ಶಿವಣ್ಣ-ನರ್ತನ್ ಕಾಂಬಿನೇಷನ್ನಿನಲ್ಲಿ ಭೈರತಿ ರಣಗಲ್ ಸಿನಿಮಾ ಸೆಟ್ಟೇರಿದೆ. ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣವಾಗುತ್ತಿರೋ 2ನೇ ಸಿನಿಮಾ ಇದು. 2017ರಲ್ಲಿ ರಿಲೀಸ್ ಆಗಿ ಭರ್ಜರಿ ಹಿಟ್ ಆಗಿದ್ದ ಮಫ್ತಿ ಚಿತ್ರದ ಸೀಕ್ವೆಲ್ ಇದು. ಆಗ ನಿರ್ಮಾಣದ ಹೊಣೆ ಹೊತ್ತಿದ್ದವರು ಜಯಣ್ಣ-ಭೋಗಂದ್ರ. ಈಗ ಗೀತಾ ಶಿವರಾಜ್ ಕುಮಾರ್ ಅವರೇ ನಿರ್ಮಾಪಕಿಯಾಗಿದ್ದಾರೆ. ವೇದ ಚಿತ್ರದ ಗೀತಾ ಅವರ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ 2ನೇ ಸಿನಿಮಾ ಭೈರತಿ ರಣಗಲ್.


ಮಫ್ತಿ ತಂಡವೇ ಬಹುತೇಕ ಭೈರತಿ ರಣಗಲ್ ಸಿನಿಮಾಗೆ ಕೆಲಸ ಮಾಡಲಿದೆ. ಸಂಗೀತ ನಿರ್ದೇಶನ ರವಿ ಬಸ್ರೂರು ಅವರದ್ದು. ನವೀನ್ ಕುಮಾರ್ ಛಾಯಾಗ್ರಹಣ ಹಾಗೂ ಶಿವಕುಮಾರ್ ಕಲಾ ನಿರ್ದೇಶನ.
ಮಫ್ತಿಯಲ್ಲಿ ಶ್ರೀಮುರಳಿ ಕೂಡಾ ಇದ್ದರು. ದೇವರಾಜ್ ಇದ್ದರು. ಮಲ್ಟಿ ಸ್ಟಾರ್ ಮೂವಿಯಾಗಿತ್ತು. ಅದೇ ರೀತಿ ಈ ಚಿತ್ರದಲ್ಲೂ ಇರಲಿದೆಯಾ ಎಂದರೆ ನರ್ತನ್ ಗುಟ್ಟು ಬಿಟ್ಟುಕೊಡಲ್ಲ. ಸ್ಪೆಷಲ ಎಲಿಮೆಂಟ್ ಇರಲಿದೆ ಎಂದು ಮಾತ್ರ ಹೇಳ್ತಾರೆ. ನಾಯಕಿ ಪಾತ್ರವೂ ಇರಲಿದೆ. ಯಾರು ಅನ್ನೋದು ಫೈನಲ್ ಆಗಿಲ್ಲ.
ಕಥೆಗೆ ಯಾರು ಹೊಂದಿಕೊಳ್ಳುತ್ತಾರೋ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆ ಪಾತ್ರಕ್ಕೆ ಬಹಳ ಮಹತ್ವ ಇದೆ. ಆ ಪಾತ್ರಕ್ಕೆ ಬಹಳ ಭಾವನೆಗಳು ಇವೆ. ಅದು ರಣಗಲ್ ಪಾತ್ರಕ್ಕೆ ಚೆನ್ನಾಗಿ ಹೊಂದಿಕೆ ಆಗುತ್ತದೆ. ಆದಷ್ಟು ಬೇಗ ನಾಯಕಿ ಯಾರು ಅಂತ ಹೇಳ್ತೀವಿ ಎಂದಿದ್ದಾರೆ.



