ಘೋಸ್ಟ್ (Ghost) ರಿಲೀಸ್ ಆಗಿ ಗೆದ್ದೂ ಆಗಿದೆ. ಚಿತ್ರ ನೋಡಿದ ಅಭಿಮಾನಿಗಳಂತೂ ಥ್ರಿಲ್ಲಾಗಿದ್ದಾರೆ. ಇದೀಗ ಘೋಸ್ಟ್ 2 (ghost part 2) ಕೂಡಾ ಬರಲಿದೆ ಎಂದು ನಿರ್ದೇಶಕ ಶ್ರೀನಿ ಸುಳಿವು ಕೊಟ್ಟಿದ್ದಾರೆ. ದಳವಾಯಿ (dalavayi) ಬದುಕಿದ್ದಾನ? ಅಂಡ್ಪಾಸ್ ಒಳಗಡೆ ಕಾರುಗಳು, ಬೈಕ್ಗಳು ಹೆಂಗ್ ಬಂತು? ಶಿವಣ್ಣ sಣಚಿಣue ಒಳಗಡೆ ಹೆಂಗ್ ಹೋದ್ರು? ಬೋಟ್ಸ್ ಆಪರೇಟ್ ಮಾಡ್ತಿದ್ದೋರು ಯಾರು? ದಳವಾಯಿ ಮಗ ಯಾರು? ಈ ಎಲ್ಲ ಪ್ರಶ್ನೆಗಳಿಗೂ ‘ಘೋಸ್ಟ್ 2’ ಚಿತ್ರದಲ್ಲಿ ಉತ್ತರಗಳಿವೆ.. ಎಂದಿದ್ದಾರೆ ಡೈರೆಕ್ಟರ್ ಶ್ರೀನಿ.
ಘೋಸ್ಟ್ ಚಿತ್ರದಲ್ಲಿ ಶಿವಣ್ಣ ದಳವಾಯಿ ಎಂಬ ಗ್ಯಾಂಗ್ಸ್ಟರ್ ಪಾತ್ರ ಮಾಡಿದ್ದಾರೆ. ಆ ದಳವಾಯಿ ಬದುಕಿದ್ದಾನಾ? ಇಲ್ವಾ ಅನ್ನೋ ಅನುಮಾನ ಇದೆ. ಒಂದು ಸೀನ್ನಲ್ಲಿ ಅಂಡರ್ಪಾಸ್ ಒಳಗೆ ಕಾರು, ಬೈಕ್ ಎಲ್ಲ ಬರ್ತಾವೆ. ಅವೆಲ್ಲ ಹೇಗೆ ಬಂದ್ವು ಅನ್ನೋ ಡೌಟ್ ಕೂಡ ಅನೇಕರಲ್ಲಿ ಇದೆ. ಜೊತೆಗೆ ಇದರಲ್ಲಿ ಬರುವ ಟಾಯ್ ಬೋಟ್ಗಳನ್ನ ಆಪರೇಟ್ ಮಾಡೋದು ಯಾರು ಅನ್ನೋದು ಇನ್ನೊಂದು ಡೌಟು. ಕೊನೆಯದಾಗಿ ಸಿನಿಮಾದಲ್ಲಿ ಗ್ಯಾಂಗ್ಸ್ಟರ್ ದಳವಾಯಿ ಮಗನ ಪಾತ್ರ ಬರುತ್ತದೆ. ಆದರೆ ಆ ಪಾತ್ರ ಮಾಡಿರುವ ನಟ ಯಾರು ಅಂತ ತೋರಿಸುವುದಿಲ್ಲ. ಇದರ ಬಗ್ಗೆಯೂ ನೋಡುಗರಲ್ಲಿ ಕುತೂಹಲ ಇದೆ. ಇದಕ್ಕೆಲ್ಲ ಉತ್ತರ ಕೊಡ್ತೀನಿ ಅಂತಿದ್ದಾರೆ ನಿರ್ದೇಶಕ ಶ್ರೀನಿ.
ಚಿತ್ರದಲ್ಲಿ ಶಿವಣ್ಣ ಎರಡು ಶೇಡ್ʻಗಳಲ್ಲಿ ನಟಿಸಿದ್ದಾರೆ. ಒಂದು ಘೋಸ್ಟ್ ಮತ್ತೊಂದು ದಳವಾಯಿಯ ಪಾತ್ರ. ಜೈಲ್ ಬ್ರೇಕ್ ಥ್ರಿಲ್ಲರ್ ಕಥೆಗೆ ಸಂದೇಶ್ ನಿರ್ಮಾಪಕರು. ಶಿವರಾಜ್ಕುಮಾರ್ ಅವರ ಜೊತೆಗೆ ಜಯರಾಮ್, ಅನುಪಮ್ ಖೇರ್, ವಿಜಯಲಕ್ಷ್ಮೀ ಸಿಂಗ್, ಅರ್ಚನಾ ಜೋಯಿಸ್, ಪ್ರತಾಪ್ ನಾರಾಯಣನ್, ಸತ್ಯಪ್ರಕಾಶ್, ಓಂ ಪ್ರಕಾಶ್ ರಾವ್, ಅಶೋಕ್ ಹೆಗಡೆ ಮುಂತಾದವರು ನಟಿಸಿದ್ದಾರೆ.



