ಪ್ರಣಯ ರಾಜ ಶ್ರೀನಾಥ್, ಸುಂದರ್ ರಾಜ್, ಪ್ರಮೀಳಾ ಜೊಷಾಯ್, ಪದ್ಮಾ ವಾಸಂತಿ.. ಒಂದು ಕಾಲದಲ್ಲಿ ಲೀಲಾವತಿ ಜೊತೆ ನಟಿಸಿದ್ದ ಕಲಾವಿದರು. ಈಗ ಲೀಲಾವತಿ ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ. ಅವರನ್ನು ಈ ಎಲ್ಲ ಕಲಾವಿದರು ಹೋಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಎರಡು ತಿಂಗಳು ಹಿಂದೆಯಷ್ಟೇ ನಟಿಯರಾದ ಶ್ರುತಿ ಸೇರಿದಂತೆ ಹಲವರು ಲೀಲಾವತಿ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಇದೀಗ ಶ್ರೀನಾಥ್ ಮತ್ತು ತಂಡ ಲೀಲಾವತಿ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಕೆಲ ಸಮಯ ಕಳೆದಿದೆ. ಹಳೆಯ ದಿನಗಳನ್ನು ಅವರೊಂದಿಗೆ ಮೆಲುಕು ಹಾಕಿದೆ.
ಸಿನಿಮಾ ರಂಗದಿಂದ ದೂರವಾದ ನಂತರ ಲೀಲಾವತಿ ಅವರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಊರಲ್ಲಿ ಆಸ್ಪತ್ರೆ ಕಟ್ಟಿಸಿದ್ದಾರೆ. ಅಲ್ಲದೇ, ರೈತರಿಗೆ ನಾನಾ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಲೀಲಾವತಿ ಅವರ ಜೊತೆ ಪುತ್ರ ವಿನೋದ್ ರಾಜ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ.
ಲೀಲಾವತಿ ಸದ್ಯ ಬೆಂಗಳೂರು ಸಮೀಪದ ಸೋಲದೇವನಹಳ್ಳಿಯಲ್ಲಿ ವಾಸವಾಗಿದ್ದಾರೆ. ಅಲ್ಲಿಯೇ ಅವರ ತೋಟ ಕೂಡ ಇದೆ. ಮೊನ್ನೆಯಷ್ಟೇ ತಮ್ಮ ಚೆನ್ನೈನಲ್ಲಿದ್ದ ಜಮೀನು ಮಾರಿ ಬಂದ ಹಣದಲ್ಲಿ ‘ಡಾ.ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಿದ್ದಾರೆ



