ಚಿತ್ರದಲ್ಲಿ ಮೂಢನಂಬಿಕೆಗಳ ಕುರಿತ ಕಥೆ ಇದೆ. ಒಂದು ಆಡು, ನಾಲ್ವರು ಯುವಕರ ಬದುಕಲ್ಲಿ ಪ್ರವೇಶ ಮಾಡುತ್ತೆ. ಆನಂತರ ಎಲ್ಲವೂ ನಗೆಯ ಓಕುಳಿ. ಟರ್ನು..ಟ್ವಿಸ್ಟುಗಳ ಆಟ.. ನಡೆಯುವ ಪವಾಡ.. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಫಿಕ್ಸ್. ಕಾಮಿಡಿ ಟ್ರ್ಯಾಕ್ ಸುತ್ತಲೇ ತಿರುಗುವ ಚಿತ್ರವಿದು. ಆಡೇ ನಮ್ God ಅನ್ನೋದು ಚಿತ್ರದ ಟೈಟಲ್. ಹೆಸರು ಕೂಡಾ ಹೊಸದಾಗಿದೆ.
ರಾಮಾ ರಾಮಾ ರೇ ಖ್ಯಾತಿಯ ನಟರಾಜ್, ಅಜಿತ್ ಬೊಪ್ಪನಹಳ್ಳಿ, ಮಂಜುನಾಥ್ ಹಾಗೂ ಅನೂಪ್ ಪ್ರಧಾನ ಪಾತ್ರಗಳಲ್ಲಿದ್ದಾರೆ. ನಟರಾಜ್ ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ. ಪಿ ಕೆ ಹೆಚ್ ದಾಸ್ ಛಾಯಾಗ್ರಹಣದ ಚಿತ್ರಕ್ಕೆ ಸ್ವಾಮಿನಾಥನ್ ಸಂಗೀತ ನೀಡಿದ್ದಾರೆ.
ಅಂದಹಾಗೆ ಚಿತ್ರದ ನಿರ್ದೇಶಕರು ವಿಶ್ವನಾಥ್. ಪಂಚಮವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆಯ ಮಂಜು, ಮುಸುಕು.. ಹೀಗೆ ವಿಭಿನ್ನ ಚಿತ್ರಗಳ ನಿರ್ದೇಶಕ ವಿಶ್ವನಾಥ್. ಇದೀಗ ಹೊಸದೊಂದು ಚಿತ್ರದೊಂದಿಗೆ ತೆರೆಗೆ ಬರುತ್ತಿದ್ದಾರೆ.
ಪಿ ಎಚ್ ವಿಶ್ವನಾಥ್ ಸಿನಿಮಾಗೆ ಕರೆ ಬಂದಾಗಲೇ ನನಗೆ ಖುಷಿಯಾಯಿತು. ಆರಂಭದಲ್ಲಿ ಅವರು ಬೇರೆ ಪಾತ್ರದಲ್ಲಿ ನಟಿಸಬೇಕು ಎಂದಿದ್ದರು. ನಂತರ ನನಗೆ ಮತ್ತೊಂದು ಪಾತ್ರ ನೀಡಿದರು. ಗೌರಿ ಗಣೇಶ ಸಿನಿಮಾದಲ್ಲಿ ಅನಂತನಾಗ್ ನಿರ್ವಹಿಸಿದ ರೀತಿಯ ಪಾತ್ರವದು. ನನಗೆ ಬಹಳ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ ನಟರಾಜ್.
ಹೊಸ ಹುಡುಗರ ಜೊತೆ ಸಿನಿಮಾ ಮಾಡುತ್ತಿರುವ ವಿಶ್ವನಾಥ್ ಅವರಿಗೆ ತಂತ್ರಜ್ಞರ ಲೆಕ್ಕದಲ್ಲಿ ಸೀನಿಯರುಗಳು ಸಾಥ್ ಕೊಟ್ಟಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.



