ಕೆಲವು ದಿನಗಳ ಹಿಂದೆಯೇ 100 ಕೋಟಿ ಕ್ಲಬ್ಗೆ ಹತ್ತಿರ ಹೋಗಿದ್ದ ಕಾಂತಾರ ಬೇರೆ ಭಾಷೆಯಲ್ಲೂ ರಿಲೀಸ್ ಆದ ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಕೇವಲ ಕರ್ನಾಟಕದಲ್ಲಷ್ಟೇ ಸಿನಿಮಾ 100 ಕೋಟಿ ರೂ. ಮಾಡುವ ಸಮೀಪದಲ್ಲಿದ್ದು ಅದೂ ಕೂಡಾ ದೂರವೇನಿಲ್ಲ. ಈಗ ಬಂದಿರೋ ಲೆಕ್ಕದ ಪ್ರಕಾರ ಕಾಂತಾರ ಕಲೆಕ್ಷನ್ 120 ಕೋಟಿ ದಾಟಿದೆಯಂತೆ. ರಿಷಬ್ ಶೆಟ್ಟಿ ಕೆರಿಯರಿನಲ್ಲೇ ಅತ್ಯದ್ಭುತ ಕಲೆಕ್ಷನ್ ಮಾಡಿ ಕಂಗೊಳಿಸುತ್ತಿದೆ ಕಾಂತಾರ. ಹೊಂಬಾಳೆಗೆ ಮತ್ತೊಮ್ಮೆ ಜಾಕ್ಪಾಟ್.
ಕಾಂತಾರ ಕನ್ನಡದಲ್ಲಿ 18 ದಿನದ ಲೆಕ್ಕ ಸಿಕ್ಕಿದೆ. ಮೂಲಗಳ ಪ್ರಕಾರ ಕಾಂತಾರ ಕನ್ನಡದಲ್ಲಿ ಅದೂ ಕೇವಲ ಕರ್ನಾಟಕದಲ್ಲಿ ಗಳಿಸಿದ ಹಣ 90 ಕೋಟಿಗೂ ಹೆಚ್ಚು. ವೀರೇಶ್ ಥಿಯೇಟರಿನಲ್ಲಿ 80ಕ್ಕೂ ಹೆಚ್ಚು ಶೋಗಳು ಸತತ ಹೌಸ್ಫುಲ್. ಮೈಸೂರು, ಬೆಂಗಳೂರು ಹಾಗೂ ಮಂಗಳೂರು ಭಾಗಗಳ ಕೆಲವು ಥಿಯೇಟರ್ ರಿಲೀಸ್ ಆದ ದಿನದಿಂದ ಇವತ್ತಿನ ಈ ಕ್ಷಣದವರೆಗೂ ಪ್ರತಿ ಶೋಗಳೂ ಹೌಸ್ ಫುಲ್ ಆಗುತ್ತಿವೆ.

ಹಿಂದಿಯಲ್ಲಿ ಶನಿವಾರ ರಿಲೀಸ್ ಆದ ಕಾಂತಾರ ಮೊದಲ ದಿನ 1.27 ಕೋಟಿ, 2ನೇ ದಿನ 2.75 ಕೋಟಿ ಗಳಿಸಿತ್ತು. 3ನೇ ದಿನ 3.5 ಕೋಟಿ ಗಳಿಸಿತ್ತು. ಮಾರನೇ ದಿನ ತ್ರಿಬಲ್ ಆಗಿ ಈಗ ಕಲೆಕ್ಷನ್ 10-12 ಕೋಟಿ ದಾಟುತ್ತಿದೆ.
ತೆಲುಗಿನಲ್ಲಿ ಮೊದಲ ದಿನವೇ 5 ಕೋಟಿ ಕಲೆಕ್ಷನ್ ಮಾಡಿದ್ದ ಕಾಂತಾರ ತೆಲುಗಿನಲ್ಲೂ ಭರ್ಜರಿ ಸಕ್ಸಸ್ ಕಂಡಿದೆ. ತಮಿಳಿನ ಲೆಕ್ಕ ಇನ್ನೂ ಸಿಕ್ಕಿಲ್ಲ.
ಈ ಹಾದಿಯಲ್ಲಿ ಕಾಂತಾರ ತೆಲುಗಿನಲ್ಲಿ ಆಯುಷ್ಮಾನ್ ಖುರಾನ ಅಭಿನಯದ ಡಾ.ಜಿ, ತೆಲುಗಿನ ಚಿರಂಜೀವಿ ಅಭಿನಯದ ಗಾಡ್ಫಾದರ್ ಚಿತ್ರವನ್ನು ಹಿಂದಿಕ್ಕಿದೆ. ಗಾಡ್ಫಾದರ್ ಅದ್ಭುತ ಓಪನಿಂಗ್ ಪಡೆದುಕೊಂಡಿದ್ದರೂ ನಂತರ ಹಿನ್ನಡೆ ಅನುಭವಿಸಿತ್ತು. ಮಲಯಾಳಂನಲ್ಲಿ ಇನ್ನೂ ಈ ವಾರ ರಿಲೀಸ್ ಆಗಬೇಕಿದೆ.



