ಇತ್ತೀಚೆಗೆ ತಾನೇ ಈ ಬಗ್ಗೆ ಸ್ಪೆಷಲ್ ಯು ವರದಿ ಮಾಡಿತ್ತು. ಎಲ್ಲರೂ ಕೇವಲ ಚಿಕ್ಕ ನಟನೊಬ್ಬನ ತಲೆತಿರುಕ ಹೇಳಿಕೆಯನ್ನಷ್ಟೇ ಪ್ರಕಟಿಸುತ್ತಿರುವಾಗ ಇದು ಸುಳ್ಳು..ಸುಳ್ಳು..ಸುಳ್ಳು.. ಎಂದು ಹೇಳಿತ್ತು ಸ್ಪೆಷಲ್ ಯು. ಅದು ಈಗ ನಿಜವಾಗಿದೆ. ಖುದ್ದು ನಟಿ ಮೀನಾ ಈ ಬಗ್ಗೆ ಮಾತನಾಡಿದ್ದಾರೆ. ಕಂಪ್ಲೀಟ್ ಸ್ಟೋರಿ ಇದು.


ಈ ಹೇಳಿಕೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮೀನಾ – ಧನುಷ್ ಮದುವೆ ಬಗ್ಗೆ ಗುಲ್ಲೆಬ್ಬಿತ್ತು. ಬೈಲ್ವಾನ್ ರಂಗನಾಥನ್ ಆಡಿರುವ ಮಾತುಗಳು ಇದೀಗ ನಟಿ ಮೀನಾ ಅವರ ಕಿವಿಗೂ ಬಿದ್ದಿದೆ. ಪರಿಣಾಮ, ಎರಡನೇ ಮದುವೆ ಗಾಸಿಪ್ ಬಗ್ಗೆ ನಟಿ ಮೀನಾ ಮೌನ ಮುರಿದಿದ್ದಾರೆ. ಹಬ್ಬಿರುವ ಗಾಸಿಪ್ ಶುದ್ಧ ಸುಳ್ಳು ಎಂದಿದ್ದಾರೆ ನಟಿ ಮೀನಾ.


ಮಗಳು ನೈನಿಕಾಳೊಂದಿಗೆ ಜೀವನ ಸಾಗಿಸುತ್ತಿರುವ ನಟಿ ಮೀನಾ ಈಗ ರೌಡಿ ಬೇಬಿ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ.



