ಹೊಸ ವರ್ಷಕ್ಕೆ 2024ಕ್ಕೆ ಹ್ಯಾಪಿ ನ್ಯೂ ಇಯರ್ ಹೇಳೋದಕ್ಕೆ ಈ ಬಾರಿ ದರ್ಶನ್ ಬರ್ತಾ ಇದ್ದಾರೆ. ನಟ ದರ್ಶನ್ ಅಭಿನಯದ ಕಾಟೇರ ಚಿತ್ರದ ರಿಲೀಸ್ ಡೇಟ್ ಸಡನ್ನಾಗಿ ಘೋಷಣೆಯಾಗಿದೆ. . ಡಿಸೆಂಬರ್ 29ಕ್ಕೆ ಕಾಟೇರ ರಿಲೀಸ್ ಆಗುತ್ತಿದೆ.
ಈ ವರ್ಷ ರಿಲೀಸ್ ಸಾಧ್ಯ ಇರಲಿಕ್ಕಿಲ್ಲ ಎಂದುಕೊಂಡಿದ್ದ ಹೊತ್ತಿನಲ್ಲೇ ದಿಢೀರ್ ಎಂದು ರಿಲೀಸ್ ಡೇಟ್ ಘೋಷಿಸಿದ್ಧಾರೆ ತರುಣ್ ಸುಧೀರವ ಚಿತ್ರದ ಮೇಕಿಂಗ್ ವಿಡಿಯೋ ಜೊತೆಗೆ ದರ್ಶನ್ ಬೀಡಿ ಹಚ್ಚಿಕೊಳ್ಳೋ ಒಂದು ಸೀನ್ ಮತ್ತು ಊಟ ತಯಾರಾಗಿದೆ ಅನ್ನೋ ಒಂದು ಬೋರ್ಡ್ ಹಾಕಿ ರಿಲೀಸ್ ಡೇಟ್ ಘೋಷಿಸಿದ್ದಾರೆ. ಬೀಡಿ ಮತ್ತು ಬೆಂಕಿ ಕಡ್ಡಿಯನ್ನ ಒಟ್ಟಿಗೇ ಇಟ್ಟುಕೊಂಡು ಪಟ್ಟಣಕ್ಕೆ ಗೀರಿ ಬೀಡಿ ಹಚ್ಚಿಕೊಳ್ಳ್ ದೃಶ್ಯ ಸಖತ್ ಕಿಕ್ ಕೊಡುತ್ತಿದೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಬಿರಾದಾರ್, ಶ್ರುತಿ, ಕುಮಾರ್ ಗೋವಿಂದ್ ಚಿತ್ರದ ತಾರಾಗಣದಲ್ಲಿದ್ದಾರೆ.
ವಿ. ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ ಹಾಗೂ ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ದೇಶಕ ಜಡೇಶ್ ಹಾಗೂ ತರುಣ್ ಚಿತ್ರಕ್ಕೆ ಕತೆ ಸಿದ್ಧಪಡಿಸಿದ್ದಾರೆ. ಕನ್ನಡದಲ್ಲಿ ಮಾತ್ರ ‘ಕಾಟೇರ’ ಸಿನಿಮಾ ರಿಲೀಸ್ ಆಗಲಿದೆ. 70ರ ದಶಕದ ಕತೆಯನ್ನು ‘ಕಾಟೇರ’ ಚಿತ್ರದಲ್ಲಿ ಹೇಳಲಾಗುತ್ತಿದೆ.
ಅಂದಹಾಗೆ ಭೂಸುಧಾರಣಾ ಕಾಯ್ದೆ ಜಾರಿಗೆ ಬಂದಾಗ ಉಳುವವನೇ ಭೂಮಿಯ ಒಡೆಯ ಎಂದು ಸರ್ಕಾರ ಘೋಷಿಸಿದಾಗ.. ಹಳ್ಳಿಗಳಲ್ಲಿ ಆದ ತಾಕಲಾಟಗಳ ಕಥೆ ಚಿತ್ರದಲ್ಲಿದೆಯಂತೆ.
ಡಿಸೆಂಬರ್ 22ರಂದು ಹೊಂಬಾಳೆಯವರ ಸಲಾರ್ ಮತ್ತು ಹಿಂದಿಯಲ್ಲಿ ಶಾರೂಕ್ ಖಾನ್ ಅಭಿನಯದ ಡಂಕಿ ರಿಲೀಸ್ ಆಗುತ್ತಿದೆ. ಸಲಾರ್ ಚಿತ್ರಕ್ಕೆ ಪ್ರಭಾಸ್ ಹೀರೋ. ಪ್ರಶಾಂತ್ ನೀಲ್ ಡೈರೆಕ್ಟರ್. ಇನ್ನು ಹಿಂದಿಯ ಡಂಕಿಗೆ ಶಾರೂಕ್ ಖಾನ್ ಹೀರೋ ಆಗಿದ್ದರೆ, ರಾಜ್ʻಕುಮಾರ್ ಹಿರಾನಿ ಡೈರೆಕ್ಷನ್ ಇದೆ. ಎರಡು ದೊಡ್ಡ ಚಿತ್ರಗಳು ರಿಲೀಸ್ ಆದ ಒಂದೇ ವಾರಕ್ಕೆ ಕಾಟೇರ ರಿಲೀಸ್ ಆಗುತ್ತಿರುವುದು ವಿಶೇಷ. ಒಟ್ಟಿನಲ್ಲಿ ವರ್ಷದ ಕೊನೆಗೆ ಹಬ್ಬ ಫಿಕ್ಸ್ ಆಗಿದೆ.
ಸಿನಿಮಾ ಪ್ರಚಾರ ಮಾಡಲು ಒಂದು ತಿಂಗಳು ಸಾಕಾಗಲ್ವ? ನಮ್ಮದು ನಾರ್ಮಲ್ ಸಿನಿಮಾ ಅಲ್ವಲ್ಲ.. ಫೋರ್ಸ್ ಇರುವಂತಹ ಸಿನಿಮಾ. ನಾವು ಎಲ್ಲಾ ವಿಧದಲ್ಲೂ ರೆಡಿ ಇದ್ದೀವಿ. ಎಲ್ಲಾ ರೆಡಿ ಮಾಡಿಟ್ಟುಕೊಂಡು ಅನೌನ್ಸ್ ಮಾಡಬೇಕು ಎಂದುಕೊಂಡಿದ್ದೆವು. ಟೀಸರ್, ಟ್ರೈಲರ್, ಸಾಂಗ್ಸ್ ಎಲ್ಲಾ ಬರುತ್ತೆ ಎಂದಿದ್ದಾರೆ ಡೈರೆಕ್ಟರ್ ತರುಣ್ ಸುಧೀರ್.



