ಉಪೇಂದ್ರ ಸ್ವಾತಂತ್ರ್ಯ ಹೋರಾಟಗಾರ ಮತ್ತು ಭೂಗತ ಲೋಕದ ಡಾನ್. ನಡುವೆ ಪೊಲೀಸ್ ಡ್ರೆಸ್ಸಿನಲ್ಲೂ ಕಾಣಿಸ್ತಾರೆ. ಎರಡೂ ಪಾತ್ರಗಳಲ್ಲಿದ್ದಾರೆ. ಕಿಚ್ಚ ಸುದೀಪ್ ಅವರದ್ದು ಪೊಲೀಸ್ ಆಫೀಸರ್ ಪಾತ್ರ. ಗಿರಿಜಾ ಮೀಸೆಯ ಲುಕ್ಕ ಬೊಂಬಾಟ್. ಶ್ರೇಯಾ ಸರಣ್ ಅಪ್ಪಟ ಮಹಾರಾಣಿಯಂತೆಯೇ ಕಂಗೊಳಿಸುತ್ತಿದ್ದಾರೆ. . ಟ್ರೇಲರ್‍ನ ಆರಂಭದಲ್ಲಿ ಗನ್ ಹಿಡುದು ಹೆಜ್ಜೆಯಿಡುವ ವ್ಯಕ್ತಿಯನ್ನು ತೋರಿಸಿದ್ದಾರೆ. ಅದು ಶಿವಣ್ಣನೇ ಇರಬೇಕು ಎಂಬುದು ಅಭಿಮಾನಿಗಳ ನಂಬಿಕೆ. ಹಾಗಾದರೆ ಶಿವಣ್ಣ ರೋಲ್ ಏನಿರಬಹುದು? ಅರ್ಥವಾಗುತ್ತಿಲ್ಲ. ಟ್ರೇಲರಿನಲ್ಲಿ ಶಿವಣ್ಣ ಅವರನ್ನು ತೋರಿಸಬೇಕಾ ಎಂದು ಕೇಳುವ ಮೂಲಕವೇ ಕಬ್ಜದಲ್ಲಿ ಶಿವಣ್ಣ ಇದ್ದಾರೆಂಬುದನ್ನು ತಿಳಿಸಿದ್ದ ಚಂದ್ರು, ಟ್ರೇಲರಿನಲ್ಲಿ ಮಾತ್ರ ಗುಮ್ಮ ಬಿಟ್ಟಿದ್ದಾರೆ. ಶಿವರಾಜ್ ಕುಮಾರ್ ಪಾತ್ರದ ರಹಸ್ಯವನ್ನು ಹಾಗೇ ಉಳಿಸಿದ್ದಾರೆ.
ಒಂದೊಂದು ದೃಶ್ಯದಲ್ಲೂ ಕ್ಯಾಮೆರಾ ಕೈಚಳಕ ಕಾಣಿಸುತ್ತಿದೆ. ಎಜೆ ಶೆಟ್ಟಿ ವ್ಹಾವ್ ಎನಿಸುತ್ತಾರೆ. ರವಿ ಬಸ್ರೂರು ಹೊಸದೇ ರೀತಿಯ ಮ್ಯಾಜಿಕ್ ಮಾಡಿದ್ದಾರೆ. ಮುರಳಿ ಶರ್ಮಾ, ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಪೊಸಾನಿ ಕೃಷ್ಣ ಮುರಳಿ, ಸುಧಾ, ಕಬೀರ್ ದುಹಾನ್ ಸಿಂಗ್, ಜಾನ್ ಕೊಕ್ಕೆನ್, ದೇವ್ ಗಿಲ್, ಕಾಮರಾಜನ್, ದನೀಶ್ ಅಖ್ತರ್, ಲಕ್ಕಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ತಾಹಾ ಶಾ, ಅವಿನಾಶ್, ಸುನಿಲ್ ಪಟ್ನಾಯಕ್, ಅನೂಪ್, ಬಿ ಸುರೇಶ್, ಅಶ್ವತ್ಥ್ ನೀನಾಸಂ, ಸಂದೀಪ್ ಮಲಾನಿ, ಮಾಸ್ಟರ್ ಚಿರು ಹಾಗೂ ಮಾಸ್ಟರ್ ಜ್ಞಾನ್ ಕಬ್ಜ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ಬ್ರಿಟಿಷ್ ಕಾಲದ ಕಥೆ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ನಂತರದ ಕಥೆ ಇರುವ ಸೂಚನೆ ನೀಡಿದೆ ಟ್ರೇಲರ್. ದೇಶಪ್ರೇಮ, ವ್ಯವಸ್ಥೆಯ ವಿರುದ್ಧ ಹೋರಾಟ, ಪಾತಕ ಲೋಕ, ತಾಯಿ ಸೆಂಟಿಮೆಂಟ್, ಬ್ರದರ್ ಸೆಂಟಿಮೆಂಟ್ ಎಲ್ಲವನ್ನೂ ‘ಕಬ್ಜ’ದಲ್ಲಿ ಆರ್.ಚಂದ್ರು ಕಟ್ಟಿಕೊಟ್ಟಿದ್ದಾರೆ. ಙ್ರಲ್ ಕೊಡುತ್ತಿರುವುದು ಉಪೇಂದ್ರ ಕೂಡಾ ಒಂದು ಕಡೆ ಪೊಲೀಸ್ ಆಫೀಸರ್ ಗೆಟಪ್‍ನಲ್ಲಿರುವುದುಅಂದಹಾಗೆ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಟ್ರೇಲರ್ ರಿಲೀಸ್ ಮಾಡಿ ಚಿತ್ರಕ್ಕೆ ಬೊಂಬಾಟ್ ಕ್ರೇಜ್ ಸೃಷ್ಟಿಸಿದ್ದಾರೆ. ಟ್ರೇಲರ್ ನೋಡಿದವರೆಲ್ಲ ಹ್ಯಾಪಿ..ಹ್ಯಾಪಿ.. ಮಾರ್ಚ್ 17ಕ್ಕೆ ಜಗತ್ತಿನಾದ್ಯಂತ ಸುಮಾರು 4000 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.



