ಮಗಳು ಜಾನಕಿ. ಆ ಸೀರಿಯಲ್ಲಿನಿಂದಲೇ ಪರಿಚಿತವಾದ ಹುಡುಗಿ ಗಾನವಿ ಲಕ್ಷ್ಮಣ್‍ಗೆ ವೇದ ಚಿತ್ರದ ಮೂಲಕ ಬೇರೆಯದೇ ಇಮೇಜ್ ಸೃಷ್ಟಿಸೋಕೆ ಹೊರಟಿದ್ದಾರೆ. ವೇದ ಚಿತ್ರದ ಪಿಲ್ಲರ್‍ಗಳಲ್ಲಿ ಒಬ್ಬರು ಗಾನವಿ. ಅದರಲ್ಲೂ ಪುಷ್ಪ ಹಾಡಿನಲ್ಲಿ ಸಿಡುಕು ಮತ್ತು ಪ್ರೀತಿ ಎರಡನ್ನೂ ಕಣ್ಣಿನಲ್ಲೇ ಧಾರಾಳವಾಗಿ ಧಾರೆಯೆರೆದಿರುವ ಗಾನವಿ, ಟ್ರೇಲರ್‍ನಲ್ಲಿ ರಕ್ತಸಿಕ್ತ ಮುಖವನ್ನು ತೋರಿಸಿ ಬೆಚ್ಚಿ ಬೀಳಿಸುತ್ತಾರೆ.

ಸಾಮಾನ್ಯವಾಗಿ ಸಿನಿಮಾ ನಾಯಕಿಯರು ಎಂದರೆ ಗ್ಲಾಮರ್ ಲೋಕವನ್ನು ಇಷ್ಟಪಟ್ಟು ಇಲ್ಲವೇ ನಟನೆಯನ್ನು ಇನ್ನಿಲ್ಲದಂತೆ ಇಷ್ಟಪಟ್ಟು ಸಿನಿಮಾ ರಂಗಕ್ಕೆ ಬಂದಿರುತ್ತಾರೆ. ಆದರೆ ಗಾನವಿ ಹಾಗಲ್ಲ, ಸ್ವಲ್ಪ ವಿಭಿನ್ನ. ವೇದ ಚಿತ್ರದಲ್ಲಿ ಚಿತ್ರದ ಸ್ತ್ರೀಪಾತ್ರಗಳಿಗೆ ಬೇರೆಯದ್ದೇ ಮಹತ್ವವಿದೆ ಎಂದಿದ್ದರು ಎ. ಹರ್ಷ. ಅದಕ್ಕೆ ತಕ್ಕಂತೆಯೇ ಗಾನವಿ ಲಕ್ಷ್ಮಣ್, ಆದಿತಿ ಸಾಗರ್, ಶ್ವೇತಾ ಚೆಂಗಪ್ಪ ಹಾಗೂ ಹಿರಿಯ ನಟಿ ಉಮಾಶ್ರೀ ಪಾತ್ರಗಳು ಅಬ್ಬರಿಸುತ್ತಿವೆ. ಇವರಲ್ಲಿ ಗಾನವಿ ಲಕ್ಷ್ಮಣ್ ಶಿವಣ್ಣನ ಪುಷ್ಪಳಾಗಿ ನಟಿಸಿದ್ದಾರೆ ಗಾನವಿ ಲಕ್ಷ್ಮಣ್.
ನನಗೆ ವೇದ ಚಿತ್ರಕ್ಕೂ ಮುನ್ನ ಹಲವು ನಿರ್ದೇಶಕರು ಆಫರ್ ಮಾಡಿದ್ದರು. ಆದರೆ ನನಗೆ ಎಕ್ಸೈಟ್ ಎನಿಸಿದ್ದು ವೇದ ಚಿತ್ರದ ಈ ಪಾತ್ರ. ಹರ್ಷ ಅವರು ಹೇಳಿದ ಕಥೆ ಹೊಸ ಅನುಭವದ ಭರವಸೆ ಹುಟ್ಟಿಸಿತು. ಜೊತೆಗೆ ಶಿವಣ್ಣ ಬ್ಯಾನರ್. 125ನೇ ಸಿನಿಮಾ..ಎಲ್ಲವೂ ವೇದ ಚಿತ್ರವನ್ನು ಒಪ್ಪಿಕೊಳ್ಳುವಂತೆ ಮಾಡಿತು ಎನ್ನುವ ಗಾನವಿಗೆ ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕ. ಸೀತಾರಾಂ ಕಣ್ಣಿಗೆ ಬಿದ್ದ ಗಾನವಿ ಲಕ್ಷ್ಮಣ್, ಸೀತಾರಾಮ್ ಹೆಸರಿನ ಕಾರಣಕ್ಕಾಗಿಯೇ ಮಗಳು ಜಾನಕಿ ಸೀರಿಯಲ್ಲಿನಲ್ಲಿ ನಟಿಸಿದರು. ನಟಿಸಿದ್ದು ಸೀರಿಯಲ್ ಆದರೂ ಗಾನವಿಗೆ ಆ ಸೀರಿಯಲ್ ಕೊಟ್ಟ ಇಮೇಜ್ ಬೇರೆಯೇ.

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಮೊದಲ ಚಿತ್ರವೇ ರಿಷಬ್ ಶೆಟ್ಟಿ ಜೊತೆ. ಇಷ್ಟು ದಿನ ಎಲ್ಲಿದ್ರೀ ಎಂದಿದ್ದರಂತೆ ರಿಷಬ್. ರಿಷಬ್ ಶೆಟ್ಟಿಯವರ ಭರವಸೆಗೆ ತಕ್ಕಂತೆಯೇ ಹೀರೋ ಚಿತ್ರದ ಹೀರೋಯಿನ್ ಆಗಿ ಅದ್ಭುತವಾಗಿ ನಟಿಸಿದರು. ಅದಾದ ನಂತರ ಓಕೆ ಎಂದಿದ್ದು ವೇದ ಚಿತ್ರಕ್ಕೆ.
ಗಾನವಿ ಈಗ ತೆಲುಗಿಗೂ ಹೊರಟಿದ್ದಾರೆ. ರುದ್ರಾಂಗಿ ಅನ್ನೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಜಗಪತಿ ಬಾಬು, ಮಮತಾ ಮೋಹನ್ ದಾಸ್ ಕೂಡಾ ನಟಿಸುತ್ತಿದ್ದು, ಅಜಯ್ ಕುಮಾರ್ ಗೌನಿ ಡೈರೆಕ್ಟರ್.
ಅಂದಂತೆ ಗಾನವಿ ಸೈಕಾಲಜಿ ಮತ್ತು ಕ್ರಿಮಿನಾಲಜಿ ಓದಿರುವ ಪ್ರತಿಭೆ. ಸೈಕಾಲಜಿ ಮತ್ತು ಕ್ರಿಮಿನಾಲಜಿ ಸರಳವಾದ ಸಬ್ಜೆಕ್ಟುಗಳಲ್ಲ ಎನ್ನುವುದು ಗೊತ್ತಿರಲಿ. ಡಿಗ್ರಿ ಪಡೆದಿರುವ ಗಾನವಿ ಡ್ಯಾನ್ಸ್ ಟೀಚರ್ ಕೂಡಾ ಹೌದು. ರಂಗಭೂಮಿ ಹಾಗೂ ಶಾರ್ಟ್ ಫಿಲಂಗಳಲ್ಲಿ ತೆರೆಯ ಹಿಂದೆ ಕೆಲಸ ಮಾಡಿರುವ ಅನುಭವವೂ ಇರುವ ಗಾನವಿ ಡಿ.23ರ ವೇದ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.



