ಪ್ಯಾನ್ ಇಂಡಿಯಾ ರಿಲೀಸ್ ಆದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ ಏಪ್ರಿಲ್ 14 ರಿಂದ ಒಟಿಟಿಗೆ ಬರ್ತಿದೆ. ಸಿನಿಮಾ ರಿಲೀಸ್ ಆಗಿ ಒಂದು ತಿಂಗಳೊಳಗೆ ಕಬ್ಜ ಒಟಿಟಿಗೆ ಲಗ್ಗೆ ಎಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕಬ್ಜ ಮೊದಲ ಭಾಗ ಮಾರ್ಚ್ 17 ಅಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ರಿಲೀಸ್ ಆಗಿತ್ತು. ಇದೀಗ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರೆಲ್ಲ ಈಗ ಮನೆಯಲ್ಲೇ ಕುಳಿತು ವೀಕ್ಷಿಸುವ ಸಮಯ ಹತ್ತಿರವಾಗಿದೆ.
ಕಬ್ಜ ರೆಟ್ರೋ ಶೈಲಿಯಲ್ಲಿ ಮೂಡಿಂಬದ ಸಿನಿಮಾ. ಇದು ಎರಡು ಪಾರ್ಟ್ ನಲ್ಲಿ ಸಿದ್ಧವಾಗಿದೆ. ಆರ್. ಚಂದ್ರು ನಿರ್ದೇಶನದ ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋ ಮೂಲಕ ಸ್ಟ್ರೀಮಿಂಗ್ ಆಗಲಿದೆ.
ಮೊದಲ ಭಾಗದಲ್ಲಿ ಅರ್ಥ ಕಥೆಯನ್ನು ಮಾತ್ರ ತೋರಿಸಲಾಗಿದೆ. ಪೈಲೆಟ್ ಆಗಬೇಕು ಎಂದುಕೊಂಡ ಕಥಾನಾಯಕ ಅನಿವಾರ್ಯವಾಗಿ ಭೂಗತ ಜಗತ್ತಿಗೆ ಎಂಟ್ರಿ ನೀಡುತ್ತಾನೆ. ನಂತರ ದೊಡ್ಡ ಡಾನ್ ಆಗಿ ಮೆರೆಯುತ್ತಾನೆ. ಉಪೇಂದ್ರ ವರ್ಲ್ಡ್ ಡಾನ್ ಪಾತ್ರ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಕಿಚ್ಚ ಸುದೀಪ್ ಅಬ್ಬರಿಸಿದ್ದಾರೆ. ಶಿವರಾಜ್ಕುಮಾರ್ ಕ್ಲೈಮ್ಯಾಕ್ಸ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಶಿವಣ್ಣ ಪಾತ್ರದ ಬಗ್ಗೆ 2ನೇ ಭಾಗದಲ್ಲಿ ರಿವೀಲ್ ಆಗಲಿದೆ. ರವಿ ಬಸ್ರೂರು ಸಂಗೀತ ಸಿನಿಮಾಗೆ ಇದೆ. ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ.



