ಡಾ.ರಾಜ್ ಕಪ್ ಕ್ರಿಕೆಟ್ ಟೂರ್ನಿ ಈಗಾಗಲೇ ನಡೆಯುತ್ತಿದೆ. ರಾಜ್ ಕಪ್ ಕ್ರಿಕೆಟ್ ಸೀಸನ್ 6 ಶುರುವಾಗಿ ಆಗಿದೆ. ರಾಜ್ ಕಪ್ ಕ್ರಿಕೆಟ್ ಪಂದ್ಯಾವಳಿ ಸೀಸನ್ 6ನನ್ನು ಡಾ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ, ಜರ್ಸಿ ರಿಲೀಸ್ ಮಾಡುವ ಮೂಲಕ ಚಾಲನೆ ಕೊಟ್ಟಿದ್ದರು. ಡಾ.ರಾಜ್ ಕಪ್ ಸೀಸನ್ 6 ನವೆಂಬರ್ 28ರಿಂದ ಡಿಸೆಂಬರ್ 10ರವರೆಗೆ ನಡೆಯಲಿದೆ. ಈಗಾಗಲೇ ಲೀಗ್ ಮ್ಯಾಚ್‌ಗಳು ಆರಂಭವಾಗಿವೆ.
ವಿಶೇಷತೆಯೆಂದರೆ ರಾಜ್ ಕಪ್ ಕ್ರಿಕೆಟ್ ಈ ಬಾರಿ ವಿದೇಶಗಳಲ್ಲಿಯೇ ನಡೆಯುತ್ತಿರುವುದು. ಫೈನಲ್ ನಡೆಯುವುದು ಮಾತ್ರ ಕರ್ನಾಟಕದಲ್ಲಿ. ಆದರೆ ಈ ಬಾರಿ ಕರ್ನಾಟಕದ ಗಡಿಯನ್ನಲ್ಲ, ಭಾರತದ ಗಡಿ ದಾಟಿ ಹೋಗಿದೆ ರಾಜ್ ಕಪ್ ಕ್ರಿಕೆಟ್ ಖ್ಯಾತಿ. ನ.28 ಮತ್ತು 29ರಂದು ಶ್ರೀಲಂಕಾದಲ್ಲಿ ಪಂದ್ಯಾವಳಿಗಳು ನಡೆದಿವೆ. ಡಿ.1 ಮತ್ತು 2ರಂದು ಮಲೇಷ್ಯಾದಲ್ಲಿ ಮ್ಯಾಚ್ ನಡೆಯಲಿವೆ. ಡಿ. 3 ಮತ್ತು 4ರಂದು ಸಿಂಗಾಪುರದಲ್ಲಿ ಹಾಗೂ ಡಿಸೆಂಬರ್ 7 ಮತ್ತು 8ಕ್ಕೆ ಮಸ್ಕತ್‌ನಲ್ಲಿ ಕ್ರಿಕೆಟ್ ಮ್ಯಾಚ್ ನಡೆಯಲಿವೆ. ಫೈನಲ್ ಮಾತ್ರ ಕರ್ನಾಟಕದಲ್ಲಿ ನಡೆಯಲಿದೆ.
ರಾಜ್ ಕಪ್ ಸೀಸನ್ 6ರಲ್ಲಿ ನಟರಾದ ಡಾಲಿ ಧನಂಜಯ್, ಅನಿರುದ್ದ್, ‘ಡಾರ್ಲಿಂಗ್’ ಕೃಷ್ಣ, ಅಭಿಷೇಕ್ ಅಂಬರೀಶ್, ಸತೀಶ್ ‘ನೀನಾಸಂ’, ‘ಲೂಸ್ ಮಾದ’ ಯೋಗಿ, ವಸಿಷ್ಠ ಸಿಂಹ, ಪ್ರಜ್ವಲ್ ದೇವರಾಜ್, ಕೋಮಲ್ ಕುಮಾರ್, ಶ್ರೀನಗರ ಕಿಟ್ಟಿ, ರಾಜು ಗೌಡ ನೇತೃತ್ವದ ತಂಡಗಳು ಪಂದ್ಯದಲ್ಲಿ ಪಾಲ್ಗೊಳ್ಳುತ್ತಿವೆ. ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. 27 ಮ್ಯಾಚ್ ನಡೆಯಲಿವೆ.
ರಾಜ್ ಕಪ್ ಸೀಸನ್ 6 ತಂಡಗಳು ಹೀಗಿವೆ.
1. ಸಮೃದ್ದಿ ಫೈಟರ್ಸ್ – ಮಂಜುನಾಥ್
2. ಆಘಿ ಮ್ಯಾಕ್ಸ್ ಲೈನ್ಸ್ – ದಯಾನಂದ್
3. ರಾಮನಗರ ರಾಕರ್ಸ್- ಮಹೇಶ್ ಗೌಡ
4. ಇಐಗಿ ಲಯನ್ ಕಿಂಗ್ಸ್- ಪುರುಷೋತ್ತಮ್ ಭಾಸ್ಕರ್
5. ಂಗಿಖ ಟಸ್ಕರ್ಸ್- ಅರವಿಂದ್ ರೆಡ್ಡಿ
6. ಏಏಖ ಕಿಂಗ್ಸ್- ಲಕ್ಷ್ಮೀ ಕಾಂತ್ ರೆಡ್ಡಿ
7.ಖಚಿbiಣ ರೇಸರ್ಸ್- ಅರು ಗೌಡ
8. ಮಯೂರ ರಾಯಲ್ಸ್- ಸೆಂಥಿಲ್
9. ರಾಯಲ್ ಕಿಂಗ್ಸ್- ಶ್ರೀರಾಮ್ & ಮುಖೇಶ್
10. ಕ್ರಿಕೆಟ್ ನಕ್ಷತ್ರ- ನಕ್ಷತ್ರ ಮಂಜು
11. ಅಶು ಸೂರ್ಯ ಸೂಪರ್ ಸ್ಟಾರ್- ರಂಜಿತ್ ಫಯಾಜ್ ಖಾನ್
12. ರುಚಿರಾ ರೇಂಜರ್ಸ್- ರಾಮ್



