ನಟನಾದವನು ಇಲ್ಲಿ ರಾಜನಾದರೆ ಅಲ್ಲಿ ಭಿಕ್ಷುಕ. ಒಂದೆಡೆ ಕಳ್ಳನಾದರೆ ಮತ್ತೊಂದೆಡೆ ಪೊಲೀಸ್. ಒಂದ್ ಕಡೆ ರೌಡಿಯಾದರೆ ಮತ್ತೊಂದ್ ಕಡೆ ಸಮಾಜಸೇವಕ. ಹೀಗೆ ವಿಭಿನ್ನ ವಿಭಿನ್ನ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವವನೇ ನಿಜವಾದ ನಟ. ರಾಘವೇಂದ್ರ ರಾಜಕುಮಾರ್ ಅದೇ ರೀತಿ. ಒಂದೆಡೆ ರಾಘವೇಂದ್ರ ರಾಜಕುಮಾರ್ ಅವರು ರಾಜ್ಯಪಾಲರಾಗಿ ನಟಿಸಿರುವ ಧ್ರುವ 369 ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಮುಗಿದಿದ್ದರೆ, ಮತ್ತೊಂದೆಡೆ ಗುಜರಿ ಅಂಗಡಿ ಓನರ್ ಆಗಿರುವ 13 ಚಿತ್ರೀಕರಣವೂ ಮುಗಿದಿದೆ.




ಈ ಚಿತ್ರದ ಓಪನಿಂಗ್, ಇಂಟರ್‍ವೆಲ್ ಹಾಗೂ ಕ್ಲೈಮಾಕ್ಸ್‍ನಲ್ಲಿ ರಾಘಣ್ಣ ಬರುತ್ತಾರೆ. ಅವರಿಂದಲೇ ಇಡೀ ಚಿತ್ರದ ಕಥೆ. ಅವರು ರಾಜ್ಯಪಾಲರ ಪಾತ್ರ ಮಾಡಿದ್ದಾರೆ ಎಂದು ವಿವರ ನೀಡಿದ್ದಾರೆ ಶಂಕರ್ ನಾಗ್.
ಪುನೀತ್ ನಿಧನದ ನಂತರ ಆತ್ಮವಿಶ್ವಾಸದಿಂದ ಇದ್ದರೂ ರಾಘಣ್ಣ ಏನೆಂದು ಕುಟುಂಬದವರಿಗೆ ಗೊತ್ತಿದೆ. ರಾಘಣ್ಣ ಅವರನ್ನು ಆಕ್ಟಿವ್ ಆಗಿಡಲು ಒಂದರ ಹಿಂದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ, ಅಶ್ವಿನಿ ಸೇರಿದಂತೆ ಎಲ್ಲರೂ ರಾಘಣ್ಣ ಅವರನ್ನು ಆಕ್ಟಿವ್ ಆಗಿಡಲು ಪ್ರಯತ್ನಿಸುತ್ತಿದ್ದಾರೆ. ಹೀಗಿರುವಾಗಲೇ ರಾಘವೇಂದ್ರ ರಾಜಕುಮಾರ್ ಒಟ್ಟೊಟ್ಟಿಗೇ ಎರಡು ಚಿತ್ರಗಳ ಶೂಟಿಂಗ್ ಮುಗಿಸಿರುವುದು ವಿಶೇಷ.



