ಕಾಂತಾರ ಭರ್ಜರಿ ಸಕ್ಸಸ್ ಕಂಡಿದೆ. ಕರ್ನಾಟಕವೊಂದರಲ್ಲೇ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ಕಾಂತಾರದ ಮುಂದಿನ ಟಾರ್ಗೆಟ್ 300 ಕೋಟಿ. ಯೆಸ್, ಚಿತ್ರ ತಂಡ ಈಗ 30 ದಿನ ಪೂರೈಸಿದ್ದು 250 ಕೋಟಿ ಗಡಿ ದಾಟಿ ಮುನ್ನುಗ್ಗುತ್ತಿದೆ. ಕರ್ನಾಟಕ ಹಾಗೂ ಹೊರರಾಜ್ಯಗಳಲ್ಲಿ 200 ಕೋಟಿಗೂ ಹೆಚ್ಚು ಲಾಭ ಮಾಡಿದೆ.
ಕನ್ನಡದಲ್ಲಿಯೇ 120 ಕೋಟಿ ಗಳಿಸಿರುವ ಕಾಂತಾರ ಹಿಂದಿಯಲ್ಲಿ ಕೆಜಿಎಫ್ ಚಾಪ್ಟರ್ 1 ಗಳಿಕೆಯನ್ನೂ ಮೀರಿಸುತ್ತಿದೆ. ಈಗಾಗಲೇ ಕಲೆಕ್ಷನ್ 40 ಕೋಟಿ ಗಡಿ ದಾಟಿದೆ. ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಇಂಡಿಯಾದಲ್ಲಿ ಕಲೆಕ್ಷನ್ ಒಟ್ಟಾರೆ ಎಲ್ಲ ಭಾಷೆಗಳಿಂದ 200 ಕೋಟಿ ದಾಟಿದ್ದು, ವಿದೇಶದ ಗಳಿಕೆ 50 ಕೋಟಿ ದಾಟಿದೆ. ಕೆಲವೇ ದಿನಗಳಲ್ಲಿ 300 ಕೋಟಿ ದಾಟಲಿದೆ.
ರಿಷಬ್ ಶೆಟ್ಟಿ ಯಾತ್ರೆ ನಿರಂತರವಾಗಿ ನಡೆಯುತ್ತಿದ್ದು, ಚೆನ್ನೈ, ಮುಂಬೈ ಎಂದು ಪ್ರೈವೇಟ್ ಜೆಟ್‍ನಲ್ಲಿ ಸುತ್ತುತ್ತಿದ್ದಾರೆ. ದೇಗುಲ ಯಾತ್ರೆ ಮಾಡುತ್ತಿದ್ದಾರೆ. ರಜನಿಕಾಂತ್ ರಂತ ರಜನಿಕಾಂತ್ ಅವರೇ ಮನೆಗೆ ಕರೆದು ಉಡುಗೊರೆ ಕೊಟ್ಟು ಸನ್ಮಾನ ಮಾಡಿದ್ದಾರೆ. ಅಂದಹಾಗೆ ಕೆಲವೇ ವರ್ಷಗಳ ಹಿಂದೆ ರಿಷಬ್ ಶೆಟ್ಟಿಯವರ ಮೊದಲ ಚಿತ್ರ ರಿಕ್ಕಿ ರಿಲೀಸ್ ಆಗಿತ್ತು. ರಕ್ಷಿತ್ ಶೆಟ್ಟಿ-ಹರಿಪ್ರಿಯಾ ನಾಯಕ ನಾಯಕಿಯರಾಗಿದ್ದರು. ಆ ಚಿತ್ರಕ್ಕೆ ಥಿಯೇಟರುಗಳಲ್ಲಿ ಶೋ ಸಿಗದೆ ಹೋರಾಟ ಮಾಡಿ ಪಡೆದುಕೊಂಡಿದ್ದರು ರಿಷಬ್ ಶೆಟ್ಟಿ. ಇನ್ನು ಕಿರಿಕ್ ಪಾರ್ಟಿ ರಿಲೀಸ್ ಆದ 70 ಸಾವಿರದ ತಮ್ಮ ಬೈಕ್‍ನಲ್ಲಿ ಗೆಳೆಯ ರಕ್ಷಿತ್ ಶೆಟ್ಟಿಯನ್ನೂ ಕೂರಿಸಿಕೊಂಡು ಥಿಯೇಟರ್ ಟು ಥಿಯೇಟರ್ ಸುತ್ತಿದ್ದರು. ಈಗ ಪ್ರೈವೇಟ್ ಜೆಟ್‍ನಲ್ಲಿ ಹೋಗಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಎಲ್ಲವೂ ಕಾಂತಾರ ಮಹಿಮೆ.



