ಸತ್ಯ + ಸತ್ಯ ಅಂದ್ರೆ ಯಾರು..? ಕನ್ ಫ್ಯೂಸ್ ಏನೂ ಆಗ್ಬೇಡಿ. ಒಬ್ಬರು ಬಾಹುಬಲಿಯ ಕಟ್ಟಪ್ಪ ಖ್ಯಾತಿಯ ಸತ್ಯರಾಜ್. ಮತ್ತೊಬ್ಬರು ಸತ್ಯದೇವ್. ಪೂರ್ತಿ ಹೆಸರು ಸತ್ಯದೇವ್ ಕಾಂಚರನ. ಬ್ಲಫ್ ಮಾಸ್ಟರ್ ಚಿತ್ರದ ಮೂಲಕ ಸ್ಟಾರ್ ಆದವರು. ರಾಮ್ ಸೇತು ಚಿತ್ರದ ಎಪಿ ಪಾತ್ರವೂ ಇವರದ್ದೇ. ಇವರಿಬ್ಬರ ಜೊತೆ ಡಾಲಿ ಧನಂಜಯ್ ನಟಿಸಿರುವ ಹೊಸ ಸಿನಿಮಾ ಜೀಬ್ರಾ.


ಚಿತ್ರದಲ್ಲಿ ನನ್ನದು ನೆಗೆಟಿವ್ ಅಥವಾ ವಿಲನ್ ರೋಲ್ ಅಲ್ಲ. ಇದು ನನಗೂ ಹಾಗೂ ಸತ್ಯದೇವ್ ಇಬ್ಬರಿಗೂ 26ನೇ ಸಿನಿಮಾ ಎನ್ನುವುದೇ ಸ್ಪೆಷಲ್. ನನ್ನ ಪಾತ್ರ ಸ್ಟ್ರಾಂಗ್ ಆಗಿದೆ. ನನ್ನ ಅಭಿಮಾನಿಗಳಿಗೂ ಇಷ್ಟವಾಗುತ್ತದೆ. ಇದೊಂದು ಇಂಟೆಲಿಜೆಂಟ್ ಮಾಸ್ ಎಂಟರ್‍ಟೇನರ್ ಎಂದಿದ್ದಾರೆ ಡಾಲಿ ಧನಂಜಯ.


ತೆಲುಗಿನಲ್ಲಿ ನಟಿಸುವ ಸತ್ಯದೇವ್ ಕೂಡಾ ಡಾಲಿ ಧನಂಜಯ ಅವರಂತೆಯೇ. ವಿಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆದ ಕಲಾವಿದ. ಈಗಾಗಲೇ ಚಿತ್ರತಂಡ 50 ದಿನಗಳ ಶೂಟಿಂಗ್ ಮುಗಿಸಿದೆ.


ಪುಷ್ಪ ಚಿತ್ರದಲ್ಲಿ ಜಾಲಿ ರೆಡ್ಡಿಯಾಗಿ ವಿಲನ್ ಆಗಿ ನಟಿಸಿದ್ದ ಡಾಲಿ, ಇಲ್ಲಿ ವಿಲನ್ ಅಲ್ಲವಂತೆ. ಇಬ್ಬರೂ ಹೀರೋಗಳೇ. ಪೆಂಗ್ವಿನ್ ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದ ಈಶ್ವರ್ ಕಾರ್ತಿಕ್ ಜೀಬ್ರಾ ಚಿತ್ರಕ್ಕೆ ಡೈರೆಕ್ಟರ್. ರವಿ ಬಸ್ರೂರು ಸಂಗೀತ ನೀಡುತ್ತಿದ್ದು, ಬಾಲಸುಂದರಂ ಮತ್ತು ಪದ್ಮಜಾ ರೆಡ್ಡಿ ಈ ಚಿತ್ರದ ನಿರ್ಮಾಪಕರು.


ಡಾಲಿ, ಸತ್ಯದೇವ್ ಜೊತೆ ಕಟ್ಟಪ್ಪ ಸತ್ಯರಾಜ್, ಕಾಮಿಡಿ ಹೀರೋ ಸುನಿಲ್ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಿಯಾ ಭವಾನಿ ಶಂಕರ್ ನಾಯಕಿ. ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ರೆಡಿಯಾಗುತ್ತಿದೆ. ಹಿಂದಿ, ಮಲಯಾಳಂ ಹಾಗೂ ತಮಿಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲೇ ರಿಲೀಸ್ ಆಗಲಿದೆ.



