ಮಾನವೀಯತೆಯೇ ಒಂದು ಕ್ರೈಂ..
ದೇವರೇ ಒಬ್ಬ ಕ್ರಿಮಿನಲ್..
ಪ್ರೀತಿ, ಅಪರಾಧವನ್ನು ಆಳುತ್ತದೆ..
ಒಂದೊಂದು ಗನ್ನಿಗೂ ಒಂದೊಂದು ಸೌಂಡ್ ಇರುತ್ತೆ..
ಮಧ್ಯೆ ಮಧ್ಯೆ ಕ್ರೌರ್ಯದ ದೇವತೆಯೂ ತಲೆ ತಗ್ಗಿಸುವಂತಹ ದೃಶ್ಯಗಳು. ಕಿವಿಗೆ ಕಾದ ಸೀಸ ಹೊಯ್ದಂತಹ ಡೈಲಾಗುಗಳು.. ಒಂದಕ್ಕಿಂತ ಒಂದು ಹಿಂಸೆ.. ಇಂತಹವುಗಳಿಂದೆಲ್ಲ ಈ ಮಟ್ಟಿಗೆ ಹಿಂಸೆ ಕೊಡಬಹುದಾ ಎಂಬ ಸಂಶಯ ಮೂಡುವಂಥಾ ರೀತಿ ಇದೆ ಥಗ್ಸ್ ಆಫ್ ರಾಮಗಢ. ಚಿತ್ರದ ಟ್ರೇಲರ್‍ನಲ್ಲಿ ಹಿಂಸೆಯೂ ಇದೆ. ರಕ್ತವೂ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಚಿತ್ರದ ಪಾತ್ರಗಳೆಲ್ಲ ಒಂದೋ ಭಯದಲ್ಲಿ ನಡುಗುತ್ತವೆ.. ಇಲ್ಲವೇ ಭಯ ಹುಟ್ಟಿಸುವುದಕ್ಕಾಗಿಯೇ ಬದುಕುತ್ತಾರೆ. ಭಯ ಹುಟ್ಟಿಸುವವರ ಮತ್ತು ಭಯ ಪಡುವವರ ಮಧ್ಯೆ ನಡೆಯುವ ಹೋರಾಟದ ಕಥೆಯೇ ಥಗ್ಸ್ ಆಫ್ ರಾಮಗಢ. ದುರ್ಬಲ ಹೃದಯ ಹಾಗೂ ಮನಸ್ಸಿನವರಿಗಂತೂ ಖಂಡಿತಾ ಈ ಸಿನಿಮಾ ಅಲ್ಲ. ಚಿತ್ರದ ಟ್ರೇಲರ್ ರಿಲೀಸ್ ಮಾಡಿರುವುದು ಡಾಲಿ ಧನಂಜಯ.

ಇಡೀ ತಂಡವನ್ನು ನೋಡಿ ತುಂಬಾ ಖುಷಿ ಆಯ್ತು. ನಿರ್ದೇಶಕ ಕಾರ್ತಿಕ್ ತುಂಬಾ ಒಳ್ಳೆಯ ಟೀಮ್ ಕಟ್ಟಿಕೊಂಡು, ಉತ್ತಮ ಕಲಾವಿದರನ್ನು ಇಟ್ಟುಕೊಂಡು ನೈಜ ಘಟನೆ ಆಧರಿಸಿದ ಈ ಸಿನಿಮಾವನ್ನು ಮಾಡಿದ್ದಾರೆ. ಚಿತ್ರದ ಪ್ರಮೋಷನ್ ಕೂಡ ತುಂಬಾ ಕ್ರಿಯೇಟಿವ್ ಆಗಿ ಮಾಡುತ್ತಿದ್ದಾರೆ. ಈ ಚಿತ್ರ ವರ್ಷದ ಮೊದಲ ಹಿಟ್ ಸಿನಿಮಾ ಆಗಲಿ. ಉತ್ತರ ಕರ್ನಾಟಕ ಭಾಗದಿಂದ ಇನ್ನಷ್ಟು ನಿರ್ದೇಶಕರು, ಕಲಾವಿದರು ಚಿತ್ರರಂಗಕ್ಕೆ ಬರಲಿ. ಆ ಭಾಗದ ಕಥೆಗಳನ್ನು ಹೇಳಲಿ.. ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. 

ಚಂದನ್ ರಾಜ್ ಮತ್ತು ಅಶ್ಚಿನ್ ಹಾಸನ್ ಲೀಡ್ ರೋಲ್‍ನಲ್ಲಿದ್ದಾರೆ. ಇದು ನೈಜ ಘಟನೆ ಆಧರಿಸಿ ಮಾಡಿರುವ ಚಿತ್ರ. ಹಿಂಸೆ ಸ್ವಲ್ಪ ಹೆಚ್ಚೇ ಇದೆ. ನೈಜ ಘಟನೆಗೆ ಹೆಚ್ಚು ನಿಷ್ಟರಾಗಿದ್ದೇವೆ ಎಂದವರು ನಿರ್ದೇಶಕ ಕಾರ್ತಿಕ್. ಕಾರ್ತಿಕ್ ಮಾರಲಭಾವಿ ಚಿತ್ರರಂಗಕ್ಕೆ ಬರಲು ಧನಂಜಯ ಅವರ ಜಯನಗರ 4ನೇ ಬ್ಲಾಕ್ ಕಿರುಚಿತ್ರವೇ ಕಾರಣ ಎನ್ನುವುದು ವಿಶೇಷ.
ನೈಜ ಘಟನೆ ಆಧಾರಿತ ಈ ಚಿತ್ರದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್ ಜೊತೆಗೆ ಮಹಾಲಕ್ಷ್ಮೀ, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಈ ಚಿತ್ರವನ್ನು ಭಾರತ್ ಟಾಕೀಸ್ ನಡಿ ಜೈ ಕುಮಾರ್, ಕೀರ್ತಿ ರಾಜ್ ನಿರ್ಮಾಣ ಮಾಡಿದ್ದಾರೆ.



