ಮೀನಾ ಗರ್ಭಿಣಿಯಾಗಿದ್ದಾರಂತೆ. ಗಂಡ ಸತ್ತ ಮೇಲೆ ತಾಯಿಯಾಗುತ್ತಿದ್ದಾರಂತೆ. ತಂದೆ ಯಾರು ಗೊತ್ತಾ..? ಮೀನಾ-ಧನುಷ್ ಮದುವೆಯಾಗುತ್ತಿದ್ದಾರಂತೆ. ಅಲ್ಲವಂತೆ.. ಇಂಡಸ್ಟ್ರಿಯಲಿಸ್ಟ್ ಜೊತೆ ಮದುವೆ ಆಗುತ್ತಿದ್ದಾರಂತೆ. ಅವರೂ ಅಲ್ಲವಂತೆ.. ಚಿತ್ರರಂಗದ ಖ್ಯಾತ ನಿರ್ಮಾಪಕರ ಜೊತೆ ಮದುವೆಯಾಗುತ್ತಿದ್ದಾರಂತೆ…ಇತ್ತೀಚೆಗೆ ನಟಿ ಮೀನಾ ಬಗ್ಗೆ ಇತ್ತೀಚೆಗೆ ಹಬ್ಬಿದಷ್ಟು ಸುಳ್ಸುದ್ದಿಗಳು ಇನ್ಯಾವ ನಟಿಯ ಬಗ್ಗೆಯೂ ಹಬ್ಬಿಲ್ಲವೇನೋ.. ತಮಿಳಿನ ಒಬ್ಬ ನಟ ಮೀನಾ ಅವರ ಬಗ್ಗೆ ಓಪನ್ ಆಗಿಯೇ ಸುಳ್ಸುದ್ದಿ ಹರಿಬಿಟ್ಟಿದ್ದ. ಮೀನಾ ಮತ್ತು ಧನುಷ್ ಮದುವೆಯಾಗುತ್ತಿದ್ದಾರೆ ಎಂದೆಲ್ಲ ಹೇಳಿದ್ದ. ಇತ್ತೀಚೆಗೆ ಮೀನಾ ಗರ್ಭಿಣಿಯಾಗಿದ್ದಾರೆ ಎಂದೆಲ್ಲ ಸುದ್ದಿ ಹಬ್ಬಿತ್ತು. ಮೀನಾ ಅವರ ಪತಿ ನಿಧನರಾದ ನಂತರ ಮೀನಾ ಸುಳ್ ಸುದ್ದಿ ಸೃಷ್ಟಿಕರ್ತರ ಕಣ್ಣಲ್ಲಿ ಭಯಂಕರ ಸುದ್ದಿಯ ವಸ್ತುವಾಗಿದ್ದರು. ಇದೆಲ್ಲದರ ಬಗ್ಗೆ ಮೀನಾ ಅವರ ಮಗಳು ನೈನಿಕಾ ಮಾತನಾಡಿದ್ದಾಳೆ. ಅದೂ ರಜನಿಕಾಂತ್ ಇದ್ದ ವೇದಿಕೆಯಲ್ಲಿ. ಮೀನಾ ಮಗಳ ಮಾತಿಗೆ ಭಾವುಕರಾದ ರಜನಿಕಾಂತ್ ಕಣ್ಣೀರಿಟ್ಟಿದ್ದಾರೆ.
ಹೊರಗಡೆ ಸಿನಿಮಾ ನಟಿಯಾದರೂ ಕೂಡ ನೀನು ಮನೆಗೆ ಬಂದರೆ ನನ್ನ ತಾಯಿ ಅಷ್ಟೇ. ಒಮ್ಮೆ ಮಾಲ್ನಲ್ಲಿ ನಿನಗೆ ಹೇಳದೆ ಸುತ್ತಾಡಿದ್ದೆ, ಆಗ ನೀನು ತುಂಬ ಹೆದರಿದ್ದೆ. ಈ ವಿಷಯಕ್ಕೆ ನಾನು ನಿನಗೆ ಕ್ಷಮೆ ಕೇಳ್ತೀನಿ ಅಂತ ಅಂದುಕೊಳ್ಳಬೇಡ. ಇದೆಲ್ಲ ನನ್ನ ಡ್ರಾಮಾ. ನನ್ನ ಅಮ್ಮನ ಕಾಲದಲ್ಲಿ ನಾಟಕ, ಗಾಸಿಪ್ ಏನೂ ಇರಲಿಲ್ಲ. ಆದರೆ ನಾನು ಹಾಗಲ್ಲ. ನನ್ನ ತಾಯಿ ತುಂಬ ಚೆನ್ನಾಗಿ ಓದಿ, ಒಳ್ಳೆಯ ಮಹಿಳೆಯಾಗಿದ್ದಾಳೆ. 40 ವರ್ಷಗಳ ಚಿತ್ರರಂಗದಲ್ಲಿ ಕೆಲಸ ಮಾಡಿರೋದು ಸುಲಭ ಇಲ್ಲ. ನನಗೆ ನಿನ್ನ ಕಾಲೆಳೆಯೋಕೆ ಬರಲ್ಲ, ಆದರೂ ಟ್ರೈ ಮಾಡ್ತೀನಿ” ಎಂದು ನೈನಿಕಾ ಅವರು ಮೀನಾಗೆ ಹೇಳಿದ್ದಾರೆ.
ನಾನು ಜೀವನದಲ್ಲಿ ಕಷ್ಟಪಟ್ಟು ಯಶಸ್ಸು ಪಡೆದು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ತೀನಿ. ಅಪ್ಪ ಹೋದ ಮೇಲೆ ಅಮತುಂಬ ಡಿಪ್ರೆಶನ್ಗೆ ಹೋಗಿದ್ದರು. ಅಮ್ಮನನ್ನು ಹೇಗಾದರೂ ಮಾಡಿ ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಂಡಿದ್ದೇನೆ. ನನ್ನ ತಾಯಿ ಬಗ್ಗೆ ಸಾಕಷ್ಟು ಫೇಕ್ ನ್ಯೂಸ್ ಬಂದಿದೆ. ನನ್ನ ತಾಯಿ ಎರಡನೇ ಬಾರಿ ಗರ್ಭಿಣಿಯಾಗುತ್ತಿದ್ದಾಳೆ ಅಂತ ಕೇಳಿದೆ, ಆದರೆ ಇದು ನಿಜವಲ್ಲ, ಮನಸ್ಸಿಗೆ ನೋವಾಗುವಂತೆ ಮಾತನಾಡಬೇಡಿ. ನನ್ನ ತಾಯಿ ಹೀರೋಯಿನ್ ಆಗಿರಬಹುದು, ಆದರೆ ಅವಳು ನಿಮ್ಮ ರೀತಿ ಮನುಷ್ಯಳು ಎಂದು ನೈನಿಕಾ ಹೇಳಿದ್ದಾರೆ.
ಅಂದಹಾಗೆ ನೈನಿಕಾಗೆ ಅಪ್ಪ-ಅಮ್ಮ ಬಿಟ್ಟರೆ ಅತ್ಯಂತ ಇಷ್ಟವಾಗುವುದು ರಜನಿಕಾಂತ್ ಅಂತೆ. ವೇದಿಕೆಯಲ್ಲಿ ಹೀಗೆಲ್ಲ ಮಾತನಾಡುತ್ತಿರುವಾಗಲೇ ರಜನಿಕಾಂತ್ ಕಣ್ಣೀರು ಹಾಕಿದ್ದಾರೆ. ನಟಿ ಮೀನಾ ಅವರಿಗೆ ಮಗಳು ಈ ಕಾರ್ಯಕ್ರಮಕ್ಕೆ ಹೋಗುವುದು ಗೊತ್ತಿತ್ತಂತೆ. ಆದರೆ ಮಗಳು ಇಷ್ಟೆಲ್ಲ ಮಾತನಾಡಿರುವುದು ಕೇಳಿ ಅವರೂ ಅಚ್ಚರಿಗೊಂಡಿದ್ದಾರೆ. ನನ್ನ ಬಗೆಗಿನ ಗಾಸಿಪ್`ಗಳನ್ನು ಮುಚ್ಚಿಟ್ಟುಕೊಂಡಿಲ್ಲ. ಮನೆಯಲ್ಲಿ ಮಾತನಾಡಿಕೊಳ್ಳುತ್ತೇವೆ. ಅವಳಿಗೂ ನಿಜ ಏನೆಂದು ಗೊತ್ತಿರಬೇಕು ಎಂಬ ಕಾರಣಕ್ಕಷ್ಟೇ. ಆದರೆ ಅವಳು ಇಷ್ಟು ಫೀಲ್ ಆಗಿದ್ದಾಳೆ ಎಂಬುದು ಗೊತ್ತಿರಲಿಲ್ಲ ಎಂದಿದ್ದಾರೆ ನಟಿ ಮೀನಾ.
ಮೀನಾ ಮತ್ತು ಅವರ ಕುಟುಂಬ ಚೆನ್ನಾಗಿಯೇ ಇದೆ. ಪ್ರೀತಿಯಿಂದ ಬದುಕುತ್ತಿದ್ದೆ. ಒಗ್ಗಟ್ಟಾಗಿಯೇ ಇದೆ.



