ಕಾಂತಾರದ ಗೆಲುವು ರಿಷಬ್ ಶೆಟ್ಟಿಯವರನ್ನು ನಿರಂತರವಾಗಿ ಸುತ್ತುವಂತೆ ಮಾಡಿದೆ. ಒಂದು ಕಡೆ ಒಪ್ಪಿಕೊಂಡ ಕಾರ್ಯಕ್ರಮಗಳು, ಮತ್ತೊಂದು ಕಡೆ ರಾಜ್ಯ ಸರ್ಕಾರದ ಸೇವ್ ಟೈಗರ್ ಅಭಿಯಾನಕ್ಕಾಗಿ ಕಾಡಿನಲ್ಲಿ ಓಡಾಟ, ಕುಟುಂಬದ ಜೊತೆ ಪ್ರವಾಸ, ಪ್ರತಿ ಭಾಷೆಯಲ್ಲೂ ಸದ್ದು ಮಾಡಿದ ಕಾಂತಾರದ ಗೆಲುವಿನ ಸಂಭ್ರಮ, ಇಂಗ್ಲಿಷಿಗೆ ಡಬ್ ಆಗುತ್ತಿರುವ ಕಾಂತಾರದ ಡಬ್ಬಿಂಗ್ ಕೆಲಸ, ಹೊಂಬಾಳೆಯವರ ಜೊತೆಗೆ ಓಡಾಟ.. ಹೀಗೆ ರಿಷಬ್ ಶೆಟ್ಟಿ ಅವರಿಗೆ ಬಿಡುವಿಲ್ಲ. ಆದರೆ ಹೊಸ ಚಿತ್ರಕ್ಕೆ ರೆಡಿಯಾಗಬೇಕು. ಈ ನಡುವೆಯೇ ಕಾಂತಾರ 2 ಚಿತ್ರ ಅನೌನ್ಸ್ ಮಾಡಿ ಆಗಿದೆ. ಅದಕ್ಕೆ ಮುನ್ನ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
Feels honoured and Blessed to be awarded prestigious Dadasaheb Phalke International Film Festival Award for Most Promising Actor (Hindi). pic.twitter.com/ZxTvOUMDHG
— Rishab Shetty (@shetty_rishab) February 21, 2023
ರಿಷಬ್ ಶೆಟ್ಟಿ, ಹಿಂದಿ ಸಿನಿಮಾಗೆ ಕೊಟ್ಟ ಪ್ರಶಸ್ತಿ ಇದಾಗಿದೆ. ಕನ್ನಡ ಸಿನಿಮಾಗೆ ಅಲ್ಲ. ಪ್ರಶಸ್ತಿ ಸಿಕ್ಕಿದ್ದು ತುಂಬಾ ಖುಷಿ ಆಗಿದೆ. ಜವಾಬ್ದಾರಿ ಹೆಚ್ಚು ಆಯ್ತು ಅನ್ನಿಸುತ್ತೆ. ಕನ್ನಡ ಸಿನಿಮಾಗಳ ಬಗ್ಗೆ ವಿಶೇಷ ಗೌರವ ಬರುತ್ತಾ ಇದೆ. ನಮ್ಮ ಟ್ರೆಡಿಷನಲ್ ಸ್ಟೈಲಿನಲ್ಲಿ ಹೋಗಿದ್ದೆ. ಅಲ್ಲಿದ್ದವರೆಲ್ಲಾ ಗುರುತಿಸಿದ್ರು ಎಂದಿರೋ ರಿಷಬ್ ಶೆಟ್ಟಿ, ಮುಂಬೈನಲ್ಲಿಯೂ ಮೆರೆಯುತ್ತಿರುವುದು ಕನ್ನಡತನವನ್ನೇ.
ಮಾರ್ಚ್ನಿಂದಲೇ ಕಾಂತಾರ-2 ಪ್ರಾರಂಭವಾಗಲಿದೆ ಎಂದು ಬಹಿರಂಗ ಪಡಿಸಿದರು. ಇನ್ಮುಂದೆ `ಕಾಂತಾರ 2′ ಕೆಲಸ ಶುರು ಮಾಡುತ್ತೇನೆ. ಮಾರ್ಚ್ನಿಂದ ಫೋನ್ ಆಫ್ ಮಾಡುತ್ತೇನೆ ಎಂದಿದ್ದಾರೆ ರಿಷಬ್ ಶೆಟ್ಟಿ. ಅದು ರಿಷಬ್ ಶೆಟ್ಟಿ ಸ್ಟೈಲ್. ಹೊಸ ಚಿತ್ರದ ಕಥೆ-ಚಿತ್ರಕಥೆ ರೆಡಿ ಮಾಡುವಾಗ ಕೆಲವರ ಜೊತೆ ಕಾಂಟ್ಯಾಕ್ಟ್‍ನಲ್ಲಿರುತ್ತಾರೆ ರಿಷಬ್ ಶೆಟ್ಟಿ. ಉಳಿದಂತೆ ತಮ್ಮದೇ ಆದ ಕಾಂತಾರ ಲೋಕ ಸೃಷ್ಟಿಸಿಕೊಳ್ತಾರೆ.



