ಮೋದಿ, ಹಿಂದುತ್ವ, ಆರ್.ಎಸ್.ಎಸ್., ಎಡಪಂಥದವರು, ಬಲಪಂಥದವರು, ದೇವರು, ಧರ್ಮ, ದ್ರಾವಿಡರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್.. ಹೀಗೆ ಯಾರಾದರೊಬ್ಬರ ಟೀಕೆ ಮಾಡುತ್ತಾ.. ಸದಾ ಸುದ್ದಿಯಲ್ಲಿರುವ ನಟ ಚೇತನ್, ಈ ಬಾರಿ ಅಂಬರೀಷ್ ಸ್ಮಾರಕ, ರಸ್ತೆ ವಿಚಾರದಲ್ಲಿ ಸುಮಲತಾ ಅವರನ್ನು ಟೀಕಿಸಿ ಸುದ್ದಿಯಾಗಿದ್ದಾರೆ. ಈ ಕುರಿತು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಟೀಕೆ ಮಾಡಿದ್ದಾರೆ. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧಿಕೃತವಾಗಿ ಈ ಕುರಿತು ಎಚ್ಚರಿಕೆ ನೀಡಿದೆ.
ಇದೇ 27 ಕ್ಕೆ ಅಂಬರೀಶ್ ಸ್ಮಾರಕ ಉದ್ಘಾಟನೆ ಮಾಡಿದ್ವಿ ಜೊತೆಗೆ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರಿಟ್ಟಿದ್ದೀವಿ, ಆದರೆ ಈ ವಿಚಾರವಾಗಿ ನಟ ಚೇತನ್ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಸ್ಮಾರಕ ನಿರ್ಮಾಣ ಅಥವಾ ರೇಸ್ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಬೇಕು ಎಂಬುದು ಸುಮಲತಾ ಅವರ ಒತ್ತಾಯ ಆಗಿರಲಿಲ್ಲ ಇಡೀಯ ಚಿತ್ರರಂಗದ ಒತ್ತಾಯ ಆಗಿತ್ತು. ಅಂಬರೀಶ್ ಅವರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ, ಚೇತನ್ ಅಹಿಂಸ ಅವರು ಪದೇ ಪದೇ ಚಿತ್ರರಂಗದ ಒಕ್ಕೂರಲ ಅಭಿಪ್ರಾಯದ ವಿರುದ್ಧ ಸಾರ್ವಜನಿಕ ಆಕ್ಷೇಪ ವ್ಯಕ್ತಪಡಿಸಿ ಮುಜುಗರ ಉಂಟು ಮಾಡುತ್ತಿದ್ದಾರೆ.




ಚೇತನ್ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮ ಕೈಗೋಳ್ಳೊದು ಖಂಡಿತ. ಅಸಹಾಕಾರ ನೀಡುವ ತೀರ್ಮಾನಕ್ಕೆ ಮುಂದಾಗಲಿದ್ದೀವಿ. ಚಿತ್ರರಂಗದ ಯಾವುದೇ ಅಂಗ ಸಂಸ್ಥೆಗಳು ಅವರ ಸಿನಿಮಾಕ್ಕೆ ಕೆಲಸ ಮಾಡುವುದಿಲ್ಲ ಆದರೆ ಇದು ಈಗಲೇ ಅಲ್ಲ. ಇನ್ನೊಂದು ಸುತ್ತಿನ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್. ಅಂದಹಾಗೆ ನಟ ಚೇತನ್ ಸದ್ಯಕ್ಕೆ ಯಾವ ಚಿತ್ರಗಳಲ್ಲೂ ನಟಿಸುತ್ತಿಲ್ಲ.
ಹೀಗಾಗಿಯೇ ಈ ಅಸಹಕಾರದಿಂದ ಚಿತ್ರರಂಗದವರು ಪ್ರತಿಭಟಿಸುವುದರಿಂದ ಏನೂ ಆಗುವುದಿಲ್ಲ. ಅಷ್ಟೆಲ್ಲಕ್ಕೂ ವಿಭಿನ್ನವಾಗಿ ಅಧಿಕೃತವಾಗಿ ಬಹಿಷ್ಕಾರ ಹಾಕುವ, ಅಸಹಕಾರ ಚಳವಳಿ ಘೋಷಿಸುವ ಅಧಿಕಾರ ಯಾವುದೇ ಅಧಿಕೃತ ಸಂಸ್ಥೆ ಅಥವಾ ಮಂಡಳಿಗೆ ಇಲ್ಲ. ಹೀಗಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ. ಅದು ಚೇತನ್ ಜೊತೆಗೆ ಸಿನಿಮಾ ಮಾಡುವ ಉದ್ದೇಶವಿರುವವರಿಗೆ ಎಚ್ಚರಿಕೆ ಅಷ್ಟೆ.. ಚೇತನ್ ಅವರನ್ನು ನಿಷೇಧಿಸುವ, ನಿರ್ಬಂಧಿಸುವ, ಅವರ ಜೊತೆ ಕೆಲಸ ಮಾಡಬೇಡಿ ಎನ್ನುವ ಅಧಿಕಾರ ಚಲನಚಿತ್ರ ವಾಣಿಜ್ಯ ಮಂಡಳಿಗೂ ಇಲ್ಲ. ನಿರ್ಮಾಪಕರ ಸಂಘಕ್ಕೂ ಇಲ್ಲ.



