ಚಿನ್ನಾ ನಿನ್ನ ತೋಳಿನಲ್ಲಿ ಕಂದಾ ನಾನು..
ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇಬ್ಬರೂ ಮದುವೆಯಾಗುತ್ತಿದ್ದಾರೆ. ಎಂಗೇಜ್‍ಮೆಂಟ್ ಕೂಡಾ ಆಗಿದೆ ಎಂಬ ವರದಿಗಳಿಗೆ ಹರಿಪ್ರಿಯಾ ಕೊಟ್ಟ ಉತ್ತರ ಇದು. ಸಿಂಹವೊಂದು ಮಗುವನ್ನು ಎತ್ತಿಕೊಂಡಿರುವ ಪೋಸ್ಟರ್ ಹಾಕಿ ಹರಿಪ್ರಿಯಾ ಮಾರ್ಮಿಕವಾಗಿಯೇ ತಾವಿಬ್ಬರೂ ಎಂಗೇಜ್ಡ್ ಎಂಬ ಸಂದೇಶ ಸಾರಿದ್ದಾರೆ. ಇಂತಹ ಕ್ರಿಯೇಟಿವಿಟಿ ಹರಿಪ್ರಿಯಾಗೆ ಹೊಸದಲ್ಲ. ಸ್ವತಃ ಒಳ್ಳೆಯ ಬರಹಗಾರ್ತಿಯಾಗಿರುವ ಹರಿಪ್ರಿಯಾ, ನಟಿಯಷ್ಟೇ ಅಲ್ಲ, ಸಿಕ್ಕಾಪಟ್ಟೆ ಓದುತ್ತಾರೆ ಕೂಡಾ. ಹೀಗಾಗಿಯೇ.. ಪೋಸ್ಟ್ ಹಾಕಿದ್ದರೂ.. ಗುಟ್ಟು ಬಿಟ್ಟುಕೊಡದೆ ಸಿಂಹವೊಂದು ಮಗುವನ್ನು ಎತ್ತಿಕೊಂಡಿರುವ ಫೋಟೋ ಹಾಕಿ ಗುಟ್ಟನ್ನು ಓಪನ್ ಆಗಿ ಹೇಳದೆ ಆಟವಾಡಿದ್ದಾರೆ.
ವಸಿಷ್ಠ ಸಿಂಹ ಅವರೂ ಕೂಡಾ ಸುದ್ದಿಯನ್ನು ಕನ್‍ಫರ್ಮ್ ಮಾಡಿಲ್ಲ. ವಸಿಷ್ಠ ಸಿಂಹ ಅವರಿಗೆ ಟೈಮ್ಸ್ ಆಫ್ ಇಂಡಿಯಾದವರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಕಾಲಾಯ ತಸ್ಮೈ ನಮಃ.. ಅಷ್ಟೆ. ಮೂಗುತಿಯನ್ನು ಚುಚ್ಚಿಸಿಕೊಳ್ಳುವ ವಿಡಿಯೋದಿಂದ ಶುರುವಾದ ಕಥೆಯಿದು. ಎವರು ಚಿತ್ರ ಕನ್ನಡದಲ್ಲಿ ರೀಮೇಕ್ ಆಗುತ್ತಿದ್ದು, ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೊತೆಯಾಗಿ ನಟಿಸುತ್ತಿದ್ದಾರೆ. ಆ ಚಿತ್ರದ ಸೆಟ್‍ನಲ್ಲಿಯೇ ಶುರುವಾದ ಲವ್ ಸ್ಟೋರಿ, ಮದುವೆವರೆಗೂ ಬಂದು ನಿಂತಿದೆ. ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ರಿಲೀಸ್ ಹಂತಕ್ಕೂ ಬಂದಿಲ್ಲ. ಇವರಿಬ್ಬರ ಲವ್ ಸ್ಟೋರಿ ಮಾತ್ರ ಶ್ರೀರಸ್ತು ಶುಭಮಸ್ತು ಹಂತಕ್ಕೆ ಬಂದಿದೆ. ಉಳಿದಂತೆ ಅಭಿಮಾನಿಗಳ ಉತ್ತರವೇ ಬೊಂಬಾಟ್ ಆಗಿವೆ.
ಲಕ್ಷ್ಮೀ ನರಸಿಂಹ ನಮ್ಮ ಮನೆದೇವರು. ನರಸಿಂಹ ಅಂದ್ರೆ ವಿಷ್ಣು. ವಿಷ್ಣು ಅಂದ್ರೆ ಹರಿ. ಹರಿಪ್ರಿಯಾ ಅಂದ್ರೆ ವಿಷ್ಣು ಪ್ರಿಯ. ಹರಿಪ್ರಿಯಾ ಸಿಂಹನಿಗೆ ದೊರಕಿರುವುದು ಎಂದರೆ ಹರಿಗೆ ಪ್ರಿಯಾ ದೊರಕಿದಂತೆ. ಹರಿಪ್ರಿಯಾ ಹರಿಗೆ ಸಿಕ್ಕಿರೋದು ನಿಮ್ಮ ಪುಣ್ಯ ಮೇಡಂ. ನಿಮ್ಮಿಬ್ಬರ ಬದುಕು ಸುಖಮಯವಾಗಿರಲಿ – ಇಂತಿ ನಿಮ್ಮ ಅಭಿಮಾನಿ
ಸಿಂಹದ ಮರಿ
ಅಭಿನಂದನೆಗಳು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ
ನಿಮ್ಮ ಕಲ್ಪನೆ ಮತ್ತು ಹೋಲಿಕೆ ಸೂಪರ್’
ಇದು ಕ್ರಿಯೇಟಿವಿಯ ಪರಮಾವಧಿ. ಇಂತಹ ಐಡಿಯಾಗಳು ನಿಮಗೆ ಎಲ್ಲಿಂದ ಬರುತ್ತೆ
ಸಿಂಹ ಮತ್ತು ಚಿನ್ನ.. ಎರಡೂ ಚೆಂದ . ವಸಿಷ್ಠ ಸಿಂಹನ ತೋಳಿನಲ್ಲಿ ಚಿನ್ನದಂತಹ ಮಗು ಹರಿಪ್ರಿಯಾ
ವಸಿಷ್ಠ ‘ಸಿಂಹ’ನ ಕೈಹಿಡಿದ ಹರಿ ಪ್ರಿಯಾ
ವಸಿಷ್ಠ ಸಿಂಹನ ಪಾಲಿಗೆ ಹರಿಪ್ರಿಯಾ ಮುದ್ದು ಮಗು
ಅಭಿಮಾನಿಗಳು ಥ್ರಿಲ್ ಆಗಿ ಶುಭ ಕೋರುತ್ತಿದ್ದರೆ ಸಿಂಹದ ಮಡಿಲಲ್ಲಿರುವ ಕಂದಾ.. ಅಭಿಮಾನಿಗಳ ಉತ್ತರಗಳನ್ನು ಎಂಜಾಯ್ ಮಾಡುತ್ತಿದೆ. ಸಿಂಹ ಘರ್ಜಿಸುತ್ತಲೇ ಇಲ್ಲ. ಮಡಿಲಲ್ಲಿರುವ ಮಗುವನ್ನು ನೋಡಿಕೊಂಡು ಲಾಲಿಸುವುದೇ ದೊಡ್ಡ ಕೆಲಸವಾಗಿದೆಯೇನೋ..



