ಯುವ. ಕನ್ನಡಿಗರು ಅದರಲ್ಲೂ ದೊಡ್ಮನೆ ಅಭಿಮಾನಿಗಳು ವರ್ಷಗಳಿಂದ ಕಾಯುತ್ತಿರೋ ಸಿನಿಮಾ. ಪುನೀತ್ ಅವರನ್ನು ಅಭಿಮಾನಿಗಳು ಈಗ ಯುವ ರಾಜ್ ಕುಮಾರ್ ಅವರಲ್ಲಿ ನೋಡುತ್ತಿದ್ದಾರೆ. ಬಂದೇ ಬರ್ತಾರೆ ಎನ್ನುವ ನಿರೀಕ್ಷೆಯಲ್ಲಿರುವ ಅಭಿಮಾನಿ ದೇವರುಗಳಿಗೆ ನಿಧಾನವಾಗಿ ಒಂದೊಂದೇ ಅಪ್‍ಡೇಟ್ ಕೊಡುತ್ತಿದೆ ಹೊಂಬಾಳೆ. ನಿರ್ದೇಶಕ ಸಂತೋಷ್ ಆನಂದರಾಮ್ ಕುಡಾ ಅಷ್ಟೆ.. ಸ್ವಲ್ಪ ಸ್ಲೋ ಆಗಿಯೇ ಅಪ್`ಡೇಟ್ ಕೊಡುತ್ತಿದ್ದಾರೆ ಎಂಬ ಭಾವನೆ ಇದೆ. ಅಭಿಮಾನಿಗಳ ಉತ್ಸಾಹಕ್ಕೆ ತಕ್ಕಂತೆ ಸಿನಿಮಾ ಮಾಡೋಕೆ ಆಗಲ್ಲ. ಎಲ್ಲವನ್ನು ಸಿದ್ಧ ಮಾಡಿಕೊಂಡೇ ಶುರು ಮಾಡಬೇಕು.
ಯುವ ಸಿನಿಮಾ ಸೆಟ್ಟೇರಿ ಆಗಿತ್ತು. ಟೀಸರ್ ಕೂಡಾ ಬಂದಿತ್ತು. ರಿಲೀಸ್ ಡೇಟ್ ಕೂಡಾ ಘೋಷಣೆಯಾಗಿದೆ. ಆದರೆ ಸಿನಿಮಾ ಶೂಟಿಂಗ್ ಅಪ್ಡೇಟ್ ಏನು ಎಂಬ ಅಭಿಮಾನಿಗಳ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ. ಯುವರಾಜ್ಕುಮಾರ್ ನಟನೆಯ ಚೊಚ್ಚಲ ಸಿನಿಮಾದ ಫಸ್ಟ್ ಡೇ, ಫಸ್ಟ್ ಶೆಡ್ಯೂಲ್ ಶೂಟಿಂಗ್ ಏ.9ರಂದು ಶುರುವಾಗಿದೆ.
ಬೆಂಗಳೂರಿನ ಹೆಚ್ಎಂಟಿ ಅಂಗಳದಲ್ಲಿ ಅದ್ದೂರಿ ಸೆಟ್ ಹಾಕಿ ಫಸ್ಟ್ ಡೇ ಶೂಟಿಂಗ್ ಶುರು ಮಾಡಲಾಗಿದೆ. ಯುವಗೆ ಸ್ವತಃ ಡೈರೆಕ್ಟರ್ ಸಂತೋಷ್ ಆನಂದ್ರಾಮ್ ಕ್ಲಾಪ್ ಮಾಡಿದ್ದಾರೆ. ಹೊಂಬಾಳೆ ಪ್ರೊಡಕ್ಷನ್ ಹೌಸ್ನಿಂದ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಯುವ ರಾಜ್ ಕುಮಾರ್ ಎಂಟ್ರಿ ಕೊಡುತ್ತಿದ್ದಾರೆ. ಕಾಂತಾರ ಖ್ಯಾತಿಯ ಸಪ್ತಮಿ ಗೌಡ ನಾಯಕಿ. ಸಿನಿಮಾಗಾಗಿ ಯುವ ಡ್ಯಾನ್ಸ್, ಫೈಟ್, ಜಿಮ್ನಲ್ಲಿ ವರ್ಕೌಟ್ ಅಂತಾ ಬ್ಯುಸಿಯಾಗಿದ್ದರು. ಬಳಿಕ ‘ಯುವ’ ಸಿನಿಮಾದ ವರ್ಕ್ಶಾಪ್ ಪೂರೈಸಿಯೇ ಸಿನಿಮಾ ಶೂಟಿಂಗ್ ಶುರು ಮಾಡಿದ್ದಾರೆ. ಡಾ.ರಾಜ್ ರಾಜಕುಮಾರ್, ಶಿವ ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ , ವಿನಯ್ ರಾಜಕುಮಾರ್ ನಂತರ ದೊಡ್ಮನೆಯಿಂದ ಬರುತ್ತಿರುವ ಹೊಸ ಹೀರೋ ಯುವ ರಾಜ್ ಕುಮಾರ್.



