

ಬಾಲಿವುಡ್ನಲ್ಲಿ ಈ ಮಧ್ಯೆ ಸ್ವಲ್ಪ ದೊಡ್ಡ ಮಟ್ಟದ ಪ್ರದರ್ಶನ ಕಂಡ ಚಿತ್ರಗಳೆಂದರೆ ಬೂಲ್ ಬುಲಯ್ಯಾ 2 ಹಾಗೂ ಡಾ.ಸ್ಟ್ರೇಂಜ್ ಮಾತ್ರ. ಉಳಿದಂತೆ ಅಮೀರ್ ಖಾನ್ರ ಲಾಲ್ ಸಿಂಗ್ ಚಡ್ಡಾ, ಅಕ್ಷಯ್ ಕುಮಾರ್ರ ರಕ್ಷಾ ಬಂಧನ್, ರಾಣಾಪ್ರತಾಪ್ ಸೇರಿದಂತೆ ದೊಡ್ಡ ದೊಡ್ಡ ಚಿತ್ರಗಳು ಮಕಾಡೆ ಮಲಗಿವೆ. ಇದರ ಎಫೆಕ್ಟ್ ಆಗಿರುವುದು ಪಿವಿಆರ್ ಸಿನಿಮಾಸ್ ಲಾಭದ ಮೇಲೆ. ಒಟ್ಟಾರೆ 71 ಕೋಟಿ ನಷ್ಟ ತೋರಿಸುತ್ತಿದೆ ಪಿವಿಆರ್.
ಬಾಲಿವುಡ್ ಚಿತ್ರಗಳನ್ನೆ ಹೆಚ್ಚು ಪ್ರದರ್ಶನ ಮಾಡುವುದು ಹಾಗೂ ದುಬಾರಿ ದರ ಇದಕ್ಕೆ ಕಾರಣ ಎನ್ನುವುದು ಮೊದಲ ಉತ್ತರ. ಏಕೆಂದರೆ ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣದಲ್ಲಿ ಪಿವಿಆರ್ ಸಂಖ್ಯೆ ಕಡಿಮೆ. ಆ ಕಡಿಮೆಯಿರುವ ಸಂಖ್ಯೆಗಳಲ್ಲೂ ಹೆಚ್ಚು ಶೋಗಳನ್ನು ಹಿಂದಿ ಚಿತ್ರಗಳಿಗೆ ನೀಡುತ್ತಿರುವುದು ಕಾರಣ. ಅದಕ್ಕೆ ತಕ್ಕಂತೆ ತೆಲುಗು, ತಮಿಳು ಹಾಗೂ ಕನ್ನಡ ಚಿತ್ರಗಳ ಆರ್ಭಟದಲ್ಲಿ ಪಿವಿಆರ್ ನಷ್ಟದ ಹಿಂದೆ ಹೋಗುತ್ತಿದೆ. ಅದಕ್ಕೆ ತಕ್ಕಂತೆ ಬಾಲಿವುಡ್ ನೀರಸ ಪ್ರದರ್ಶನವೂ ಇದಕ್ಕೆ ಕಾರಣ ಎನ್ನಲಾಗಿದೆ.



