ಸಾಮಾನ್ಯವಾಗಿ ಹೀರೋಗಳಲ್ಲಿ ಈ ಅಂಡರ್ ಸ್ಟಾಂಡಿಂಗ್ ಇದೆ. ಒಬ್ಬರ ಸಿನಿಮಾಗೆ ಪ್ರಾಬ್ಲಂ ಆದರೆ ಇನ್ನೊಬ್ಬ ಹೀರೋ ಜೊತೆಗೆ ನಿಲುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ನಾಯಕಿಯರ ವಿಷಯದಲ್ಲಿ ಹಾಗಲ್ಲ. ಸಿನಿಮಾ ರಂಗದಲ್ಲಿ ಜನಪ್ರಿಯತೆಯ ತುತ್ತತುದಿಯೇರಿದ್ದವರು ಬೀಳುವುದೂ ಹೊಸದೇನಲ್ಲ. ರಾಗಿಣಿ ದ್ವಿವೇದಿ ಅಂತಹವರಲ್ಲಿ ಒಬ್ಬರು. ತುಪ್ಪದ ಹುಡುಗಿ ಎಂದೇ ಫೇಮಸ್ ಆಗಿರುವ ರಾಗಿಣಿಗೆ, ಇತ್ತೀಚೆಗೆ ನಾಯಕಿಯರಿಗೆ ಅಪರೂಪವೇ ಆಗಿರುವ ಅಭಿಮಾನಿ ಸಂಘಗಳಿವೆ. ಆದರೆ ರಾಗಿಣಿಯವರಿಗೆ ಇದ್ದಕ್ಕಿದ್ದಂತೆ ಶಾಕ್ ಕೊಟ್ಟಿದ್ದು ಡ್ರಗ್ಸ್ ಕೇಸ್. ಮಾದಕ ವ್ಯಸನ ಕೇಸಿನಲ್ಲಿ 90 ದಿನ ಜೈಲು ವಾಸ ಅನುಭವಿಸಿರುವ ರಾಗಿಣಿ, ಈಗ ಸಿನಿಮಾಗಳಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ. ಜೈಲು ದಿನಗಳ ಬಗ್ಗೆ ಎಲ್ಲಿಯೂ ಮಾತನಾಡದೆ ಮೌನವಾಗಿದ್ದ ರಾಗಿಣಿ, ಇತ್ತೀಚೆಗೆ ಜೈಲು ದಿನಗಳು ಸೇರಿದಂತೆ ಆ ದಿನಗಳಲ್ಲಿ ಅನುಭವಿಸಿದ್ದ ಸಂಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.
ನಾನು ತುಂಬಾ ಸೆನ್ಸಿಟಿವ್ ಮತ್ತು ಒಂಟಿ ವ್ಯಕ್ತಿ. ನಾನು ಅನುಭವಿಸಿರುವ ಕಷ್ಟಗಳಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಕೆಲವೊಮ್ಮೆ ಎಲ್ಲವನ್ನೂ ಬಿಟ್ಟು ಬಿಡೋಣ ಅನಿಸಿದೆ. ಒಬ್ಬಳೆ ಜೋರಾಗಿ ಅತ್ತಿದ್ದೇನೆ. ವೈದ್ಯರೊಂದಿಗೆ ಮಾತನಾಡಿದ್ದೇನೆ. ನನಗೆ ನಾನೇ ಹೀಲಿಂಗ್ ಮಾಡಿಕೊಂಡು ಗುರುಗಳನ್ನು ಭೇಟಿ ಮಾಡಿರುವೆ. ಈ ರೀತಿ ಸಮಯ ಎದುರಾದರೆ ನಾವು ನಮ್ಮ ಜನರ ಜೊತೆ ಮಾತನಾಡಬೇಕು. ಜನರ ಜೊತೆ ಮಾತನಾಡಿದರೆ ಮಾತ್ರ ನಮ್ಮ ನೋವು ಅರ್ಥವಾಗುತ್ತೆ. ಭಾರವೂ ಇಳಿಯುತ್ತೆ ಎಂದಿದ್ದಾ ರಾಗಿಣಿ.
ನಮಗೆ ನಾವು ಹೆಚ್ಚಿನ ಪ್ರಮುಖ್ಯತೆ ನೀಡುವ ಬದಲು ಮತ್ತೊಬ್ಬರಿಗೆ ಪ್ರಮುಖ್ಯತೆ ನೀಡುತ್ತೇವೆ. ನಮ್ಮನ್ನು ನಾನು ಮೊದಲು ಪ್ರೀತಿಸಬೇಕು ನಮ್ಮನ್ನು ನಾವು ಕೇರ್ ಮಾಡಬೇಕು. ಮಹಿಳೆಯರು ಮತ್ತೊಮ್ಮೆ ಮಹಿಳೆ ಪರವಾಗಿ ನಿಲ್ಲಬೇಕು. ಮೀಡಿಯಾ ಗ್ಯಾದರಿಂಗ್ನಲ್ಲಿ ನೋಡಿದರೆ ಒಬ್ಬ ನಾಯಕನ ಪರವಾಗಿ ಇನ್ನಿತರ ನಾಯಕರು ನಿಲ್ಲುವುದನ್ನು ನೋಡಬಹುದು. ಆದರೆ ನಾಯಕಿಯರು ಹಾಗೆ ಮಾಡುವುದನ್ನು ನಾನು ನೋಡಿಲ್ಲ. ಒಂದು ಸಲ ಒಬ್ಬರ ಪರವಾಗಿ ನಿಂತುಕೊಂಡರೆ ಖಂಡಿತಾ ಬದಲಾವಣೆ ಕಾಣಬಹುದು ಎನ್ನುವುದು ರಾಗಿಣಿ ಮಾತು.
ಇತ್ತೀಚೆಗೆ ಅದರಲ್ಲಿಯೂ ಬದಲಾವಣೆಗಳಾಗಿವೆ. ತಮನ್ನಾಗೆ ಸಮಂತಾ, ಸಮಂತಾಗೆ ತಮನ್ನಾ, ದೀಪಿಕಾ ಪಡುಕೋಣೆಗೆ ಕತ್ರಿನಾ ಕೈಫ್, ಆಲಿಯಾ ಭಟ್ ಪರ ದೀಪಿಕಾ ಪಡುಕೋಣೆ.. ಹೀಗೆ.. ಅಲ್ಲೊಂದು ಇಲ್ಲೊಂದು ಶುರುವಾಗಿವೆ. ನಾಯಕಿಯರೂ ಈಗ ಒಂಟಿಯಲ್ಲ. ಆದರೆ ಸ್ಯಾಂಡಲ್`ವುಡ್‍ನಲ್ಲಿ ಮಾತ್ರ ಅದಿನ್ನೂ ಆಗಿಲ್ಲ.
ಅಂದಹಾಗೆ ರಾಗಿಣಿ ಜೈಲಿನಲ್ಲಿದ್ದ ದಿನಗಳಲ್ಲಿ ಪ್ರತಿದಿನವೂ ಪುಸ್ತಕ ಬರೆದಿದ್ದಾರಂತೆ. 90 ದಿನಗಳ ಕಾಲ ಕಸ್ಟಡಿಯಲ್ಲಿ ಇರುವಾಗ ದೊಡ್ಡ ಪಾಠ ಕಲಿತಿರುವೆ. ಆ ರೀತಿ ಕಷ್ಟ ನನ್ನ ಶತ್ರುಗೂ ಬೇಡ. ಹಾಗಂತ ಸೈಲೆಂಟ್ ಆಗಿ ಕೂರುವ ವ್ಯಕ್ತಿ ನಾನಲ್ಲ. 90 ದಿನಗಳ ಕಾಲ ಬರೆಯುತ್ತಿದ್ದೆ. ಅದೊಂದು ರೀತಿ ಥೆರಪಿ. ಇದನ್ನು ಪುಸ್ತಕವಾಗಿ ಕನ್ವರ್ಟ್ ಮಾಡಬೇಕು ಅನ್ನೋದು ನನ್ನ ಅಸೆ ಅಗದೆ. ಓದಲು ತುಂಬಾ ಇಂಟ್ರೆಸ್ಟಿಂಗ್ ಆಗಿರುತ್ತದೆ ಏಕೆಂದರೆ 100% ಸತ್ಯ ಹೇಳುತ್ತದೆ. ನಾನು ಇಷ್ಟು ದಿನಗಳ ಕಾಲ ಮೌನವಾಗಿದ್ದೆ ಅಂದ್ರೆ ಅದಕ್ಕೊಂದು ಕಾರಣ ಇದೆ ಶೀಘ್ರದಲ್ಲಿ ಕಾರಣ ತಿಳಿಯಲಿದೆ ಎಂದು ರಾಗಿಣಿ ಹೇಳಿದ್ದಾರೆ.



