ಸಿನಿಮಾವೊಂದು ಸಕ್ಸಸ್ ಆದ ತಕ್ಷಣ ಆ ಚಿತ್ರದ ಕುರಿತು ಭಿನ್ನ ವಿಭಿನ್ನ ಅಭಿಪ್ರಾಯಗಳು ಹೊರಬೀಳುತ್ತವೆ. ಸಿನಿಮಾ ಸೂಪರ್ ಹಿಟ್ ಎನ್ನುವವರೆಗೂ ಕಾಂತಾರ ಚಿತ್ರದ ಬಗ್ಗೆ ಒಂದೇ ಒಂದು ನೆಗೆಟಿವ್ ಅಭಿಪ್ರಾಯವೂ ಇರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ವಿವಾದಗಳನ್ನು ಒಂದೊಂದೇ ಹೆಕ್ಕಿ ಹೆಕ್ಕಿ ತೆಗೆಯಲಾಗುತ್ತಿದೆ.


ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ. ಮಂಗೂರಿನವರ ಸಿನಿಮಾ ಅಲ್ವಾ.. ಅವರು ಹಿಂಗೇ ಎಂದು ಆರಂಭದಲ್ಲಿ ಇದು ಎಂದಿನ ಕರಾವಳಿಯವರ ಟೆಕ್ನಿಕ್ಕು ಎಂದುಕೊಂಡವರು ಕ್ರಮೇಣ ಸಿನಿಮಾ ನೋಡಿ ಹೊಗಳೋಕೆ ಶುರು ಮಾಡಿದ್ದರು. ಸಿನಿಮಾ ನೋಡುವುದನ್ನೇ ಬಿಟ್ಟವರನ್ನು ಸಿನಿಮಾ ಮಂದಿರಕ್ಕೆ ಕರೆತರುತ್ತಿರುವುದು ಕಾಂತಾರದ ನಿಜವಾದ ಸಾಧನೆ. ಕೊನೆಗೂ.. ನಮ್ಮ ನೆಲದ ಒಂದು ಸಂಸ್ಕøತಿಯ ಅದ್ಭುತ ಕಥೆಯೊಂದು ಬಂತು ಎನ್ನುವವರು ಒಂದು ಕಡೆಯಾದರೆ, ಉತ್ತರ ಕರ್ನಾಟಕ, ಬಯಲು ಸೀಮೆಯ ಜನಪದವನ್ನೂ ತೆರೆಯ ಮೇಲೆ ತನ್ನಿ ಎನ್ನುವವರು ಮತ್ತೊಂದು ಕಡೆ. ಇದರ ಮಧ್ಯೆ ವಿವಾದಗಳೂ ಶುರುವಾಗಿವೆ.


ಕಾಂತಾರದಲ್ಲಿ ಅಜನೀಶ್ ಲೋಕನಾಥ್ ಅವರಿಗೆ ದೊಡ್ಡ ಮಟ್ಟದ ಹೈಪ್ ಸಿಕ್ಕಿತ್ತು. ಹೀರೋ ಮತ್ತು ಡೈರೆಕ್ಟರ್ ರಿಷಬ್ ಶೆಟ್ಟಿಯವರನ್ನು ಹೊಗಳಿದ್ದಷ್ಟೇ ಮೆಚ್ಚಿಕೊಂಡಿದ್ದಷ್ಟೇ ಅಜನೀಶ್ ಅವರ ಸಂಗೀತವನ್ನೂ ಮೆಚ್ಚಿಕೊಂಡಿದ್ದರು. ಆದರೆ ಈಗ ತಾಯ್‍ಕುಡಂ ಬ್ರಿಡ್ಜ್ ಎಂಬ ಮ್ಯೂಸಿಕ್ ಆಲ್ಬಂ ಸಾಂಗ್‍ನ ಮ್ಯೂಸಿಕ್ ಹೊರಬಿದ್ದಿದೆ. ಇದು 5 ವರ್ಷದ ಹಿಂದಿನ ಸಂಗೀತ. ಅದನ್ನೇ ಅಜನೀಶ್ ಕಾಪಿ ಮಾಡಿದ್ದಾರೆ. ಇದು ವೊರಿಜಿನಲ್ ಅಲ್ಲ ಎನ್ನುವ ವಾದಗಳು ಶುರುವಾಗಿವೆ. ಆದರೆ ಭೂತಕೋಲ, ದೈವಾರಾಧನೆಯ ಸಂಗೀತ ಎಲ್ಲ ಕಡೆ ಒಂದೇ ತೆರನಾಗಿರುತ್ತದೆ. ವ್ಯತ್ಯಾಸ ಇರಲ್ಲ ಎನ್ನುವ ವಾದಗಳೂ ಸಮರ್ಥನೆಗಳೂ ಬಂದಿವೆ.
ಇದೆಲ್ಲವನ್ನೂ ಮೀರಿ ಕಾಂತಾರ ಯಶಸ್ಸಿನ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಕಂಬಳದ ಕೋಣದಂತೆಯೇ ಓಡುತ್ತಿದೆ. ಅಪರೂಪಕ್ಕೊಮ್ಮೆ ಕನ್ನಡ ನೆಲ, ಸಂಸ್ಕøತಿಯನ್ನು ಬಿಂಬಿಸುತ್ತಿರುವ ಸಿನಿಮಾ ನಮ್ಮ ಸಿನಿಮಾ ಎಂಬ ಭಾವನೆ ಮೂಡುತ್ತಿದೆ. ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ವಿಶೇಷವಾಗಿ ನೆಲದ ಸಂಸ್ಕøತಿ ಬಿಂಬಿಸುವ ಸಿನಿಮಾಗಳೂ ಬರುತ್ತವೆ. ಯಶಸ್ವಿಯೂ ಆಗುತ್ತವೆ. ಆದರೆ ಕನ್ನಡದಲ್ಲಿ ಮಾತ್ರ ಅದೇ ಚರ್ವಿತ ಚರ್ವಣ ಕಥೆಗಳ ಮಧ್ಯೆ ಅಪರೂಪಕ್ಕೊಮ್ಮೆ ಬಂದಿರೋ ಕನ್ನಡದ ಮಣ್ಣಿನ ಕಮರ್ಷಿಯಲ್ ಸಿನಿಮಾ ಜನ ಮೆಚ್ಚುಗೆ ಗಳಿಸಿದೆ.



