ಧ್ರುವ ಸರ್ಜಾ ಅಭಿಮಾನಿಗಳನ್ನು ಪ್ರೀತಿಸುತ್ತಾರೆ. ಆರಾಧಿಸುತ್ತಾರೆ. ವಿಐಪಿಗಳೆಂದೇ ಗೌರವಿಸುತ್ತಾರೆ. ಇತ್ತೀಚೆಗೆ ಧ್ರುವ ಸರ್ಜಾ ಅವರ ಅಭಿಮಾನಿ ಪೃಥ್ವಿರಾಜ್ ಎಂಬುವವರು ಅಪಘಾತಕ್ಕೀಡಾಗಿದ್ದರು. ಬ್ರೇನ್ ಡೆಡ್ ಸ್ಥಿತಿ ತಲುಪಿದ್ದರು. ಕುಟುಂಬಸ್ಥರು ದೇಹದಾನ ಮಾಡಲು ನಿರ್ಧರಿಸಿದ್ದರು. ಇದೆಲ್ಲದರ ಜೊತೆಗೆ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಪ್ರತಿ ಭಾನುವಾರ ಧ್ರುವ ಸರ್ಜಾರನ್ನು ನೋಡಲು ಮನೆಗೇ ಬರುತ್ತಿದ್ದ ಅಭಿಮಾನಿ ಪೃಥ್ವಿರಾಜ್.


ಮಗನ ಚಿಕಿತ್ಸೆಗಾಗಿ ಹಣವಿಲ್ಲದೆ ಪರದಾಡುತ್ತಿದ್ದ ಪೃಥ್ವಿರಾಜ್ ಅವರ ತಂದೆಯನ್ನು ಗಮನಿಸಿದ ಧ್ರುವ ಸರ್ಜಾ ತಕ್ಷಣ 5 ಲಕ್ಷ ರೂ. ನೆರವು ನೀಡಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವು ನೀಡುವ ಭರವಸೆ ನೀಡಿದ್ದಾರೆ.



