ಕಿಚ್ಚ ಸುದೀಪ್ ಹೊಸ ಸಿನಿಮಾ ಯಾವಾಗ ಎಂಬ ಪ್ರಶ್ನೆ ಸುದೀಪ್ ಹೋದಲ್ಲಿ ಬಂದಲ್ಲಿ ಎದುರಾಗುತ್ತಿತ್ತು. ಯುಗಾದಿಗೆ ಮುನ್ನವೇ ಹೊಸ ಸಿನಿಮಾ ಘೋಷಿಸುತ್ತೇನೆ ಎಂದರೂ ಸಸ್ಪೆನ್ಸ್ ಹೋಲ್ಡ್ ಮಾಡಿಟ್ಟುಕೊಳ್ಳೋಕೆ ಫ್ಯಾನ್ಸ್ ರೆಡಿ ಇರಲಿಲ್ಲ. ಇದೀಗ ಸುದೀಪ್ ಹೊಸ ಸಿನಿಮಾ ಇದೇ ಇರಬಹುದಾ.. ಎಂಬ ಕುತೂಹಲ ಹೊರಬಂದಾಗಿದೆ. ಒಂದು ಫೋಟೋ.. ಅಷ್ಟೆ..
ಅನೂಪ್ ಭಂಡಾರಿ ಜೊತೆ ಸುದೀಪ್ ಎರಡು ಸಿನಿಮಾ ಮಾಡುತ್ತಾರೆ ಅನ್ನೋದು ಈ ಮೊದಲೇ ಘೋಷಣೆ ಆಗಿತ್ತು. ಆ ಪೈಕಿ ‘ವಿಕ್ರಾಂತ್ ರೋಣ’ ಕಳೆದ ವರ್ಷ ರಿಲೀಸ್ ಆಗಿದೆ. ಈಗ ಎಲ್ಲರ ದೃಷ್ಟಿ ‘ಬಿಲ್ಲ ರಂಗ ಬಾಷಾ’ ಮೇಲಿದೆ. ಸುದೀಪ್ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಿಚ್ಚನ ಮುಂದಿನ ಚಿತ್ರ ಇದೇ ಆಗಿರಲಿದೆ ಎಂದು ಎಲ್ಲರೂ ಊಹಿಸುತ್ತಿದ್ದಾರೆ.
ಅದಕ್ಕೆ ಅನೂಪ್ ಭಂಡಾರಿ ಕೂಡಾ ಕಾರಣ ಎನ್ನಬೇಕು. ಕಾರಣ.. ಅವರು ಹಾಕಿರುವ ಪೋಸ್ಟಿನಲ್ಲಿ ಒಂದು ಚೆಂದದ ವಾಕ್ಯ ಬರೆದು, ಮೂರು ಅಕ್ಷರಗಳನ್ನು ಹೈಲೈಟ್ ಮಾಡಿದ್ದಾರೆ. ಅನೂಪ್ ಭಂಡಾರಿ, ‘ರಂಗಿತರಂಗ’, ‘ರಾಜರಥ’ ಹಾಗೂ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಬರುವ ತಮ್ಮ ಪಾತ್ರದ ಫೋಟೋನ ಜೋಡಿಸಿ 4ನೇ ಚಿತ್ರ ಲೋಡಿಂಗ್ ಎಂದು ಬರೆದುಕೊಂಡಿದ್ದಾರೆ.
Thanks to each one of you for the wonderful wishes!
ಬಿ ಗಿಯಾಗ್ ಕೂತ್ಕೋಳಿ,
ರಂ ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು
ಬಾ ಡೂಟದ್ ಜೊತೆ ಬರ್ತೀವಿ. ಅಲ್ಲಿವರ್ಗು ಎಂದಿನ ಹಾಗೆ ತಾಳ್ಮೆ ಇರ್ಲಿ –
Be Right Back! pic.twitter.com/M9vfJvUJeo— Anup Bhandari (@anupsbhandari) March 2, 2023
ಫೋಟೋಗೆ ಕ್ಯಾಪ್ಶನ್ ನೀಡಿ
ನಿಮ್ಮ ಹಾರೈಕೆಗೆ ಧನ್ಯವಾದ. ‘ಬಿ’ಗಿಯಾಗ್ ಕೂತ್ಕೋಳಿ. ‘ರಂ’ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು ‘ಬಾ’ಡೂಟದ್ ಜೊತೆ ಬರ್ತೀವಿ. ಅಲ್ಲಿವರೆಗೂ ಎಂದಿನ ಹಾಗೆ ತಾಳ್ಮೆ ಇರ್ಲಿ’ ಎಂದು ಬರೆದಿದ್ದಾರೆ. ಇಲ್ಲಿ ಬರೆದ ಸಾಲುಗಳಲ್ಲಿ ‘ಬಿ, ರಂ, ಬಾ’ ಹೈಲೈಟ್ ಆಗಿದೆ. ಹೀಗಾಗಿ, ಅನೂಪ್ ಮುಂದಿನ ಚಿತ್ರ ‘ಬಿಲ್ಲ ರಂಗ ಬಾಷಾ’ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ಕಿಚ್ಚ ಸುದೀಪ್ ಅವರು ಕಬ್ಜ ಚಿತ್ರದ ಕೆಲಸ ಪೂರ್ಣಗೊಳಿಸಿದ್ದಾರೆ. ಉಪೇಂದ್ರ ಹೀರೋ ಆಗಿರುವ ಚಿತ್ರದಲ್ಲಿ ಸುದೀಪ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಸುದೀಪ್ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.



