ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಹೊಸ ಕಾರು ಖರೀದಿ ಮಾಡಿದ್ದಾರೆ. ಸುಮಾರು 5 ಕೋಟಿ ಬೆಲೆಯ ರೇಂಜ್ ರೋವರ್ ಕಾರಿದು. ಪತ್ನಿ ಮಕ್ಕಳೊಂದಿಗೆ ರೌಂಡ್ ಹಾಕಿರುವ ಯಶ್, ಕಾರಿನೊಂದಿಗೆ ಖುಷಿ ಪಟ್ಟಿದ್ದಾರೆ.
ಈಗಾಗಲೇ ಯಶ್ ಮರ್ಸಿಡಿಸ್ ಬೆಂಜ್ ಕಾರನ್ನು ಖರೀದಿಸಿದ್ದರು. ತಮಗೆ ಹಾಗೂ ತಮ್ಮ ತಾಯಿಗೆ ಪ್ರತ್ಯೇಕವಾಗಿ ಬೆಂಜ್ ಕಾರು ಖರೀದಿ ಮಾಡಿದ್ದರು. ಬಿಎಂಡಬ್ಲ್ಯು ಹಾಗೂ ಆಡಿ ಕಾರುಗಳೂ ಈಗಾಗಲೇ ಯಶ್ ಗ್ಯಾರೇಜಿನಲ್ಲಿವೆ. ಪಾಜೆರೋ ಸ್ಪೋಟ್ರ್ಸ್ ಕಾರು ಕೂಡಾ ಯಶ್ ಅವರ ಸೇಫ್ ಹೋಮ್ ಸೇರಿದೆ.
ಯಶ್ ಕನ್ನಡ ಚಿತ್ರರಂಗದ ಅತಿ ದುಬಾರಿ ಸಂಭಾವನೆ ಪಡೆಯುತ್ತಿರುವ ನಟ. ಅಷ್ಟು ಸಂಭಾವನೆ ಪಡೆದ ಮೇಲೆ ಆ ಸ್ಟಾರ್`ಡಂಗೆ ತಕ್ಕ ಕಾರುಗಳೂ ಇರಬೇಕಲ್ಲವೇ..
ಓಕೆ, ಕಾರನ್ನೇನೋ ಖರೀದಿ ಮಾಡಿದ್ರಿ, ಕಂಗ್ರಾಟ್ಸ್. ಈಗ ನಿಮ್ಮ ಮುಂದಿನ ಸಿನಿಮಾ ಯಾವಾಗ..? ಡೈರೆಕ್ಟರ್ ಯಾರು..? ಯಾವಾಗ ಸಿನಿಮಾ ಸೆಟ್ಟೇರುತ್ತೆ ಅನ್ನೋದನ್ನ ಹೇಳಿ ಅಂತಿದ್ದಾರೆ ಫ್ಯಾನ್ಸ್. ಅಂದಹಾಗೆ ಯಶ್ 19 ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್`ದಾಸ್ ಹೆಸರು ಕೇಳಿ ಬರ್ತಾ ಇದೆ.



