ಕಾಲೇಜು ಹುಡುಗಿಯ ಪಾತ್ರಕ್ಕೆ ಹೇಳಿ ಮಾಡಿಸಿದಂತಿರುವ ಹುಡುಗಿ ಸಂಯುಕ್ತಾ ಹೆಗ್ಡೆ. ಈಗಿನ ಜನರೇಷನ್`ನ ಯುವತಿಯ ಲುಕ್ ಮತ್ತು ಕಾನ್ಫಿಡೆನ್ಸ್ ಎರಡೂ ಇರುವ ಚೆಲುವೆ. ಅದ್ಭುತ ಎನ್ನಿಸುವ ಫಿಟ್ ನೆಸ್ ಕೂಡಾ ಇದೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ನೀನಿರೇ.. ಸನಿಹ ನೀನಿರೆ.. ಎಂದು ಸಂಚಲನ ಮೂಡಿಸಿದ್ದ ಸಂಯುಕ್ತಾ ಹೆಗ್ಡೆ, ಕಾಲೇಜ್ ಕುಮಾರ ಸೇರಿದಂತೆ ಕೆಲವೇ ಚಿತ್ರಗಳಲ್ಲಿ ನಟಿಸಿದರಾದರೂ, ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾದವರು. ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿಯೂ ದೊಡ್ಡ ಬ್ರೇಕ್ ಸಿಗಲಿಲ್ಲ. ಆದರೆ ಸಖತ್ ಆಕ್ಟಿವ್ ಇರುವ ಸಂಯುಕ್ತಾ ಇದೀಗ ಚಾಲೆಂಜಿಂಗ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಅಗ್ನಿ ಶ್ರೀಧರ್ ಚಿತ್ರಕಥೆ ಸಂಭಾಷಣೆ ಬರೆದಿರುವ ಕ್ರೀಂ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಅವರದ್ದು ಬೀದಿ ವೇಶ್ಯೆಯ ಪಾತ್ರ. ಅಭಿಷೇಕ್ ಬಸಂತ್ ಎಂಬುವವರು ನಿರ್ದೇಶನ ಮಾಡಿರುವ ಕ್ರೀಂ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಅಭಿನಯಕ್ಕೆ ಅಗ್ನಿ ಶ್ರೀಧರ್ ಬೆಕ್ಕಸ ಬೆರಗಾಗಿದ್ದಾರಂತೆ.
ಸಂಯುಕ್ತಾ ಹೆಗ್ಡೆ ಕಿರಿಕ್ ಅಂತೆ, ಕೊಬ್ಬು ಜಾಸ್ತಿಯಂತೆ ಅನ್ನೋ ಆರೋಪಗಳಿಗೆ ನಿರ್ಮಾಪಕರು ಹೇಳೋದೇ ಬೇರೆ. ಅದೆಲ್ಲ ಅಪ್ಪಟ ಸುಳ್ಳು. ಒಂದ್ ದಿನ ಪ್ರಾಬ್ಲಂ ಮಾಡಿಲ್ಲ. ಕಾಲಿಗೆ ಪೆಟ್ಟಾದರೂ ನೋವಿನಲ್ಲಿ ನಟಿಸಿದ್ದಾರೆ ಎಂದಿದ್ದಾರ ನಿರ್ಮಾಪಕ ದೇವೇಂದ್ರ ಡಿ.ಕೆ. ಕೇವಲ ಬೀದಿ ವೇಶ್ಯೆಯರ ಬದುಕಷ್ಟೇ ಚಿತ್ರದ ಕಥೆಯಲ್ಲ. ಹೆಣ್ಣಿನ ನರಬಲಿಯ ಕಥೆಯೂ ಇದೆ. ಬೀದಿ ವೇಶ್ಯೆಯ ಬದುಕು ನರಬಲಿ ಕಥೆಗೆ ಹೊರಳಿದ ನಂತರ ಸಂಯುಕ್ತಾ ಹೆಗ್ಡೆಯವರ ಪಾತ್ರಕ್ಕೆ ಸಿಗುವ ಶಕ್ತಿಯೇ ಬೇರೆ ಎನ್ನುತ್ತಾರೆ ಅಗ್ನಿ ಶ್ರೀಧರ್.
ಚಿತ್ರದಲ್ಲಿ ಸಾಕಷ್ಟು ಕಾಂಟ್ರವರ್ಸಿ ವಿಷಯಗಳೂ ಇವೆ. ಇಬ್ಬರು ನಟಿಯರು ಬೇಡ ಎಂದಿರೋ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ನಟಿಸಿದ್ದಾರೆ. ಚಿತ್ರದ ಪಾತ್ರ ಚೆನ್ನಾಗಿದೆ. ಯಾವ ಚಿತ್ರವೇ ಆಗಲಿ, 100% ಕಷ್ಟಪಟ್ಟೇ ಕೆಲಸ ಮಾಡಿದ್ದೇನೆ. ಡೆಡಿಕೇಷನ್ ಇಟ್ಟುಕೊಂಡು ಕೆಲಸ ಮಾಡಿದ್ದೆನೆ. ಈ ಸಿನಿಮಾ ಶೂಟಿಂಗ್`ನಲ್ಲಿ ಪೆಟ್ಟಾದಾಗ 2 ತಿಂಗಳು ರೆಸ್ಟ್ ಮಾಡುವಂತಾಯಿತು. ನನ್ನ ಜೀವನದಲ್ಲೇ ಅಷ್ಟು ದಿನ ಸುಮ್ಮನೆ ಇದ್ದವಳಲ್ಲ ನಾನು. ಆದರೆ ಚಿತ್ರ ಚೆನ್ನಾಗಿ ಬಂದಿದೆ ಎನ್ನುತ್ತಾರೆ ಸಂಯುಕ್ತಾ ಹೆಗ್ಡೆ.



