ನಾಟು ನಾಟು.. ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಆಸ್ಕರ್ ಪ್ರಶಸ್ತಿ ಯೂರೋಪಿಯನ್ ದೇಶಗಳು ಸಿನಿಮಾಗಳಿಗೆ ನೀಡುವ ಅವಾರ್ಡ್. ಪ್ರಶಸ್ತಿ ಕೊಡುವುದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಲಾಬಿಯೂ ಇರುತ್ತದೆ ಎನ್ನುವುದು ಸುಳ್ಳಲ್ಲ. ಆದರೆ ಚಿತ್ರರಂಗದವರು ಆಸ್ಕರ್ ಪ್ರಶಸ್ತಿಯನ್ನು ಅತೀ ದೊಡ್ಡ ಪ್ರಶಸ್ತಿ, ಕಿರೀಟ ಎಂದು ಗೌರವಿಸುತ್ತಾರೆ. ನಿಮಗೆ ಗೊತ್ತಿರಲಿ, ಆಸ್ಕರ್ ಪ್ರಶಸ್ತಿಗೆ ಹಣದ ಬಹುಮಾನ ಇರಲ್ಲ. ಕೇವಲ ಒಂದು ಟ್ರೋಫಿ. ತಾಮ್ರದ ಪ್ರತಿಮೆ/ಪುತ್ಥಳಿ ಚಿನ್ನದ ಕವರಿಂಗ್ ಇರುತ್ತದೆ, ಅಷ್ಟೆ, ಕೇವಲ ದುಡ್ಡಿನ ಲೆಕ್ಕದಲ್ಲಿ ನೋಡೋದಾದರೆ ಅದರ ಮೌಲ್ಯ ಕೇವಲ 1 ಡಾಲರ್. ಅಭಿಮಾನದ ಲೆಕ್ಕದಲ್ಲಿ ಅದಕ್ಕೆ ಕೋಟಿ ಕೋಟಿಗಳ ಬೆಲೆಯಿಂದೆ. ಆ ಮಾತು ಬೇರೆ.




ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು ಕೀರವಾಣಿ. ಸಾಹಿತ್ಯ ಬರೆದಿದ್ದು ಚಂದ್ರಬೋಸ್. ಹಾಡನ್ನು ಹಾಡಿದ್ದು ಕಾಲಭೈರವ ಮತ್ತು ರಾಹುಲ್ ಸಿಪ್ಲಿಗಂಜ್. ಕಾಲಭೈವರ ಕೀರವಾಣಿಯವರ ಮಗ. ನಿರ್ದೇಶಕ ರಾಜಮೌಳಿ ಪರಸ್ಪರ ಸಹೋದರರಾಗಬೇಕು. ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದವರ ಹೆಸರು ಪ್ರೇಮ್ ರಕ್ಷಿತ್.
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಟ ಪ್ರಶಸ್ತಿಗಳಲ್ಲೊಂದು. ಪ್ರತೀ ವರ್ಷ ಆಸ್ಕರ್ ಘೋಷಣೆಗೆ ಮುನ್ನ ಗೋಲ್ಡನ್ ಗ್ಲೋಬ್ ಘೋಷಣೆಯಾಗುತ್ತದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ಚಿತ್ರಗಳ ಬಗ್ಗೆ ಆಸ್ಕರ್ ಜ್ಯೂರಿಗಳಲ್ಲಿ ವಿಶೇಷ ಪ್ರೀತಿಯೂ ಇರುತ್ತದೆ. ಇದನ್ನು ಆಸ್ಕರ್ ನಂತರದ ಪ್ರತಿಷ್ಠಿತ ಪ್ರಶಸ್ತಿ ಎಂದೇ ಗುರುತಿಸುತ್ತದೆ ವಿಶ್ವ ಚಿತ್ರರಂಗ. ಭಾರತೀಯ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠ ಹಾಗೂ ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ಹೇಗೆ ಮಾನ್ಯತೆ ಪಡೆದಿವೆಯೋ, ಹಾಗೆಯೇ ವಿಶ್ವ ಚಿತ್ರರಂಗದಲ್ಲಿ ಆಸ್ಕರ್ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಮನ್ನಣೆಯಿದೆ.





