ಸಾಮಾನ್ಯವಾಗಿ ಹೀರೋಗಳು ನಾಯಕಿಯರನ್ನ ಅಯ್ಯೋ ಅನ್ನಿಸಿ ಗೋಳು ಹೊಯ್ಕೊಳ್ಳೋದನ್ನ ನೋಡಿದ್ದೇವೆ. ಆದರೆ ಇಲ್ಲಿ ಉಲ್ಟಾ. ಗೋಳು ಹಾಕಿಸೋದು ಹೀರೋ ಆಲ್ಲ, ಮೂವರು ಹೀರೋಯಿನ್ಸ್ ಮತ್ತೊಬ್ಬಳು. ರಮ್ಯಾ..ರಕ್ಷಿತಾ ಮತ್ತು ರಾಧಿಕಾ. ಜೊತೆಗೆ ರಶ್ಮಿಕಾ.
ಗಣೇಶ್`ಗೇ ಚಮಕ್ಕಾ ಎನಿಸಿದರೆ ಕಾರಣ ಮಹೇಶ್ ಗೌಡರ ತ್ರಿಬ್ಬಲ್ ರೈಡಿಂಗು.
ಚಿತ್ರದ ಟ್ರೇಲರ್ ನೋಡಿದವರಿಗೆ ಒಂದಿಷ್ಟು ಉಲ್ಟಾ ಅನ್ನಿಸೋ ರೀತಿ ಸಿನಿಮಾ ಇದೆ. ಸಿನಿಮಾದಲ್ಲಿ ರಾಮ್ ಲಾಯರ್ ಮಗ. ವೃತ್ತಿಯಲ್ಲಿ ಡಾಕ್ಟರ್. ಸಕಲಕಲಾವಲ್ಲಭ. ಆದರೆ ಈ ರಾಮ್‍ನನ್ನು ತ್ರಿಬ್ಬಲ್ ರೈಡಿಂಗ್‍ನಲ್ಲಿ ಗಿರಗಿಟ್ಲೆ ಆಡಿಸ್ತಾರೆ ಆದಿತಿ ಪ್ರಭುದೇವ. ಮೇಘಾ ಶೆಟ್ಟಿ ಮತ್ತು ರಚನಾ ಇಂದರ್. ರಚನಾ ಇಂದರ್ ಸ್ವಲ್ಪ ಹೆಚ್ಚು ಮಾಕ್ರ್ಸ್ ಗಿಟ್ಟಿಸುತ್ತಾರೆ. ಲವ್ ಗೇಮ್‍ನಲ್ಲಿ ಲಾಜಿಕ್ ಹುಡುಕುವಂತಿಲ್ಲ. ಮ್ಯಾಜಿಕ್ಕಿಗೇನೂ ಕೊರತೆ ಇಲ್ಲ. ಸೀರಿಯಸ್ ಬಿಟ್ಟಾಕ್ರಪ್ಪಾ.. ನಕ್ಕು ನಕ್ಕು ನಕ್ಕು ಸುಸ್ತಾಗೋಣ ಎಂದುಕೊಂಡವರಿಗೆ ತ್ರಿಬ್ಬಲ್ ರೈಡಿಂಗ್ ಓಕೆ. ಗಣೇಶ್ ಜೊತೆ ನಟಿಸಿರೋ ಚೆಲುವೆಯರು ಗಣೇಶ್‍ಗೆ ಚಮಕ್ ಕೊಡೋದು ಕಿಕ್ ಕೊಡುತ್ತಾ ಹೋದರೆ ಪ್ರೇಕ್ಷಕರಿಗೂ ಕಿಕ್ಕು ಏರುತ್ತಾ ಹೋಗುತ್ತದೆ. ಗರುಡನ ಪಾತ್ರದಲ್ಲಿ ಸಾಧು ಮಹರಾಜ್ ನಕ್ಕು ನಲಿಸಿದರೆ, ರವಿಶಂಕರ್ ಎಂಟ್ರಿ ಆದ ಮೇಲೆ ನಗೋಕೆ ತಾತಕ್ ಬೇಕು. ಮಹೇಶ್ ಗೌಡ ನಕ್ಕು ನಗಿಸುತ್ತಲೇ ಬೊಂಬಾಟ್ ತ್ರಿಬಲ್ ರೈಡಿಂಗ್ ಮಾಡಿದ್ದಾರೆ.



