ಕೈನಾಗೆ ಮೈಕ್ ಇದ್ರೆ ನಾನ್ ಸ್ಟಾಪು ಭಾಷಣ..
ಅಧ್ಯಕ್ಷ ಚಿತ್ರದ ಟೈಟಲ್ ಟ್ರಾಕ್ ಆಗ ಮೋಡಿ ಮಾಡಿತ್ತು. ಅಧ್ಯಕ್ಷ ಚಿತ್ರ ಬಂದಿದ್ದು 2014ರಲ್ಲಿ. ಆ ಚಿತ್ರ ಶರಣ್ ಕೆರಿಯರ್`ಗೆ ದೊಡ್ಡ ಮೈಲೇಜ್ ಕೊಟ್ಟ ಸಿನಿಮಾ. ಅದಾದ ಮೇಲೆ 2019ರಲ್ಲಿ ಶರಣ್ ಹೀರೋ ಆಗಿ ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ಮಾಡಿದ್ದರು. ಇದೀಗ ಉಪಾಧ್ಯಕ್ಷ ಬರುತ್ತಿದೆ. ಅಧ್ಯಕ್ಷ ಚಿತ್ರದ ಮೂಲಕ ಚಿಕ್ಕಣ್ಣ ಕೂಡಾ ಉಪಾಧ್ಯಕ್ಷರಾಗಿಯೇ ಫೇಮಸ್ ಆದವರು. ಅವರನ್ನೇ ಹೀರೋ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ ಅನಿಲ್ ಕುಮಾರ್.


ನಿರ್ಮಾಪಕ ಹೆಬ್ಬುಲಿ, ರಾಬರ್ಟ್ ಖ್ಯಾತಿಯ ಉಮಾಪತಿ ಶ್ರೀನಿವಾಸ್ ಅವರದ್ದು.
ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್, ಪುನೀತ್ ರಾಜಕುಮಾರ್, ರವಿಚಂದ್ರನ್, ಶಿವಣ್ಣ, ಉಪೇಂದ್ರ, ಸುದೀಪ್, ಧ್ರುವ ಸರ್ಜಾ, ಯಶ್.. ಹೀಗೆ ಎಲ್ಲರದ್ದೂ ಒಂದೊಂದು ಡೈಲಾಗ್.. ಮರೆಯಲಾಗದ ಮಾತುಗಳ ಝಲಕ್ಕಿನ ಜೊತೆಯಲ್ಲೇ ಕುಣಿಯತ್ತಾನೆ ಉಪಾಧ್ಯಕ್ಷ. ಡಾ.ರಾಜ್ ಅವರ ಸ್ಮರಣೆಯೊಂದಿಗೆ ಶುರುವಾಗುವ ಹಾಡು ಯಶ್ ಅವರ ದಿಸ್ ಈಸ್ ಜಸ್ಟ್ ಬಿಗಿನಿಂಗ್ ಎಂಬ ಡೈಲಾಗ್ ಜೊತೆ ಮುಗಿಯುತ್ತದೆ.




ಚಿತ್ರದಲ್ಲಿ ಚಿಕ್ಕಣ್ಣ ಸೋಲೋ ಹೀರೋ ಆಗಿ ನಟಿಸಿದ್ದಾರೆ. ಹಾಗಂತ ಬಿಲ್ಡಪ್ ಎಲ್ಲ ಇಲ್ಲ. ಖುದ್ದು ಯಶ್ ಅವರೂ ಕಥೆಯನ್ನೊಮ್ಮೆ ನೋಡಿ ಯೆಸ್ ಎಂದಿದ್ದಾರಂತೆ. ನಿರ್ದೇಶಕ ಅನಿಲ್ ಕುಮಾರ್ ಅವರ ಕಥೆಯಲ್ಲಿ ಕಾಮಿಡಿ ಪಕ್ಕಾ. ಉಮಾಪತಿ ಶ್ರೀನಿವಾಸ್, ಸ್ಮಿತಾ ಉಮಾಪತಿ ನಿರ್ಮಾಣದ ಚಿತ್ರವಿದು. ಚಿಕ್ಕಣ್ಣ ಎದುರು ಮಲೈಕಾ ವಸುಪಾಲ್ ನಾಯಕಿಯಾಗಿದ್ದಾರೆ.



