ಧೂಮಂ. ಫಹಾದ್ ಫಾಸಿಲ್ ಮತ್ತು ಅಪರ್ಣ ಬಾಲಮುರಳಿ ಒಟ್ಟಿಗೇ ನಟಿಸಿರುವ ಚಿತ್ರವಿದು. ಲೂಸಿಯಾ ಪವನ್ ಕುಮಾರ್ ಡೈರೆಕ್ಟರ್. ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಇಬ್ಬರು ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದರು ಒಟ್ಟಿಗೇ ನಟಿಸಿರುವ ಚಿತ್ರ ಎಂದ ಮೇಲೆ ಸಹಜವಾದ ಕುತೂಹಲ ತಾನಾಗಿಯೇ ಸೃಷ್ಟಿಯಾಗುತ್ತದೆ. ಆ ನಿರೀಕ್ಷೆಗಳನ್ನು ಧೂಮಂ ದುಪ್ಪಟ್ಟುಗೊಳಿಸಿದೆ.
ದೊಡ್ಡ ಶ್ರೀಮಂತನಾಗುವ ಕನಸು ಕಾಣುವ ಯುವಕ, ಆತನಿಗೊಬ್ಬಳು ಪ್ರೇಯಸಿ. ಶ್ರೀಮಂತನಾಗುವ ಆಸೆ ಪಟ್ಟು ಹೋಗುವವರು ಸಡನ್ ಟ್ರ್ಯಾಪ್`ಗೆ ಸಿಕ್ಕು ಬೀಳ್ತಾರೆ. ಧೂಮಪಾನದ ಬಗ್ಗೆ ಎಚ್ಚರಿಕೆ ನೀಡುವ ಜಾಹೀರಾತನ್ನೂ ಜನ ಇಷ್ಟ ಪಡುವಂತೆ ಮಾಡುವಷ್ಟು ಕ್ರಿಯೇಟಿವಿಟಿ ಇರುವ ಫಹಾದ್, ಶ್ರೀಮಂತನಾಗಲು ಹೋಗಿ ಬೀಳೋ ಟ್ರ್ಯಾಪ್ ಎಂಥದ್ದು..? ಅದರಿಂದ ಆತ ಹೇಗೆ ಹೊರಬರುತ್ತಾನೆ.. ಸಸ್ಪೆನ್ಸ್.. ಥ್ರಿಲ್ ಕೊಡುವ ಅಂಶಗಳೂ ಢಾಳಾಗಿವೆ.
ಫಹಾದ್, ಅಪರ್ಣ ಬಾಲಮುರಳಿ ಜೊತೆ ಅಚ್ಯುತ್ ಕುಮಾರ್, ರೋಷನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್ ಮೊದಲಾದವರು ನಟಿಸಿದ್ದಾರೆ. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ಈ ಚಿತ್ರದ ಮೂಲಕ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಮಾಲಿವುಡ್ಗೆ ಕಾಲಿಟ್ಟಿದೆ.



