ದೇವೇಗೌಡರು ಯಾವತ್ತಾದರೂ ಸಿನಿಮಾದಲ್ಲಿ ನಟಿಸಿದ್ದಾರಾ..? ಯಡಿಯೂರಪ್ಪನವರ ವಿಷಯ ಬಿಡಿ, ಇತ್ತೀಚೆಗೆ ರಿಲೀಸ್ ಆದ ಚಿತ್ರವೊಂದರಲ್ಲಿ ಯಡಿಯೂರಪ್ಪನವರಾಗಿಯೇ ನಟಿಸಿದ್ದರು! ಈಶ್ವರ್ ಖಂಡ್ರೆಯವರು ಟಿವಿಗೆ ಮುಖ ತೋರಿಸುವುದೇ ಅಪರೂಪ. ಆದರೆ ಈ ಚಿತ್ರದಲ್ಲಿ ನಟಿಸಿದ್ದಾರಂತೆ. ಬಸವರಾಜ ಹೊರಟ್ಟಿಯವರೂ ಅಷ್ಟೆ, ಸಿನಿಮಾದಲ್ಲಿ ನಟಿಸಿರೋದು ಇದೇ ಮೊದಲು. ಹಾಗಂತ ಇದು ಕೇವಲ ನಟನೆ ಅಲ್ಲ. ಕಥೆ ಬ್ಯಾರೇನ ಐತಿ..


ಈ ಚಿತ್ರಕ್ಕೆ ಸೋನು ಸೂದ್ ಹೀರೋ. ಸುದೀಪ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಷ್ಟೆಲ್ಲ ದೊಡ್ಡ ದೊಡ್ಡವರನ್ನು ಹಾಕಿಕೊಂಡ ಸಿನಿಮಾ, ಈಗ ಥಿಯೇಟರಿಗೆ ಬಂದಿದೆ. ಕ್ರಾಂತಿ, ಕಲ್ಯಾಣಿ, ವೈಷ್ಣವಿ ಚಂದ್ರನ್, ರಮೇಶ್ ಭಟ್, ರವಿಶಂಕರ್ ಗೌಡ, ಸಾಧುಕೋಕಿಲ, ರಾಜು ತಾಳಿಕೋಟೆ.. ಹೀಗೆ ಬೃಹತ್ ಕಲಾವಿದರ ಸೈನ್ಯವೇ ಚಿತ್ರದಲ್ಲಿದೆ. ಹಂಸಲೇಖ ಅವರ ಸಾಹಿತ್ಯ-ಸಂಗೀತ ಇರುವ ಚಿತ್ರವಿದು. ಚಿತ್ರದ ಟೈಟಲ್ ಸಾಂಗ್ ಹಾಡಿರುವುದು ದಿ.ಎಸ್.ಪಿ.ಬಾಲಸುಬ್ರಹ್ಮಣ್ಯಂ.



