ದೃಶ್ಯ ವೈಭವ. ಇಂದಿನ ಪೀಳಿಗೆ ಮರೆತೇ ಹೋಗಿದ್ದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕಥೆಗೆ ಕಾಲ್ಪನಿಕತೆಯನ್ನು ಬೆರೆಸಿ ನೋಡುಗರು ರೋಮಾಂಚನಗೊಳ್ಳುವಂತೆ ಸೃಷ್ಟಿಸಿದ್ದ ಸಿನಿಮಾ. ಭಾರತದಲ್ಲಿ ಹೊಸ ದಾಖಲೆ.. ಹೊಸ ಇತಿಹಾಸ ಬರೆದಿದ್ದೂ ಈಗ ಇತಿಹಾಸ. ಆದರೆ ಇತಿಹಾಸ ಸೃಷ್ಟಿಸುವ ಆರ್.ಆರ್.ಆರ್. ಯಾತ್ರೆ ಇನ್ನೂ ಮುಗಿದಿಲ್ಲ.
ರಾಜಮೌಳಿ-ರಾಮ್ ಚರಣ್ ತೇಜ-ತಾರಕರತ್ನ ರಾಮರಾವ್ ಜೋಡಿಯ ಆರ್.ಆರ್.ಆರ್. ಈಗಾಗಲೇ ಹಲವು ಮೈಲಿಗಲ್ಲುಗಳನ್ನು ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಬಾಕ್ಸಾಫೀಸಿನಲ್ಲಿ ದಾಖಲೆಗಳ ಪರ್ವತವನ್ನೇ ಸೃಷ್ಟಿಸಿದೆ.ಭಾರತದಲ್ಲಷ್ಟೇ ಅಲ್ಲ, ಜಪಾನ್‍ನಲ್ಲೂ ಬಾಕ್ಸಾಫೀಸ್ ದಾಖಲೆ ಬರೆದಿದೆ. ನಾಟು ನಾಟು ಹಾಡಿನ ಸಂಗೀತಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದಿರುವ ಆರ್.ಆರ್.ಆರ್. ಇದೀಗ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್‍ನ್ನೂ ಗೆದ್ದುಕೊಂಡಿದೆ. ಒಂದಲ್ಲ..ನಾಲ್ಕು ಪ್ರಶಸ್ತಿಗಳು.
ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್ 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ
1. ಬೆಸ್ಟ್ ಇಂಟರ್ನ್ಯಾಷನಲ್ ಫಿಲ್ಮ್
2. ಬೆಸ್ಟ್ ಆಕ್ಷನ್ ಫಿಲ್ಮ್
3. ಬೆಸ್ಟ್ ಸ್ಟಂಟ್ಸ್
4. ಬೆಸ್ಟ್ ಸಾಂಗ್ ವಿಭಾಗಗಳಲ್ಲಿ ಆರ್.ಆರ್.ಆರ್. ಚಿತ್ರ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
ಈ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಚಿತ್ರದ ಹೀರೋ ರಾಮ್ ಚರಣ್ ತೇಜ್ ಕೂಡಾ ಪ್ರಶಸ್ತಿ ಪ್ರದಾನ ಮಾಡುವ ಗೌರವ ಪಡೆದುಕೊಂಡಿದ್ದು ಇನ್ನೊಂದು ವಿಶೇಷ. ನನ್ನ ಸಂತಸವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಾಗುತ್ತಿಲ್ಲ. ಎಲ್ಲರಿಗೂ ನಾನು ಧನ್ಯವಾದಗಳನ್ನ ಅರ್ಪಿಸುತ್ತೇನೆ. ಬೆಸ್ಟ್ ಸ್ಟಂಟ್ಸ್ ಪ್ರಶಸ್ತಿ ಆಕ್ಷನ್ ಕೊರಿಯೋಗ್ರಾಫರ್ಗೆ ಸೇರಬೇಕು. ಅವರು ಈ ಚಿತ್ರಕ್ಕಾಗಿ ತುಂಬಾ ಶ್ರಮಿಸಿದ್ದರು ಜೈಹಿಂದ್ ಎಂದಿದ್ದಾರೆ.


ಆರ್.ಆರ್.ಆರ್. ಚಿತ್ರದ ‘ನಾಟು ನಾಟು’ ಹಾಡು ಆಸ್ಕರ್ ಪ್ರಶಸ್ತಿ ಗೆಲ್ಲುವ ರೇಸ್ನಲ್ಲಿದೆ. ಮಾರ್ಚ್ 12 ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಆರ್.ಆರ್.ಆರ್. ಚಿತ್ರತಂಡ ಪಾಲ್ಗೊಳ್ಳಲಿದೆ.



