ಯಶ್ ಈ ಬಾರಿಯ ಹುಟ್ಟುಹಬ್ಬಕ್ಕೂ ಬೆಂಗಳೂರಿನಲ್ಲಿ ಇರಲ್ಲ. ಮೂಲಗಳ ಪ್ರಕಾರ ಅವರು ಭಾರತದಲ್ಲೇ ಇರಲ್ಲ. ಕುಟುಂಬ ಸಮೇತರಾಗಿ ಹೊರಗಿರುತ್ತಾರೆ. 2022ರಲ್ಲಿ ಪುನೀತ್ ನಿಧನದ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. 2021ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಕೊರೊನಾ ಆಚರಣೆಗೆ ಅವಕಾಶವೇ ಸಿಕ್ಕಿರಲಿಲ್ಲ. 2020ರಲ್ಲಿಯೂ ಅಷ್ಟೆ. ಅದಕ್ಕೆ ಮೊದಲು ಹುಟ್ಟುಹಬ್ಬ ಅದ್ಧೂರಿಯಾಗಿತ್ತು. ಕೆಜಿಎಫ್ ಚಾಪ್ಟರ್ 1 ಬಿಡುಗಡೆ ಸಮಯದಲ್ಲಿ ಒಂದು ಅದ್ಧೂರಿ ಸಮಾರಂಭವೇ ನಡೆದಿತ್ತು. ಅಂದು ಯಶ್ ಅಭಿಮಾನಿಗಳ ಜಾತ್ರೆ ನಡೆದು ಸಾವಿರಾರು ಅಭಿಮಾನಿಗಳ ಜೊತೆ ಯಶ್ ಹಬ್ಬ ಮಾಡಿಕೊಂಡಿದ್ದರು.

ಈಗ ಹೇಗಿದ್ದರೂ ಕೆಜಿಎಫ್ ಚಾಪ್ಟರ್ 2, ಭಯಂಕರ ಹಿಟ್ ಆಗಿದೆ. ಹೊಸ ಸಿನಿಮಾ ಇನ್ನೂ ಘೋಷಣೆ ಆಗಿಲ್ಲ. ಹೀಗಾಗಿ ಈ ಬಾರಿ ಯಶ್, ತಮ್ಮ ಅಭಿಮಾನಿಗಳ ಜೊತೆ ಇದ್ದೇ ಇರ್ತಾರೆ. ಹೊಸ ಸಿನಿಮಾ ಘೋಷಣೆ ಮಾಡಿಯೇ ಮಾಡ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್ಗೆ ನಿರಾಸೆಯಾಗಿದೆ. ನಮ್ಮ ಜೊತೆಯಲ್ಲಿ ಯಶ್ ಇರ್ತಾರೆ ಎಂದು ಕಾದಿದ್ದ ಯಶ್ ಅಭಿಮಾನಿಗಳು ಯಶ್ ಹುಟ್ಟುಹಬ್ಬವನ್ನೇ ತಾವು ತಾವೇ ಸೆಲಬ್ರೇಟ್ ಮಾಡಿಕೊಳ್ಳಬೇಕಷ್ಟೆ, ಅಲ್ಲಿ ಯಶ್ ಇರಲ್ಲ. ಬದಲಿಗೆ ಒಂದು ಸುದೀರ್ಘ ಪತ್ರ ಬರೆದಿದ್ದಾರೆ.

ಅಭಿಮಾನಿಗಳಿಗೆ ನಮಸ್ಕಾರ…
ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯೇ ಇಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಾ. ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದ್ದೆ ಇತ್ತೀಚಿನ ವರ್ಷಗಳಲ್ಲಿ. ಯಾವಾಗ ನೀವು ನನ್ನ ದಿನವನ್ನ ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಭಿಸೋಕೆ ಶುರು ಮಾಡಿದ್ದರಿಂದ. ಹಾಗಾಗಿ ನಾನು ಕೂಡ ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನ ನೋಡಬೇಕು. ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ. ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ.
ನಿಮಗಾಗಿ ವಿಭಿನ್ನವಾಗಿರೋದೆನನ್ನೂ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ . ಕ್ಷಮಿಸಿ..ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ, ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ
ನಿಮ್ಮ ಪ್ರೀತಿಯ ಯಶ್.
ಅಲ್ಲಿಗೆ ಯಶ್ ಹುಟ್ಟುಹಬ್ಬ ಅಭಿಮಾನಿಗಳಿಂದ. ಅಭಿಮಾನಿಗಳಿಗೆ ಮಾತ್ರ. ಯಶ್ ಹುಟ್ಟುಹಬ್ಬಕ್ಕಾಗಿ ಯಶ್ ಬಾಸ್ ಎಂಬ ಡಿಪಿ ಸಿದ್ಧ ಮಾಡಿಕೊಂಡು ಆಗಲೇ ಸೆಲಬ್ರೇಷನ್ ಶುರು ಹಚ್ಕೊಂಡಿದ್ದ ಅಭಿಮಾನಿಗಳಿಗೆ ಹುಟ್ಟುಹಬ್ಬಕ್ಕೆ 3 ದಿನ ಮುನ್ನ ಶಾಕ್ ಕೊಟ್ಟಿದ್ದಾರೆ. ಯಶ್, ರಾಮಾಚಾರಿ ಚಿತ್ರದ 8ನೇ ವರ್ಷದ ಸಕ್ಸಸ್ ಸೆಲಬ್ರೇಷನ್ನಿನಲ್ಲಿಯೂ ಇರುವುದಿಲ್ಲ. ಅದನ್ನೂ ಅಭಿಮಾನಿಗಳಷ್ಟೇ ಮಾಡಿಕೊಳ್ಳಬೇಕು.
ಆದರೆ ಯಶ್ ಸಮಯ ಕೇಳಿದ್ದಾರೆ. ಹೊಸದನ್ನು ಹೊಸದಾಗಿ ನಿರೀಕ್ಷೆ ಮುಟ್ಟುವಂತೆ ನೀಡುತ್ತೇನೆ ಎಂದಿದ್ದಾರೆ. ನಿಮ್ಮ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ. ಒಂದೊಳ್ಳೆ ಘೋಷಣೆ ಜೊತೆ ಬರುತ್ತೇನೆ ಎನ್ನುವುದಯ ಯಶ್ ಕೊಟ್ಟಿರುವ ಭರವಸೆ. ಒಂದೊಳ್ಳೆ ಚಿತ್ರ ಬಿಟ್ಟು ಅಭಿಮಾನಿಗಳು ನಟರಿಂದ ಇನ್ನೇನು ತಾನೇ ನಿರೀಕ್ಷಿಸುತ್ತಾರೆ. ಅಭಿಮಾನಿಗಳು ಕಾಯುತ್ತಿದ್ದಾರೆ.



