ಕಬ್ಜ ಸಿನಿಮಾ ಬಿಡುಗಡೆಗೂ ಮೊದಲೇ ಭರ್ಜರಿ ಬ್ಯುಸಿನೆಸ್ ಮಾಡಿದೆ. ಕಬ್ಜ ಕ್ರೇಜ್ ಸಖತ್ತಾಗಿಯೇ ಇದೆ. ಮೂರ್ ಮೂರು ಸೂಪರ್ ಸ್ಟಾರ್‍ಗಳಿದ್ದ ಮೇಲೆ ಕ್ರೇಜ್ ಸೃಷ್ಟಿಯಾಗೋದು ಸಹಜ. ಕಬ್ಜ ಸಿನಿಮಾವನ್ನು ಒಟಿಟಿಗೆ ಅಮೇಜಾನ್ ಪ್ರೈಂ ಖರೀದಿ ಮಾಡಿದೆ. ಸ್ಯಾಟಲೈಟ್ ರೈಟ್ಸ್ ಖರೀದಿ ಮಾಡಿರುವುದು ಕಲರ್ಸ್ ಕನ್ನಡ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಸೆಂಚುರಿ ಸ್ಟಾರ್ ಶಿವಣ್ಣ, ಈ ಮೂವರ ಜೊತೆ ಶ್ರೇಯಾ ಸರಣ್. ಜೊತೆಗೆ ಅದ್ಭುತ ಮೇಕಿಂಗ್.. ಟ್ರೆಂಡ್ ಸೃಷ್ಟಿಸೋ ಸಾಂಗುಗಳು.. ಇವೆಲ್ಲವೂ ಇದ್ದ ಕಾರಣಕ್ಕೆ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗೆ ಸಿಕ್ಕಿದ್ದು ಪ್ರೇಕ್ಷಕರು ಮತ್ತು ಸೆಲಬ್ರಿಟಿಗಳ ಅದ್ಭುತ ಪ್ರತಿಕ್ರಿಯೆ. ಕಬ್ಜ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕಬೀರ್ ದುಹಾನ್ ಸಿಂಗ್, ಪ್ರಮೋದ್ ಶೆಟ್ಟಿ, ನವಾಬ್ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್, ನಿರ್ದೇಶಕ ರಾಕೇಶ್ ರೋಷನ್, ನಟ ಮನೋಜ್ ಬಾಜಪೇಯಿ, ನಟ ಶ್ರೇಯಸ್ ತಲ್ಪಾಡೆ, ಕಶ್ಮೀರಾ ಶಾ, ರೋನಿತ್ ರಾಯ್, ನಿರ್ದೇಶಕ ಮಧುರ್ ಭಂಡಾರ್ಕರ್, ಮೀರಾ ಚೋಪ್ರಾ, ಕುನಾಲ್ ಕೋಹ್ಲಿ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಸೋಷಿಯಲ್ ಮೀಡಿಯಾದಲ್ಲಿ ‘ಕಬ್ಜ’ ಟ್ರೇಲರ್ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ‘ಕಬ್ಜ’ ಚಿತ್ರವನ್ನ ತೆರೆಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವುದಾಗಿ ತಾರೆಯರು ತಿಳಿಸಿದ್ದಾರೆ.




ಅಂದಹಾಗೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾಗುವುದಕ್ಕೂ ಮೊದಲು 200 ಕೋಟಿಗೂ ಹೆಚ್ಚು ಬ್ಯುಸಿನೆಸ್ ಮಾಡಿತ್ತು. ಕೆಜಿಎಫ್ ರೆಕಾರ್ಡ್ ಬ್ರೇಕ್ ಮಾಡೋಕೆ ಆಗಿಲ್ಲವಾದರೂ ಆ ದಾಖಲೆಯ ಸನಿಹಕ್ಕೆ ಕಬ್ಜ ರೀಚ್ ಆಗಿದೆ.



