ಈ ವಾರದ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಹೋಗ್ತಾಯಿರೋದು ಅರುಣ್ ಸಾಗರ್… ಎಂದು ಹೇಳಿ ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿದರೆ ಸ್ಪರ್ಧಿಗಳೆಲ್ಲ ಅಚ್ಚರಿಯಿಂದ ನೋಡುತ್ತಿದ್ದರು. ಏಕೆಂದರೆ ಅದೇ ಅರುಣ್ ಸಾಗರ್ ಅವರಿಗೆ ಎಲ್ಲ ಸ್ಪರ್ಧಿಗಳೂ ಒಟ್ಟಿಗೇ ಕಳಪೆ ಪಟ್ಟ ಕೊಟ್ಟಿದ್ದರು. ಬಿಗ್ ಬಾಸ್ ಕನ್ನಡ 9ಲ್ಲಿ 3ನೇ ವಾರ ಕಳಪೆ ಪಟ್ಟ ಸಿಕ್ಕಿದ್ದು ಅರುಣ್ ಸಾಗರ್ ಅವರಿಗೆ. ಆದರೆ, ಯಾರಿಗೆ ಸ್ಪರ್ಧಿಗಳು ಕಳಪೆ ಪಟ್ಟ ಕೊಟ್ಟಿದ್ದರೋ ಆ ಅರುಣ್ ಸಾಗರ್ಗೆ ಕಿಚ್ಚ ಸುದೀಪ್ ಮೆಚ್ಚುಗೆಯ ಚಪ್ಪಾಳೆ ತಟ್ಟಿದ್ದಾರೆ.‘’ನಿಮ್ಮ ಆಟ ಅತ್ಯದ್ಭುತವಾಗಿತ್ತು’’ ಎಂದು ಅರುಣ್ ಸಾಗರ್ ಅವರನ್ನು ಕಿಚ್ಚ ಸುದೀಪ್ ಹೊಗಳಿದ್ದಾರೆ.
ಕೆಲವು ಕಡೆ ರೂಲ್ಸ್ ಲೈನ್ ಕ್ರಾಸ್ ಆಯ್ತು ಅನ್ಸತ್ತೆ ಎಂದು ರಾಕೇಶ್ ಅಡಿಗ ಹೇಳಿದ್ರೆ, ಹೊಸಬರು ಬರಬೇಕೆಂದು ಹೇಳಿ ನನ್ನನ್ನೇ ಔಟ್ ಮಾಡಿದರು ಎಂದವರು ದರ್ಶ್. ’ಕ್ಯಾಪ್ಟೆನ್ಸಿಗೆ ಹೊಸಬರು ಬರಲಿ ಎಂದಿದ್ದವರು ಹೊಸಬರನ್ನೇ ಹೊಡೆದರು ಎನ್ನುವುದು ರೂಪೇಶ್ ಶೆಟ್ಟಿ ಕೊಟ್ಟಿದ್ದ ಕಾರಣ.’ನನ್ನ ಚಿನ್ನವನ್ನ ನನಗೇ ತಂದುಕೊಟ್ಟು, ನಾನೇ ಕೊಡಿಸಿ ಇನ್ನೊಬ್ಬರನ್ನ ಹೊಡೆಸಿದ್ನಾ ಅನ್ನೋ ಡೌಟ್ ಬರಬಹುದು ಎಂಬ ಕಾರಣ ಕೊಟ್ಟು ವಿನೋದ್ ಕಳಪೆ ಕೊಟ್ಟರೆ, ಕಾವ್ಯಶ್ರೀ ಗೌಡ ಕೂಡ ಅರುಣ್ ಸಾಗರ್ ಅವರಿಗೆ ‘ಕಳಪೆ’ ಪಟ್ಟ ಹೊರಿಸಿದ್ದರು.
ನಮ್ಮ ಸ್ಟ್ರೆಂಗ್ತ್ನ್ನ ಪ್ರತಿನಿತ್ಯ, ಪ್ರತಿದಿನ ಬಳಸಿಕೊಂಡರೂ, ರೂಲವಸ್ ಚೌಕಟ್ಟಿನಲ್ಲೇ ಇದ್ದು
ಕೈಯಲ್ಲಿ ಆಗಲಿಲ್ಲ ಅಂದರೂ ಮಾಡಿದರು. ಅದಕ್ಕಾಗಿ ಚಪ್ಪಾಳೆ ಹೋಗುತ್ತಿಲ್ಲ. ಆದರೆ, ಅವರಿಗೆ ಅವರ ಸಾಮರ್ಥ್ಯದ ಮೇಲೆ ಚಪ್ಪಾಳೆ ಹೋಗ್ತಾಯಿದೆ. ಚಪ್ಪಾಳೆ ಅವರ ಕ್ರಿಯೇಟಿವ್ ಥಾಟ್‌ಗೆ, ಅವರ ಶ್ರಮಕ್ಕೆ, ಜೋಕರ್ ಎಂಬ ಕ್ಯಾರೆಕ್ಟರ್ ಕ್ರಿಯೇಟ್ ಮಾಡಿ ಸೈ ಎನಿಸಿಕೊಂಡು ಮನರಂಜನೆ ಕೊಟ್ಟರು. ಜೋಕರ್ ಆಗಬೇಕಾದ ಜಾಗದಲ್ಲೇ ಜೋಕರ್ ಆದರು. ಅದಕ್ಕೆ ನನ್ನ ಚಪ್ಪಾಳೆ ಎಂದರು ಸುದೀಪ್.



