ಕನ್ನಡ ಚಿತ್ರರಂಗದಲ್ಲಿ ಬೆಸ್ಟ್ ಗ್ರಾಫಿಕ್ಸ್ ಮೂವಿ ಅನ್ನೋದು ಇನ್ನೂ ಬಂದಿಲ್ಲ ಎಂದೇ ಹೇಳಬೇಕು. ಪ್ರಯತ್ನಗಳಾಗಿವೆ, ಆದರೆ ಕ್ವಾಲಿಟಿ ಲೆಕ್ಕದಲ್ಲಿ ಅಲ್ಲಿಗೆ ತಲುಪಿಲ್ಲ. ಈಗ ಆ ಪ್ರಯತ್ನಕ್ಕೆ ಕೈ ಹಾಕಿರುವುದು ಉಪೇಂದ್ರ. ಉಪೇಂದ್ರ ಅವರೇ ನಟಿಸಿ ನಿರ್ದೇಶನ ಮಾಡುತ್ತಿರುವ ಯುಐ ಚಿತ್ರಕ್ಕೆ ಹೊಸದಾಗಿ ಗ್ರಾಫಿಕ್ಸ್ ಮಾಡಿಸುತ್ತಿದ್ದಾರೆ. ಗ್ರಾಫಿಕ್ಸ್`ಗೆ ತಕ್ಕಂತೆಯೇ ಸೆಟ್, ಡಿಸೈನ್, ಶೂಟಿಂಗ್ ಮಾಡಿಸುತ್ತಿರುವುದು ವಿಶೇಷ.
ಹೀಗಾಗಿಯೇ ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸ ಹೆಚ್ಚಾಗಿದೆ. ನವೀನ್ ಮನೋಹರ್ ಚಿತ್ರದ ಗ್ರಾಫಿಕ್ಸ್ ಡಿಸೈನ್ ನೋಡಿಕೊಳ್ಳುತ್ತಿದ್ದಾರೆ. ಅದು ಸುಲಭದ್ದಲ್ಲ. 3ಡಿ ಸೆಟ್ಟಿಂಗ್ಸ್ ಬೇಕು. 200ಕ್ಕೂ ಹೆಚ್ಚು ಡಿಎಸ್‍ಎಲ್‍ಆರ್ ಕ್ಯಾಮೆರಾಗಳ ಮೂಲಕವೇ ಗ್ರಾಫಿಕ್ಸ್ ಡಿಸೈನಿಗೆ ತಕ್ಕಂತೆ ಶೂಟಿಂಗ್ ಆಗಬೇಕು. ಹೀಗೆ ಹಲವು ಹೊಸ ಹೊಸ ಪ್ಲಾನ್`ಗಳೊಂದಿಗೆ ಯುಐ ಶೂಟಿಂಗ್ ನಡೆಯುತ್ತಿದೆ.
ಚಿತ್ರದಲ್ಲಿ 10 ಎಕರೆಯಲ್ಲಿ ಒಂದು ನಗರದ ಸೆಟ್ ಹಾಕಲಾಗಿದೆ. ಈ ಚಿತ್ರಕ್ಕಾಗಿ ಒಂದು ಕಾಲ್ಪನಿಕ ನಗರವನ್ನೇ ಸೃಷ್ಟಿಸಿದ್ದೇವೆ. ಅದು ಬೇರೆಯದೇ ಜಗತ್ತು. 1400 ವಿಎಫ್`ಎಕ್ಸ್ ಶಾಟ್ಸ್ ಕ್ರಿಯೇಟ್ ಮಾಡಿದ್ದೇವೆ. ಹಲವು ಕಟಿಂಗ್ ಎಡ್ಜ್ ಟೆಕ್ನಾಲಜಿಗಳನ್ನು ಬಳಸಿದ್ದೇವೆ. ಕೆಲವು ತಂತ್ರಜ್ಞಾನ ಕನ್ನಡಕ್ಕಷ್ಟೇ ಅಲ್ಲ, ಇಂಡಿಯನ್ ಸಿನಿಮಾಗಳಿಗೂ ಹೊಸದು ಎನ್ನುತ್ತಾರೆ ನವೀನ್ ಮನೋಹರ್. ಇದಕ್ಕೆ ತಕ್ಕಂತೆಯೇ ಮ್ಯೂಸಿಕ್ ಕೂಡಾ ಸಿದ್ಧವಾಗುತ್ತಿದೆ.
ಅಜನೀಶ್ ಲೋಕನಾಥ್. ಈಗ ಸ್ಯಾಂಡಲ್`ವುಡ್ ಸೆನ್ಸೇಷನ್ ಮ್ಯೂಸಿಕ್ ಡೈರೆಕ್ಟರ್. ರೆಗ್ಯುಲರ್ ಜಾನರ್ ಮ್ಯೂಸಿಕ್`ನ್ನು ಬ್ರೇಕ್ ಮಾಡಿರುವ ಅಜನೀಶ್, ಬೇರೆಯದೇ ರಿದಂ ತೋರಿಸುತ್ತಿದ್ದಾರೆ. ಅತ್ತ ಉಪ್ಪಿ, ರೆಗ್ಯುಲರ್ ಜಾನರ್ ಬಿಟ್ಟೇ ಸಿನಿಮಾ ಮಾಡುವವರು. ಇವರಿಬ್ಬರೂ ಈಗ ಯುಐ ಚಿತ್ರಕ್ಕೆ ಒಂದುಗೂಡಿದ್ದಾರೆ. ಯುಐ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಆಗಿ ಎಂಟ್ರಿ ಕೊಟ್ಟಿದ್ದಾರೆ ಅಜನೀಶ್ ಲೋಕನಾಥ್.
ಯುಐ ಚಿತ್ರದ ಶೂಟಿಂಗ್ ಪೈನಲ್ ಹಂತದಲ್ಲಿದ್ದು, ಇನ್ನೊಂದು ತಿಂಗಳು ಚಿತ್ರೀಕರಣವಾದರೆ, ಶೂಟಿಂಗ್ ಮುಗಿದಂತೆಯೇ. ಈ ವರ್ಷದ ಕೊನೆಯೊಳಗೆ ಸಿನಿಮಾ ರಿಲೀಸ್ ಮಾಡಬೇಕು ಎನ್ನುವುದು ಉಪೇಂದ್ರ ಅವರ ಗುರಿ.
ಮನೋಹರ್ ನಾಯ್ಡು ಅವರ ಲಹರಿ ಫಿಲ್ಮ್ಸ್ ಮತ್ತು ಕೆಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ನಿರ್ಮಿಸಿದ UI ನಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಸನ್ನಿ ಲಿಯೋನ್, ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ.



