ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಸದ್ಯಕ್ಕೆ ನಟನೆಗೆ ಬ್ರೇಕ್ ಕೊಟ್ಟಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸೋಲು ಅಮೀರ್ ಅವರನ್ನು ಕಂಗೆಡಿಸಿದೆ. ಇದು ನಟನೆಯಿಂದನೇ ಬ್ರೇಕ್ ಪಡೆಯುವಂತೆ ಮಾಡಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೇಲೆ ಆಮೀರ್ ಖಾನ್ ಭಾರಿ ನಿರೀಕ್ಷೆ ಇಟ್ಟಿದ್ದರು.ಶ್ರಮವನ್ನೂ ಹಾಕಿದ್ದರು, ಸಖತ್ ಪ್ರಮೋಷನ್ ಆಗಿದ್ದರೂ ಚಿತ್ರ ಪ್ರೇಕ್ಷಕರ ನಿರೀಕ್ಷೆ ಮುಟ್ಟಲಿಲ್ಲ. ಇದಕ್ಕೆ ಅಮೀರ್ ಖಾನ್ ಇಂಡಿಯಾ ವಿರೋಧಿ ಹೇಳಿಕೆಗಳೂ ಕಾರಣ ಎಂದರೆ ತಪ್ಪಲ್ಲ. ಬಾಯ್ಕಾಟ್ ಚಡ್ಡಾ ಅಭಿಯಾನದಲ್ಲಿ ಅಮೀರ್ ಖಾನ್ ಸೋತರು. ಬಾಕ್ಸಾಫೀಸ್ನಲ್ಲಿ ಮೊದಲೆಲ್ಲ ಎರಡು ಮೂರು ದಿನಕ್ಕೇ 100 ಕೋಟಿ ದುಡಿಯುತ್ತಿದ್ದ ಅಮೀರ್ ಚಿತ್ರ ಇದೇ ಮೊದಲ ಬಾರಿಗೆ ದಯನೀಯವಾಗಿ ಸೋತು ಹೋಯ್ತು. ಇದು ನಟನೆಯಿಂದಲೇ ಅಮೀರ್ ಖಾನ್ ಬ್ರೇಕ್ ತೆಗೆದುಕೊಳ್ಳುವಂತೆ ಮಾಡಿದೆ.
ಇತ್ತೀಚೆಗೆ ದೆಹಲಿಯ ಕಾರ್ಯಕ್ರಮ ಒಂದರಲ್ಲಿ ಆಮೀರ್ ಕಾಣಿಸಿಕೊಂಡಿದ್ದ ಅಮೀರ್, ನಟನೆಯಿಂದ ಬ್ರೇಕ್ ಪಡೆಯುವುದಾಗಿ ಘೋಷಿಸಿದ್ದಾರೆ. ನಟನೆಯಿಂದ ಬ್ರೇಕ್ ಪಡೆದರೂ ನಿರ್ಮಾಪಕರಾಗಿ ಮುಂದುವರೆಯುತ್ತಾರಂತೆ.
ನಟನೆ ಮಾಡುವಾಗ ನಾನು ನನ್ನ ಜೀವನದಲ್ಲಿ ತುಂಬಾ ಕಳೆದುಕೊಂಡೆ. ನನ್ನ ಜೀವನದಲ್ಲಿ ಏನೂ ಆಗಿಲ್ಲ. ಹಾಗಾಗಿ ನಾನು ವಿರಾಮ ಪಡೆಯಲು ನಿರ್ಧರಿಸಿದೆ. ನಾನು ನನ್ನ ಕುಟುಂಬದ ಜೊತೆ ಸಮಯ ಕಳೆಯಲು ಬಯಸುತ್ತೇನೆ. ನನ್ನ ತಾಯಿ ಜೊತೆ ಇರಲು ಇಷ್ಟಪಡುತ್ತೇನೆ. ನನ್ನ ಮಕ್ಕಳಿಗೆ ಸಮಯ ಕೊಡಬೇಕು. 35 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನಾನು ಸಿನಿಮಾಗಳ ಕಡೆ ಮಾತ್ರ ಗಮನ ಹರಿಸಿದ್ದೇನೆ. ಇದು ನನ್ನ ಹತ್ತಿರದವರಿಗೆ ಟೈಂ ಕೊಡುವ ಸಮಯ ಎಂದಿದ್ದಾರೆ ಅಮೀರ್ ಖಾನ್.
ಅಮೀರ್ ಖಾನ್ ಚಿತ್ರರಂಗದಿಂದ ದೂರವಾಗುವುದು ಹೊಸದೇನೂ ಅಲ್ಲ. 2001ರಲ್ಲಿ ಲಗಾನ್ ಮತ್ತು ದಿಲ್ ಚಾಹ್ತಾ ಹೈ ಚಿತ್ರದ ನಂತರ ಸತತ 4 ವರ್ಷ ಸಿನಿಮಾ ಬಂದಿರಲಿಲ್ಲ. 2005ರಲ್ಲಿ ಮಂಗಲ್ ಪಾಂಡೆ ಬಂದಿತ್ತು. 2018ರ ನಂತರ ಲಾಲ್ ಸಿಂಗ್ ಚಡ್ಡಾ ಬಂದಿತ್ತು. ವರ್ಷಕ್ಕೊಂದು ಸಿನಿಮಾ ಮಾಡುವುದನ್ನು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದ ಅಮೀರ್ ಖಾನ್ ಈಗ ನಟನೆಯಿಂದಲೇ ಹೊರಗುಳಿಯುತ್ತಿದ್ದಾರೆ. ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಳಿಕ ಸಲಾಂ ವೆಂಕಿ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಆದರೆ ಈ ಸಿನಿಮಾದಲ್ಲಿ ಆಮೀರ್ ಖಾನ್ ಹೀರೋ ಅಲ್ಲ. ಗೆಸ್ಟ್ ರೋಲ್. ಕಾಜಲ್ ಹೀರೋಯಿನ್.
ಸತತ ಸೋಲಿನ ಬಳಿಕ ಶಾರುಖ್ ಖಾನ್ ಕೂಡ ಕೆಲವು ಸಮಯ ಬ್ರೇಕ್ ಪಡೆದಿದ್ದರು. ಇದೀಗ ಶಾರುಖ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಮೀರ್ ಖಾನ್ ಬ್ರೇಕ್ ತೆಗೆದುಕೊಂಡಿದ್ದಾರೆ.
2018ರ ಝೀರೋ ಸೋಲಿನ ಬಳಿಕ ಇದೀಗ ಶಾರುಕ್ ಆಕ್ಟಿವ್ ಆಗುತ್ತಿದ್ದಾರೆ. ಇತ್ತೀಚೆಗೆ ತೆರೆ ಕಂಡು ಒಂದು ಲೆವೆಲ್ಲಿಗೆ ಹಿಟ್ ಆದ ಬ್ರಹ್ಮಾಸ್ತ್ರದಲ್ಲಿ ಶಾರುಕ್ ನಟಿಸಿದ್ದರು. ರಾಕೆಟ್ರಿ, ಅಮೀರ್ ಖಾನ್ರ ಲಾಲ್ ಸಿಂಗ್ ಚಡ್ಡಾದಲ್ಲೂ ಕಾಣಿಸಿಕೊಂಡಿದ್ದರು. ಈಗ ಹೀರೋ ಆಗಿರುವ ಪಠಾಣ್, ಜವಾನ್, ಟೈಗರ್ 3 ಹಾಗೂ ಡುಂಕಿ ಚಿತ್ರಗಳ ಜೊತೆ ಬ್ಯಾಕ್ ಟು ಬ್ಯಾಕ್ ಬರುತ್ತಿದ್ದಾರೆ.



