ಇದು ವೀಕೆಂಡ್`ನಲ್ಲಿ ಸುತ್ತೋಕೆ ಹೋದ ಹುಡುಗಿ ಹೀರೋಯಿನ್ ಆದ ಕಥೆ. ಅಮ್ಮನ ಜೊತೆ ಸುತ್ತಾಡೋಕೆ ಹೋಗಿದ್ದ ಸಪ್ತಮಿ ಗೌಡ ಯುವ ಚಿತ್ರಕ್ಕೆ ನಾಯಕಿಯಾದ ಕಥೆ. ಕಾಂತಾರ ಚಿತ್ರದಲ್ಲಿ ರಗಡ್ ಲುಕ್`ನಲ್ಲಿಯೇ ರೋಮಾಂಚನ ಹುಟ್ಟಿಸಿದ್ದ ಸಪ್ತಮಿ ಗೌಡ, ಈ ಚಿತ್ರದಲ್ಲಿ ಕಾಲೇಜು ಹುಡುಗಿ. ಹೆಸರು ಗೌರಿ. ಅವರು ಇವರೇನಾ ಎಂದು ಅಚ್ಚರಿ ಹುಟ್ಟಿಸುವಷ್ಟು ಬ್ಯೂಟಿಫುಲ್ಲಾಗಿ ಕಾಣ್ತಿದ್ದಾರೆ ಸಪ್ತಮಿ ಗೌಡ.
ಅದೊಂದು ವೀಕೆಂಡ್. ಅಮ್ಮನ ಜೊತೆ ಹೊರಗೆ ಸುತ್ತಾಡೋಕೆ ಹೋಗಿದ್ದೆ. ಹೊಂಬಾಳೆಯವರಿಗೆ ಫೋನ್ ಬಂತು. ಸ್ವಲ್ಪ ಆಫೀಸಿಗೆ ಬರಬಹುದಾ ಅಂತಾ.. ಅಲ್ಲಿಗೆ ಹೋದರೆ ಯುವ ರಾಜ್ ಕುಮಾರ್ ಜೊತೆ ಫೋಟೋಶೂಟ್ ಮಾಡಿಸಿದ್ರು. ಆಗ ಕೂಡಾ ಅವರು ಯಾಕೆ ಫೋಟೋಶೂಟ್ ಮಾಡಿಸ್ತಿದ್ದಾರೆ ಅನ್ನೋದು ಗೊತ್ತಿರಲಿಲ್ಲ. ಎಲ್ಲ ಆದ ಮೇಲೆ ನೀವೇ ಚಿತ್ರಕ್ಕೆ ಹೀರೋಯಿನ್ ಎಂದರು.. ಹೀಗೆ ಹೇಳಿಕೊಳ್ಳೋ ಸಪ್ತಮಿ ಗೌಡ, ಅದೊಂದು ಥ್ರಿಲ್ಲಿಂಗ್, ಸರ್‍ಪ್ರೈಸ್ ಆಗಿತ್ತು ಎಂದು ನೆನಪಿಸಿಕೊಳ್ತಾರೆ. ಚಿತ್ರೀಕರಣದ ವೇಳೆ ಕಾಲೇಜು ದಿನಗಳು ನೆನಪಾದವಂತೆ. ಯವ ಚಿತ್ರದ ಮೇಲೆ ಇಡೀ ಚಿತ್ರರಂಗವೇ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಅಂತಹ ಚಿತ್ರಕೆಕ ನಾಯಕಿಯಾಗಿರುವುದು ಥ್ರಿಲ್ ಕೊಟ್ಟಿದೆ ಎನ್ನುವ ಸಪ್ತಮಿಗೆ, ಇದು ಕಾಂತಾರಕ್ಕಿಂತ ವಿಭಿನ್ನವಾದ ಪಾತ್ರ ಎನ್ನುವುದು ಖುಷಿ ಕೊಟ್ಟಿದೆ.
ಹೊಂಬಾಳೆಯವರ ಯುವ ಚಿತ್ರದ ಮೂಲಕ ಯುವ ರಾಜ್ ಕುಮಾರ್ ಲಾಂಚ್ ಆಗುತ್ತಿದ್ದಾರೆ. ಸಪ್ತಮಿಗೌಡ ನಾಯಕಿಯಾಗಿರುವ ಚಿತ್ರಕ್ಕೆ ಸಂತೋಷ್ ಆನಂದರಾಮ್ ನಿರ್ದೇಶಕರು. ಡಿ.22ಕ್ಕೆ ಯುವ ಚಿತ್ರ ರಿಲೀಸ್ ಆಗಲಿದೆ. ಇತ್ತೀಚೆಗೆ ತಾನೇ ಹುಟ್ಟುಹಬ್ಬ ಆಚರಿಸಿಕೊಂಡ ಸಪ್ತಮಿ ಗೌಡ, ಅಪ್ಪು ಸಮಾಧಿಗೆ ಭೇಟಿ ಕೊಟ್ಟು, ಕಣ್ಮುಚ್ಚಿ ಪ್ರಾರ್ಥಿಸಿದ ಸಪ್ತಮಿ, ಸಮಾಧಿ ಭೇಟಿಗೆ ಬಂದಿದ್ದವರಿಗೆಲ್ಲ ಸೆಲ್ಫಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿಯೇ ಸಪ್ತಮಿ ಗೌಡ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಕಾಂತಾರದ ಲೀಲ ಇವರೇನಾ ಎಂದು ಅಚ್ಚರಿಪಡುವಷ್ಟು ಮುದ್ದು ಮುದ್ದಾಗಿ ಕಾಣಿಸ್ತಿದ್ದಾರೆ ಸಪ್ತಮಿ ಗೌಡ.



