯೇ ನೋಡಲಾಗುತ್ತಿದೆ. ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಮಾಳವಿಕ ಅವಿನಾಶ್, ಅಚ್ಯುತ್ ಕುಮಾರ್ ಸೇರಿದಂತೆ ಘಟಾನುಘಟಿಗಳು ಚಿತ್ರದಲ್ಲಿ ನಟಿಸಿದ್ದಾರೆ.



