ನಟಿ ಸುಹಾಸಿನಿ (actress Suhasini). ಆಕೆಯ ಸ್ನಿಗ್ಧ ನಗುವಿಗೆ ಮರುಳಾಗದವರಿಲ್ಲ. ಅಪ್ಪಟ ಕಲಾವಿದೆ. ಕನ್ನಡಿಗರು ಸುಹಾಸಿನಿಯನ್ನು (suhasini) ಪ್ರೀತಿಸುವುದು ವಿಷ್ಣು ಜೊತೆ ನಟಿಸಿದ್ದ ಕಾರಣಕ್ಕೆ ಎನ್ನುವುದು ಅತಿಶಯೋಕ್ತಿಯದರೂ ಸತ್ಯ. ಏಕೆಂದರೆ ವಿಷ್ಣುವರ್ಧನ್ (Vishnuvardhan) ಅವರ ಕ್ಲಾಸಿಕ್ ಚಿತ್ರಗಳಲ್ಲಿ ಬಂಧನ (Bandhana), ಮತ್ತಿನ ಹಾರ (Muttina hara), ಸುಪ್ರಭಾತ (suprabhatha) ಚಿತ್ರಗಳಿವೆ. ಹಾಗೆ ವಿಷ್ಣು ಜೊತೆ ನಟಿಸಿದ್ದ ಚಿತ್ರಗಳೆಲ್ಲ ಸಕ್ಸಸ್ ಆಗಿವೆಯಷ್ಟೇ ಅಲ್ಲ, ಕ್ಲಾಸಿಕ್ ಪಟ್ಟಕ್ಕೇರಿರುವುದು ಕೂಡಾ ಅದಕ್ಕೆ ಕಾರಣ. ಇನ್ನು ಭಾರತ ಚಿತ್ರರಂಗದಲ್ಲಿ ಸುಹಾಸಿನಿ ಅವರಿಗೆ ಇರುವ ಸ್ಥಾನವೇ ಬೇರೆ. ಸುಹಾಸಿನಿ (actress Suhasini) ನಟಿಸಿರುವ ಚಿತ್ರಗಳಲ್ಲಿ ಅಶ್ಲೀಲತೆ ಇರುವುದಿಲ್ಲ. ಸುಹಾಸಿನಿ ರೊಮ್ಯಾಂಟಿಕ್ ಸೀನುಗಳಲ್ಲೂ ಒಂದು ಗಾಂಭಿರ್ಯ ಇಟ್ಟುಕೊಂಡೇ ಇರುತ್ತಾರೆ. ಇಂತಹ ಸುಹಾಸಿನಿಗೂ ಆರಂಭದ ದಿನಗಳಲ್ಲಿ ಕಾಟ ಕೊಡುವ ದೃಶ್ಯಗಳಲ್ಲಿ ನಟಿಸುವಂತೆ ಪೀಡಿಸಿದ್ದರೆಂದರೆ ಅಚ್ಚರಿ ಆಗುತ್ತೆ. ಏಕೆಂದರೆ ಸುಹಾಸಿನಿ ಚಿತ್ರರಂಗದ ಗಣ್ಯರ ಕುಟುಂಬಕ್ಕೆ ಸೇರಿದವರು. ಅಪ್ಪ ಚಾರುಹಾಸನ್ (ತಬರನ ಕಥೆ ಖ್ಯಾತಿ). ಕಮಲ್ ಹಾಸನ್ () ಚಿಕ್ಕಪ್ಪ. ಹೀಗಿದ್ದರೂ ಸುಹಾಸಿನಿಗೆ ಕಾಟಗಳಿದ್ದವು.
ಹೀರೋ ತೊಡೆಯ ಮೇಲೆ ಕುಳಿತುಕೊಳ್ಳುವುದು, ಹೀರೋ ತಿಂದು ಕೊಟ್ಟ ಐಸ್ʻಕ್ರೀಂ ತಿನ್ನುವ ದೃಶ್ಯಗಳನ್ನು ಕೊಟ್ಟಿದ್ದರಂತೆ ಡೈರೆಕ್ಟರ್ಸ್. ನಾನು ಆಗ ತಾನೇ ಚಿತ್ರರಂಗಕ್ಕೆ ಕಾಲಿಟ್ಟಿದ್ದೆ. ಅವಕಾಶಗಳು ಕಡಿಮೆ, ಆದರೆ ಬಂದಿದ್ದು ನಾಯಕಿ ಪಾತ್ರಗಳೇ ಆಗಿದ್ದವು. ಒಮ್ಮೆ ಒಬ್ಬ ನಿರ್ದೇಶಕರು ಚಿತ್ರದ ಸನ್ನಿವೇಶವೊಂದರಲ್ಲಿ ನಾನು ನಾಯಕನಟನ ತೊಡೆಯ ಮೇಲೆ (ಮಡಿಲಲ್ಲಿ) ಕುಳಿತುಕೊಳ್ಳುವಂತೆ ಹೇಳಿದ್ದರು. ಆದರೆ ನನಗದು ಇಷ್ಟವಾಗದ ಕಾರಣಕ್ಕೆ ನಾನು ‘ಅದು ನನ್ನಿಂದ ಸಾಧ್ಯವಿಲ್ಲ. ಸೀನ್ನಲ್ಲಿ ಬೇರೆ ಏನಾದರೂ ಮಾಡಿ’ ಎಂದಿದ್ದೆ ಎಂದಿದ್ದಾರೆ ಸುಹಾಸಿನಿ. ಅಷ್ಟೇ ಅಲ್ಲ, ಇನ್ನೊಂದು ಚಿತ್ರದಲ್ಲಿ ಒಂದು ಸೀನ್ನಲ್ಲಿ ನಾನು ನಾಯಕ ತಿಂದು ಬಿಟ್ಟ ಐಸ್ಕ್ರೀಂ ತಿನ್ನಬೇಕಿತ್ತು. ಹಾಗೇ ಮಾಡಿ ಎಂದು ಹೇಳಿದರು ಕೂಡ. ಆದರೆ, ನನಗೆ ಎಂಜಲು ತಿನ್ನಲು ಇಷ್ಟವಿರಲಿಲ್ಲ. ಆಗಲೂ ಅಷ್ಟೇ, ನಾನು ಅದಕ್ಕೆ ಸುತಾರಾಂ ಒಪ್ಪಿಲಿಲ್ಲ. ನನಗೆ ಎಂಜಲು ತಿನ್ನಲು ಆಗದು, ಬೇರೆ ಐಸ್ಕ್ರೀಂ ತರಿಸಿ ಅಥವಾ ಬೇರೆ ಏನಾದರೂ ಮಾಡಿ ಎಂದು ಹೇಳಿದ್ದೆ. ಎರಡೂ ಕಡೆ, ನಾನು ಹೇಳಿದಂತೆ ಬದಲಾವಣೆ ಮಾಡಿಕೊಂಡಿದ್ದರು. ನನಗೆ ಹೀಗಾಗಿ ತೊಂದರೆ ಆಗಲಿಲ್ಲ” ಎಂದಿದ್ದಾರೆ.
ನಿರ್ದೇಶಕಿಯೂ ಆಗಿರುವ ಸುಹಾಸಿನಿ, ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪತ್ನಿಯೂ ಹೌದು. ನನಗೆ ಇಷ್ಟವಿಲ್ಲದ್ದನ್ನು ಹೇಳುವ ವ್ಯಕ್ತಿತ್ವ ನನ್ನದು. ಅದು ಇವತ್ತಿನದ್ದಲ್ಲ. ಆರಂಭದ ದಿನಗಳಲ್ಲೂ ನಾನು ಹಾಗೆಯೇ ಇದ್ದೆ ಎಂದು ಹೇಳಿಕೊಂಡಿದ್ದಾರೆ.
ಕನ್ನಡದಲ್ಲಿ ಸುಹಾಸಿನಿ ನಟಿಸಿದ ಮೊದಲ ಚಿತ್ರ ಬೆಂಕಿಯಲ್ಲಿ ಅರಳಿದ ಹೂವು. ಅದಾದ ಮೇಲೆ ವಿಷ್ಣುವರ್ಧನ್-ಸುಹಾಸಿನಿ ಜೋಡಿ ಜನಪ್ರಿಯವಾಯಿತು. ಸುಹಾಸಿನಿ ಅತೀ ಹೆಚ್ಚು ನಟಿಸಿದ್ದು ವಿಷ್ಣು ಚಿತ್ರಗಳಲ್ಲಿಯೇ. ಬಂಧನ, ಮುತ್ತಿನ ಹಾರ, ಸುಪ್ರಭಾತ, ಹಿಮಪಾತ, ಹೆಂಡ್ತಿಗೇಳ್ತೀನಿ, ಸ್ಕೂಲ್ ಮಾಸ್ಟರ್, ಮಾತಾಡ್ ಮಾತಾಡ್ ಮಲ್ಲಿಗೆ ನಟಿಸಿದ್ದಾರೆ. ವಿಷ್ಣವರ್ಧನ್ ಅವರಲ್ಲದೆ ಅನಂತನಾಗ್ , ಅಂಬರೀಷ್, ರಮೇಶ್ ಅರವಿಂದ್, ಶಶಿಕುಮಾರ್ ಜೊತೆಯಲ್ಲೂ ನಟಿಸಿದ್ದಾರೆ. ಸುಹಾಸಿನಿ ಅಭಿನಯದ ಬಂಧನ, ಮುತ್ತಿನ ಹಾರ, ಅಮೃತವರ್ಷಿಣಿ, ಸುಪ್ರಭಾತ ಸಿನಿಮಾಗಳು ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲಿ ಸ್ಥಾನ ಪಡೆದುಕೊಂಡಿವೆ.



