ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿರುವುದು ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ. ಒಟಿಟಿಯಲ್ಲಿ ನಡೆದ ಬಿಗ್ ಬಾಸ್ ಶೋನಲ್ಲಿ ಅತ್ಯಂತ ಆಪ್ತರಾದ ಸಾನ್ಯ ಮತ್ತು ರೂಪೇಶ್ ನಡುವೆ ಸಲುಗೆ ಹೆಚ್ಚಾಗಿದೆ. ಒಳ್ಳೆಯ ಕೆಮಿಸ್ಟ್ರಿಯೂ ಇದೆ. ಬಾಂಡಿಂಗ್ ಇದೆ. ಪರಸ್ಪರ ಹಗ್ ಮಾಡಿಕೊಳ್ಳುವುದು.. ಮತ್ತಿತರೆ ದೃಶ್ಯಗಳು ಒಂದಷ್ಟು ಜನರಿಗೆ ಇಷ್ಟವಾಗಿದ್ದರೆ ಹಲವರಿಗೆ ಕೋಪ ತರಿಸಿದೆ. ಒಂದು ಲಿಮಿಟ್ ದಾಟುತ್ತಿದ್ದಾರೆ ಎನ್ನುವುದು ಹಲವರ ಆರೋಪ. ಈ ಆರೋಪವನ್ನು ಇದೀ ಕಿಚ್ಚ ಸುದೀಪ್ ಮಾಡಿರುವುದು ವಿಶೇಷ.
ಶನಿವಾರದ ವೀಕೆಂಡ್‍ಗೆ ಬಂದಿದ್ದ ಕಿಚ್ಚ ಸುದೀಪ್ ಇಬ್ಬರಿಗೂ ಚೆನ್ನಾಗಿಯೇ ಬುದ್ದಿ ಹೇಳಿದ್ದಾರೆ. ರೂಪೇಶ್ ಮತ್ತು ಸಾನ್ಯಾ ಇಬ್ಬರಿಗೂ ಪಾಠ ಹೇಳಿದ್ದಾರೆ. ಇತ್ತೀಚೆಗೆ ಇಬ್ಬರ ರೊಮ್ಯಾನ್ಸ್ ಮಿತಿ ಮೀರಿತ್ತು. ಇದಕ್ಕೆ ಕಿಚ್ಚನ ಕ್ಲಾಸ್ ಆಗಿದೆ.ರೂಪೇಶ್ ಬೆಡ್ ಮೇಲೆ ಮಲದಿದ್ದರು. ಈ ವೇಳೆ ರೂಪೇಶ್ ಶೆಟ್ಟಿ ಮೇಲೆ ಸಾನ್ಯಾ ಅಯ್ಯರ್ ಮಲಗಿಕೊಂಡು ಮಾತನಾಡುತ್ತಿದ್ದರು. ಕತ್ತಲಾದರೂ ತಬ್ಬಿಕೊಂಡೇ ಇದ್ದರು. ಇದೊಂದು ಪಬ್ಲಿಕ್ ಸ್ಟೇಜ್. ಆಪ್ತತೆ ಏನಾದರೂ ಇರಲಿ, ಒಂದು ಸಾರ್ವಜನಿಕ ವೇದಿಕೆಯಲ್ಲಿ ಲಿಮಿಟ್ ಇರಬೇಕು ಎಂಬ ಅಭಿಪ್ರಾಯ ಕೇಳಿ ಬಂದಿತ್ತು.

ಕ್ಯಾಪ್ಟನ್ಸಿ ಅವಧಿ ಮುಗಿದ ಮೇಲೆ ನೀವು ಪಿಕ್‍ನಿಕ್ ಮಾಡ್ತಾ ಇದ್ರಿ. ಆ ರೂಂಗೆ ಒಂದು ವಿಶೇಷ ಗೌರವ ಇದೆ. ಅದು ಪಿಕ್‍ನಿಕ್ ಸ್ಪಾಟ್ ಅಲ್ಲ ಎಂದರು ಕಿಚ್ಚ. ನಾವು ಆ ಉದ್ಧೇಶದಲ್ಲಿ ಆ ರೀತಿ ಮಾಡಲಿಲ್ಲ ಎಂದು ಉತ್ತರ ಹೇಳೋಕೆ ಬಂದ ರೂಪೇಶ್‍ಗೆ ನೀವು ಮಿತಿಮೀರಿ ನಡೆದುಕೊಂಡಿದ್ದೀರಿ. ಆ ರೀತಿ ಆಗಿದ್ದಕ್ಕಾಗಿಯೇ ನಾವು ಆ ರೀತಿ ಹೇಳ್ತಿರೋದು. ನೀವು ಮಧ್ಯರಾತ್ರಿ ಹಗ್ ಮಾಡಿಕೊಳ್ತೀರಿ. ನಾವು ಇದಕ್ಕೆಲ್ಲ ಯಾವಾಗಲೂ ಅಪಸ್ವರ ತೆಗೆದಿಲ್ಲ. ಈ ಹಿಂದಿನ ಬಿಗ್ ಬಾಸ್ ಶೋನಲ್ಲಿಯೂ ಈ ರೀತಿ ಕ್ಲೋಸ್ ಆಗಿದ್ದವರು ಇದ್ದರು. ಈಗ ಹೇಳ್ತಿದ್ದೀವಿ ಅಂದ್ರೆ ಅರ್ಥ ಮಾಡ್ಕೊಳ್ಳಿ. ನೀವು ಈ ರೀತಿ ಮಾಡ್ತಿರೋದ್ರಿಂದಲೇ ಕಂಟೆಂಟ್ ಸಿಗುತ್ತಿದೆ ಎಂದುಕೊಂಡಿದ್ದರೆ ಅದಕ್ಕೆ ಈ ಶೋ ಇಲ್ಲ ಎನ್ನುವ ಮೂಲಕ ಬಿಗ್ ಬಾಸ್ ಅನ್ನೋದು ಏನೇನೋ ಮಾಡುವುದಕ್ಕೆ ಇರೋ ಶೋ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು ಕಿಚ್ಚ ಸುದೀಪ್.



