ದಿನಕರ್ ತೂಗುದೀಪ. ನಿರ್ದೇಶಿಸಿದ್ದು ಕೆಲವೇ ಕೆಲವು ಸಿನಿಮಾ. ನವಗ್ರಹ, ಜೊತೆ ಜೊತೆಯಲಿ, ಸಾರಥಿ ಹಾಗೂ ಲೈಫ್ ಜೊತೆ ಒಂದ್ ಸೆಲ್ಫಿ. ಪ್ರತಿ ಚಿತ್ರದಲ್ಲೂ ವಿಭಿನ್ನತೆ, ವೈವಿದ್ಯತೆ ತೋರಿಸಿದ್ದ ದಿನಕರ್ ಮಾಸ್ ಹಿಟ್ ಕೊಟ್ಟ ನಿರ್ದೇಶಕರೂ ಹೌದು. ತಮ್ಮ ಚಿತ್ರಗಳಲ್ಲಿ ಕ್ಲಾಸ್ ಟಚ್ ಕೊಟ್ಟ ಡೈರೆಕ್ಟರ್ ಕೂಡಾ ಹೌದು.



ಜಯಣ್ಣ-ಭೋಗೇಂದ್ರ ಬ್ಯಾನರ್‍ನ ಚಿತ್ರದ ಟೈಟಲ್ ಲಾಂಚ್‍ಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದವರು ಹೊಂಬಾಳೆಯ ವಿಜಯ್ ಕಿರಗಂದೂರು. ಲೈಫ್ ಜೊತೆ ಒಂದ್ ಸೆಲ್ಫಿ ನಂತರ ದಿನಕರ್ ನಿರ್ದೇಶಿಸುತ್ತಿರುವ ಚಿತ್ರವಿದು. ಕಿಸ್ ಖ್ಯಾತಿಯ ವಿರಾಟ್‍ಗೆ ದೊಡ್ಡ ಅವಕಾಶವಂತೂ ಇದೆ. ಹೀರೋಯಿನ್ ಆಗಿ ಸಂಜನಾ ಆನಂದ್ ಆಯ್ಕೆಯಾಗಿದ್ದು ಶೀಘ್ರದಲ್ಲೇ ಚಿತ್ರೀಕರಣವೂ ಶುರುವಾಗಲಿದೆ. ಅಂದಹಾಗೆ ಇದು ಜಯಣ್ಣ-ಭೋಗೇಂದ್ರ ನಿರ್ಮಾಣದ 23ನೇ ಸಿನಿಮಾ.



