ಲವ್ ಬಡ್ರ್ಸ್. ಈ ಸಿನಿಮಾ ಶುರುವಾದಾಗ ಇದ್ದ ನಿರೀಕ್ಷೆಗಳೇ ಬೇರೆ. ಆಗಿದ್ದೇ ಬೇರೆ. ಸಿನಿಮಾ ಶುರವಾತಿನ ಸಮಯದಲ್ಲಿ ನಿರ್ಮಾಪಕ ಕಡ್ಡಿಪುಡಿ ಚಂದ್ರು, ನಿರ್ದೇಶಕ ಪಿ.ಸಿ.ಶೇಖರ್ ಅವರನ್ನು ಹೇಗೆಲ್ಲ ಹೊಗಳಿದ್ದರು ಅನ್ನೋದು ಗೊತ್ತಿದೆ. ಸಿನಿಮಾ ರಿಲೀಸ್ ಹೊತ್ತಿನಲ್ಲೂ ಅನ್ಯೋನ್ಯವಾಗಿಯೇ ಇದ್ದರು ಡೈರೆಕ್ಟರ್ ಮತ್ತು ಪ್ರೊಡ್ಯೂಸರ್. ಆದರೆ ಸಿನಿಮ ರಿಲೀಸ್ ಆಗಿ ಮುಗಿದಿದ್ದೇ ತಡ.. ಇಬ್ಬರೂ ಪರಸ್ಪರ ಎದುರಾಳಿಗಳಾಗಿ ನಿಂತಿದ್ದಾರೆ.
ಲವ್ ಬಡ್ರ್ಸ್. ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಪ್ರಧಾನ ಪಾತ್ರದಲ್ಲಿದ್ದ ಸಿನಿಮಾ. ಸಂಯುಕ್ತ ಹೊರನಾಡು ಕೂಡಾ ನಟಿಸಿದ್ದ ಚಿತ್ರ. ಸಿನಿಮಾ ನೋಡಿದವರಿಗೆ ಕಥೆ ಇಷ್ಟವಾಯಿತೇನೋ ಹೌದು, ಆದರೆ ಲಾಭವಾಗಲಿಲ್ಲ. ಏಕೆಂದರೆ ನೋಡಿದವರ ಸಂಖ್ಯೆಯೇ ಕಡಿಮೆ ಇತ್ತು. ಲವ್ ಮಾಕ್`ಟೇಲ್ ಸಿರೀಸ್ ಬಿಟ್ಟರೆ ಕೃಷ್ಣ-ಮಿಲನ ಜೋಡಿಯ ಯಾವ ಚಿತ್ರವೂ ಸಕ್ಸಸ್ ಆಗಿಲ್ಲ. ಮಿ.ಬ್ಯಾಚುಲರ್ ಕಥೆಯೂ ಅಷ್ಟೆ, ಲವ್ ಬಡ್ರ್ಸ್ ಕಥೆಯೂ ಅಷ್ಟೆ, ಆದರೆ ಸಿನಿಮಾ ಚೆನ್ನಾಗಿಯೇ ಇತ್ತು ಅನ್ನೋದರಲ್ಲಿ ಎರಡು ಮಾತಿರಲಿಲ್ಲ. ಕಥೆ ಇದಲ್ಲ, ನಿರ್ಮಾಪಕ ಕಡ್ಡಿಪುಡಿ ನಿರ್ದೇಶಕರಿಗೆ ಒಪ್ಪಿಕೊಂಡಿದ್ದ ಸಂಭಾವನೆಯನ್ನು ಕೊಟ್ಟಿಲ್ಲ. ಅಷ್ಟೇ ಅಲ್ಲ ನಿರ್ದೇಶಕರ ನಕಲಿ ಸಹಿ ಬಳಸಿ ವಂಚಿಸಿದ್ದಾರೆ ಎನ್ನುವ ಆರೋಪ ಪಿ.ಸಿ.ಶೇಖರ್ ಅವರದ್ದು.
ಕಡ್ಡಿಪುಡಿ ಚಿತ್ರದ ಮೂಲಕ ಕಡ್ಡಿಪುಡಿ ಚಂದ್ರು ಎಂದೇ ಖ್ಯಾತರಾದ ನಿರ್ಮಾಪಕ ತಮ್ಮ ಚಿತ್ರದ ನಿರ್ದೇಶಕರಿಗೆ ಸಂಭಾವನೆಯನ್ನೇ ಕೊಡದೆ ವಂಚಿಸಿದರಾ.. ಏಕೆಂದರೆ ನಿರ್ದೇಶಕ ಪಿ.ಸಿ.ಶೇಖರ್, ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ಕಂಪ್ಲೇಂಟ್ ಕೊಟ್ಟು ದೂರು ದಾಖಲಿಸಿದ್ದಾರೆ. ಎಫ್‍ಐಆರ್ ಆಗಿದೆ.
ಇತ್ತೀಚೆಗೆ ಕಡ್ಡಿಪುಡಿ ಚಂದ್ರು ಬ್ಯಾನರಿನಲ್ಲಿ ಶೇಖರ್ ಲವ್ ಬಡ್ರ್ಸ್ ಅನ್ನೋ ಸಿನಿಮಾ ಮಾಡಿದ್ದರು. ಲವ್ ಬಡ್ರ್ಸ್ ಚಿತ್ರಕ್ಕೆ 20 ಲಕ್ಷ ಸಂಭಾವನೆ ಮಾತನಾಡಿದ್ದರಂತೆ ಚಂದ್ರು. ಎಡಿಟಿಂಗ್ ಮಾಡೋಕೆ 5 ಲಕ್ಷ ರೂ. ಒಪ್ಪಂದವಾಗಿತ್ತಂತೆ. ಆದರೆ ಇದುವರೆಗೆ ಪಿ.ಸಿ.ಶೇಖರ್ ಅವರಿಗೆ ತಲುಪಿರುವುದು ಕೇವಲ 6.5 ಲಕ್ಷ ಮಾತ್ರ. “ಕೊನೆ ದಿನ ಡಬ್ಬಿಂಗ್ ಟೈಮ್ನಲ್ಲಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರಿಗೆ ಗೊತ್ತಾಗಿ, ಅವರು ಫೋರ್ಸ್ ಮಾಡಿದ ಮೇಲೆ ಎರಡು ಲಕ್ಷ ಕೊಟ್ಟರು. ಆಗ 6.5 ಆಯ್ತು. ಇದು ಬಿಟ್ಟರೆ 18.5 ಲಕ್ಷ ಇನ್ನೂ ಉಳಿಸಿಕೊಂಡಿದ್ದರು. ಹಾರ್ಡ್ ಡಿಸ್ಕ್ ತೆಗೆದುಕೊಳ್ಳುವವರೆಗೂ ಒಂದು ಮಾತು ಇತ್ತು. ಹಾರ್ಡ್ ಡಿಸ್ಕ್ ಕೊಟ್ಟಾದ್ಮೇಲೆ ಮಾತುಗಳೆಲ್ಲಾ ಬದಲಾಗುವುದಕ್ಕೆ ಶುರುವಾಯ್ತು.” ಎಂದು ಪಿ ಸಿ ಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಿ

ಈ ವಿವಾದ ಪೊಲೀಸ್ ಸ್ಟೆಷನ್ ಮೆಟ್ಟಿಲು ಏರುತ್ತಿದ್ದಂತೆ ನಿರ್ಮಾಪಕ ಕಡ್ಡಿಪುಡಿ ಚಂದ್ರು ಪ್ರತಿಕ್ರಿಯೆ ನೀಡಿದ್ದಾರೆ. ನಿರ್ದೇಶಕರಿಗೆ ಕೊಡಬೇಕಾದ ಸಂಭಾವನೆಯನ್ನು ಕೊಟ್ಟಿದ್ದೇನೆ. ಅವರ ಧರ್ಮ ಪತ್ನಿ ಹಾಗೂ ಅಣ್ಣನಿಗೂ ಸಂಭಾವನೆ ಕೇಳುತ್ತಿದ್ದಾರೆ. ನಿರ್ಮಾಪಕನಿಗೆ ಕಷ್ಟ ಆಗುತ್ತಿದೆ. ನನಗೆ ಪ್ರಿಂಟು, ಪಬ್ಲಿಸಿಟಿ ಹಣ ಕೂಡ ಬಂದಿಲ್ಲ” ಎಂದು ಕಡ್ಡಿಪುಡಿ ಚಂದ್ರು ಹೇಳುತ್ತಿದ್ದಾರೆ.
ಅಂದ್ರೆ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಅಷ್ಟೊಂದು ಕೆಟ್ಟದಾಗಿತ್ತಾ..? ಚಿತ್ರಕ್ಕೆ ಹಾಕಿದ ಬಂಡವಾಳವಂತೂ ವಾಪಸ್ ಬಂದಿದೆ. ಚಿತ್ರಕ್ಕೆ ಥಿಯೇಟರಿನಲ್ಲಿ ಅಷ್ಟು ದೊಡ್ಡ ರಿಯಾಕ್ಷನ್ ಮತ್ತು ಕಲೆಕ್ಷನ್ ಸಿಕ್ಕದಿದ್ದರೂ ಚಿತ್ರದ ಟಿವಿ, ಸ್ಯಾಟಲೈಟ್ಸ್, ಆಡಿಯೋ, ಒಟಿಟಿ ಹಕ್ಕುಗಳಿಂದಲೇ ಚಿತ್ರದ ಬಂಡವಾಳವಷ್ಟೇ ಅಲ್ಲ, ಲಾಭವೂ ಸಿಕ್ಕಿದೆ ಎನ್ನುತ್ತಿವೆ ಚಿತ್ರರಂಗದ ಮೂಲಗಳು. ಅಂದಹಾಗೆ ಕಡ್ಡಿಪುಡಿ ಚಂದ್ರು ಅವರು ಈ ರೀತಿ ನಿರ್ದೇಶಕರ ಜೊತೆ ಕಿರಿಕ್ ಮಾಡಿಕೊಳ್ಳೋದು ಗಾಂಧಿನಗರದವರಿಗೆ ಹೊಸದಲ್ಲ. ಇದು ಕೊನೆಯದೂ ಅಲ್ಲ ಎನ್ನುತ್ತಾರೆ ಸ್ಯಾಂಡಲ್ವುಡ್ ಪಂಡಿತರು.



