ಇದು ಧ್ರುವ ಸರ್ಜಾಗೆ ಅಂಟಿದ ಶಾಪವೇ ಸರಿ. ಚಿತ್ರರಂಗಕ್ಕೆ ಬಂದು ಹೆಚ್ಚೂ ಕಡಿಮೆ 10 ವರ್ಷವಾಗುತ್ತಿದೆ. ಆದರೆ ಒಂದೊಂದು ಚಿತ್ರವೂ ಮಿನಿಮಮ್ 2 ವರ್ಷ ಟೈಂ ತೆಗೆದುಕೊಂಡಿದೆ. ಒಂದೊಂದು ಚಿತ್ರಕ್ಕೂ ಒಂದೊಂದು ಪ್ರಾಬ್ಲಂ. ಎ.ಪಿ.ಅರ್ಜುನ ಅವರೇ ಪರಿಚಯಿಸಿದ ಹೀರೋ ಧ್ರುವ ಸರ್ಜಾ. ಈಗ ಮತ್ತೊಮ್ಮೆ ಅವರ ಜೊತೆ ಸಿನಿಮಾ ಮಾಡುತ್ತಿದ್ಧಾರೆ. ಅದ್ಧೂರಿಯಲ್ಲಿ ಹೊಸ ಮುಖವಾಗಿದ್ದ ಧ್ರುವಾ, ಈಗ ಚಿತ್ರರಂಗದ ಬೇಡಿಕೆಯ ಸ್ಟಾರ್ ನಟ. ಈ ಚಿತ್ರವೂ ಕೂಡಾ ಸೆಟ್ಟೇರಿ 1.5 ವರ್ಷವಾಗಿದೆ. ರಿಲೀಸ್ ಆಗುವ ವೇಳೆಗೆ 2 ವರ್ಷ ಕಂಪ್ಲೀಟ್ ಆದರೂ ಆಶ್ಚರ್ಯ ಪಡಬೇಕಿಲ್ಲ.
2021ರ ಸೆಪ್ಟೆಂಬರ್ನಲ್ಲಿ ಈ ಸಿನಿಮಾ ಶುರುವಾಯಿತು. ಆದರೆ ಇದು ಇಷ್ಟೊಂದು ದಿನ ತೆಗೆದುಕೊಳ್ಳುತ್ತದೆ ಎಂದುಕೊಂಡಿರಲಿಲ್ಲ. ಹೈದರಾಬಾದ್ನಲ್ಲಿ ಸೆಟ್ ಹಾಕಿ 45 ದಿನ ಶೂಟಿಂಗ್ ಮಾಡಿದ್ದೇವೆ. ವಿಶಾಖಪಟ್ಟಣದಲ್ಲಿ 20 ದಿನ ಬರೀ ಚೇಸಿಂಗ್ ಸೀನ್ಗಳನ್ನೇ ಚಿತ್ರೀಕರಣ ಮಾಡಿದ್ದೇವೆ. ಈ ಮಧ್ಯೆ ಮಳೆಯಿಂದ ಕೊಂಚ ಸಮಸ್ಯೆ ಆಯಿತು. ಕಾಶ್ಮೀರದಲ್ಲಿ 25 ದಿನ ಶೂಟಿಂಗ್ ಮುಗಿಸಿ, ನಂತರ ಮುಂಬೈನಲ್ಲಿ ಚೇಸಿಂಗ್ ಸೀನ್ ಶೂಟಿಂಗ್ ಮಾಡಿದ್ದೇವೆ. ಒಂದೊಂದು ಶೆಡ್ಯೂಲ್ಗೂ ಒಂದಷ್ಟು ಗ್ಯಾಪ್ ಆಗುತ್ತಲೇ ಇತ್ತುಈ ಸಿನಿಮಾದಲ್ಲಿ ಧ್ರುವ ಸರ್ಜಾಗೆ ಹಲವು ಗೆಟಪ್ ಇದೆ. ನನ್ನ ವೃತ್ತಿ ಬದುಕಿನಲ್ಲಿ ಅತಿದೊಡ್ಡ ಪವರ್ ಪ್ಯಾಕ್ಡ್ ಚಿತ್ರವಿದು. ವಿಶೇಷವಾದ ಮೋಕೋಬೋಟ್ ಕ್ಯಾಮೆರಾದಲ್ಲಿ ಬಳಸಿ 52 ದಿನ ಬರೀ ಕ್ಲೈಮ್ಯಾಕ್ಸ್ ಅನ್ನೇ ಶೂಟಿಂಗ್ ಮಾಡಿದ್ದೇವೆ. ರಾಮ್ ಲಕ್ಷ್ಮಣ್, ರವಿವರ್ಮಾ ಇದರ ಚಿತ್ರೀಕರಣ ಮಾಡಿದ್ದಾರೆ ಹೀಗೆ ಮಾಹಿತಿ ಬಿಚ್ಚಿಡುತ್ತಾರೆ ಮಾರ್ಟಿನ್ ಚಿತ್ರದ ಡೈರೆಕ್ಟರ್ ಎ.ಪಿ.ಅರ್ಜುನ್.


ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬ ಭಿನ್ನವಾಗಿದ್ದು, ಈವರೆಗೂ ಮಾಡಿರುವ ಪಾತ್ರಗಳಿಗಿಂತ ಬೇರೆ ಥರ ಇದೆ. ನನಗೆ ಇಲ್ಲಿ ಡೈಲಾಗ್ ಕೂಡ ಕಡಿಮೆ ಇದೆ. ಫೈಟ್ ಸೀನ್ ಜಾಸ್ತಿ ಇದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷವೇ ಈ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಸಿನಿಮಾ ದೊಡ್ಡಮಟ್ಟದಲ್ಲಿ ನಿರ್ಮಾಣ ಆಗುತ್ತಿರುವುದರಿಂದ ಸಮಯ ತೆಗೆದುಕೊಳ್ಳುತ್ತಿದೆ. ಇನ್ನೂಹಾಡಿನ ಚಿತ್ರೀಕರಣ ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ ನಾಯಕ ನಟ ಧ್ರುವ ಸರ್ಜಾ.
ಅಂದರೆ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಅದರೆ ಚಿತ್ರದ ಮೊದಲ ಟೀಸರ್ ಅನ್ನು ಫೆ.23ಕ್ಕೆ ರಿಲೀಸ್ ಆಗಲಿದೆ. ಫೆ.23ರಂದು ಅಭಿಮಾನಿಗಳಿಗೋಸ್ಕರ ಪೇಯ್ಡ್ ಪ್ರೀಮಿಯರ್ ಟೀಸರ್ ಪ್ರದರ್ಶನವನ್ನು ಬೆಂಗಳೂರಿನ ವೀರೇಶ್ ಥಿಯೇಟರ್ನಲ್ಲಿ ಏರ್ಪಡಿಸಿದ್ದೇವೆ. ಹಾಗಂತ ಇದರಿಂದ ಹಣ ಮಾಡುವ ಉದ್ದೇಶವಿಲ್ಲ. ಇದರಿಂದ ಬಂದ ಹಣವನ್ನು ಗೋಶಾಲೆಗೆ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಉದಯ್ ಕೆ.ಮೆಹ್ತಾ. . ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದರೆ, ತೆಲುಗಿನ ಮಣಿಶರ್ಮಾ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಧ್ರುವ ಸರ್ಜಾಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿದ್ದು, ಅಚ್ಯುತ್ ಕುಮಾರ್, ಮಾಳವಿಕ ಅವಿನಾಶ್, ಸಾಧು ಕೋಕಿಲ ಮೊದಲಾದವರು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಏಕಕಾಲದಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.



