ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರಿಗೆ ಈಗ ಎಲ್ಲವೂ ಡಬಲ್ ಡಬಲ್. ಮೊದ ಮೊದಲು ಒಬ್ಬರೇ ಹೀರೋಯಿನ್. ಅವರನ್ನು ಪಡೆಯುವುದಕ್ಕೂ ತೆರೆಯ ಮೇಲೆ ಭಾರಿ ಸರ್ಕಸ್ ಮಾಡುತ್ತಿದ್ದ ಗಣೇಶ್ (Golden Star Ganesh) ಅವರಿಗೆ, ಇತ್ತೀಚೆಗೆ ಎಲ್ಲವೂ ಡಬಲ್ ಧಮಾಕಾ. ಗಣೇಶ್ ಚಿತ್ರಗಳಲ್ಲಿ ಹೆಚ್ಚಾಗಿ ಇಬ್ಬಿಬ್ಬರು ಹೀರೋಯಿನ್ ಕಾಣಿಸುತ್ತಿದ್ದಾರೆ. ತ್ರಿಬಲ್ ರೈಡಿಂಗ್`ನಲ್ಲಿ ಮೂರು ಮೂರೂ ಹೀರೋಯಿನ್ಸ್.. ಮುಗುಳುನಗೆಯಲ್ಲೂ ಮೂರು ಹೀರೋಯಿನ್ಸ್.. ಇದೀಗ ಬಾನದಾರಿಯಲ್ಲಿ ಕೂಡಾ ಇಬ್ಬರು ಹೀರೋಯಿನ್ಸ್ ಇದ್ದಾರೆ. ಮತ್ತೊಮ್ಮೆ.. ಗಣೇಶ್ ಅವರಿಗೆ ಡಬಲ್ ಹೀರೋಯಿನ್ಸ್.
ಕೃಷ್ಣಂ ಪ್ರಣಯ ಸಖಿ ಅನ್ನೋ ಹೊಸ ಚಿತ್ರದಲ್ಲೂ ಗಣೇಶ್ ಅವರಿಗೆ ಇಬ್ಬರು ಹೀರೋಯಿನ್ಸ್. ಇತ್ತೀಚೆಗೆ ಸಿನಿಮಾ ಸೆಟ್ಟೇರಿತ್ತು. ಮಾಳವಿಕಾ ನಾಯರ್ (Malavika Nair) ನಾಯಕಿ ಎನ್ನಲಾಗಿತ್ತು. ಇದೀಗ ಎರಡನೇ ನಾಯಕಿಯಾಗಿ ಶರಣ್ಯ ಶೆಟ್ಟಿ (Sharnya Shetty) ಎಂಬುವವರನ್ನು ಆಯ್ಕೆ ಮಾಡಿದ್ದಾರೆ ಡೈರೆಕ್ಟರ್ ಶ್ರೀನಿವಾಸ ರಾಜು.
ಯಾರಿದು ಶರಣ್ಯ ಶೆಟ್ಟಿ ಅಂದ್ರೆ ಗಟ್ಟಿಮೇಳ (Gattimela) ಧಾರಾವಾಹಿಯ ಸಾಹಿತ್ಯ ಪಾತ್ರಧಾರಿ. ಪ್ರಿಯಾಂಕಾ ಉಪೇಂದ್ರ ಅಭಿನಯದ ‘1980’ ಚಲನಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ ಶರಣ್ಯ ಶೆಟ್ಟಿ, ಹುಟ್ಟು ಹಬ್ಬದ ಶುಭಾಶಯಗಳು, ಪೆಂಟಗನ್ (Pentagan), ರವಿ ಬೋಪಣ್ಣ (Ravi Bopanna) ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ದಂಡುಪಾಳ್ಯ (Dandupalya) ಸೇರಿದಂತೆ ರಕ್ತಸಿಕ್ತ ಚಿತ್ರಗಳನ್ನೇ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಶ್ರೀನಿವಾಸ ರಾಜು (Sriniasa Raju), ಈ ಚಿತ್ರದ ಮೂಲಕ ರೊಮ್ಯಾಂಟಿಕ್ ಮೂಡಿಗೆ ಬಂದಿದ್ದಾರೆ.



