ನಟ ದರ್ಶನ್ ಅವರು ಜೈಲಿಗೆ ಸೇರಿದಾಗಿನಿಂದ ಅವರ ಬಗ್ಗೆ ಹಬ್ಬಿರುವ ಕಥೆಗಳಲ್ಲಿ ಕಪೋಲ ಕಲ್ಪಿತ ಕಥೆಗಳೇ ಜಾಸ್ತಿ ಇವೆ. ಅವರ ತಾಯಿ, ತಮ್ಮನ ಬಗ್ಗೆಯೂ ಸುಳ್ಳು ಸುದ್ದಿ ಹಬ್ಬಿವೆ. ಅಲ್ಲದೆ ಸ್ತ್ರೀದ್ವೇಷದ ಬಗ್ಗೆಯೂ ಕಪೋಲ ಕಲ್ಪಿತ ಕಥೆಗಳಿವೆ. ತುಂಬಾ ದಿನಗಳೇನೂ ಬೇಕಿಲ್ಲ, ಮುಂದಿನ ವರ್ಷದಲ್ಲಿಯೇ ದರ್ಶನ್ ಅವರ ಭವಿಷ್ಯ ಬದಲಾಗಲಿದೆ ಎಂದು ಹೇಳಿದ್ದಾರೆ ಅವದೂತ ಎಂದೇ ಖ್ಯಾತರಾಗಿರುವ ಅರ್ಜುನ ಗುರೂಜಿ.
ನಟ ದರ್ಶನ್ ಅವರಿಗೆ ೨೦೨೪ ಒಳ್ಳೆಯ ವರ್ಷವೂ ಹೌದು, ಕೆಟ್ಟ ವರ್ಷವೂ ಹೌದು. ದರ್ಶನ್ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಕಾಟೇರ ರಿಲೀಸ್ ಆಗಿದ್ದು ೨೦೨೩ರಲ್ಲಾದರೂ, ಹಿಟ್ ಆಗಿದ್ದು ೨೦೨೪ರಲ್ಲಿ. ಅದಾದ ಮೇಲೆ ಸಂಸಾರದಲ್ಲಿ ಬಿರುಗಾಳಿ ಎದ್ದು, ಕೊಲೆ ಪ್ರಕರಣದಲ್ಲಿ ಜೈಲು ಸೇರಿ, ಈಗ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ದರ್ಶನ್ ಅವರ ಭವಿಷ್ಯ ಹೇಗಿದೆ.. ಈ ಪ್ರಶ್ನೆಗೆ ಹಲವರು ಹಲವು ರೀತಿಯ ಉತ್ತರ ಕೊಡ್ತಾರೆ. ಆದರೆ ಅವದೂತ ಎಂದೇ ಕರೆಸಿಕೊಳ್ಳುತ್ತಿರುವ ಅರ್ಜುನ್ ಗುರೂಜಿ ಹೇಳೋದೇ ಬೇರೆ..
ದರ್ಶನ್ ಅವರಿಗೆ ಸ್ತ್ರೀದೋಷ ಇದೆ ಅನ್ನೋ ಕಥೆ ಹೇಳಲಾಗ್ತಿದೆ. ಆದರೆ, ಸ್ತ್ರೀ ದೋಷ ಅನ್ನೋದೇ ಸುಳ್ಳು. ಅಂಥಾದ್ದೊಂದು ಇಲ್ಲವೇ ಇಲ್ಲ. ಹೆಣ್ಣಿನಿಂದ ರಾಜ್ಯಗಳು ಉದ್ಧಾರವಾಗಿವೆ. ನಾಶವೂ ಆಗಿವೆ. ತಾಯಿ ಕಣ್ಣೀರು ಹಾಕದಂತೆ ನೋಡಿಕೊಳ್ಳೋದು ಮಗನ ಕರ್ತವ್ಯ. ಸ್ತ್ರೀ ದೋಷ ಅನ್ನೋದೆಲ್ಲ ಇಲ್ಲ. ಸ್ತ್ರೀಯನ್ನು ಗೌರವಿಸಿ ಎಂದಿದ್ದಾರೆ.
ಅರ್ಜುನ್ ಗುರೂಜಿ ಅವರ ಪ್ರಕಾರ ದರ್ಶನ್ ಕಲ್ಲಾಗಿದ್ದರು. ಆ ಕಲ್ಲಿಗೆ ಏಟುಗಳು ಬಿದ್ದೂ ಬಿದ್ದು ವಿಗ್ರಹ ಆಗಿದೆ. ಕೆಲವೇ ದಿನ.. ಅವರಿಗೆ ಪೂಜೆಯೂ ಸಹ ಆಗತ್ತದೆ. ನಟ ದರ್ಶನ್ ರಾಜಕೀಯಕ್ಕೂ ಬರುತ್ತಾರೆ. ದರ್ಶನ್ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ. ರಾಜಕೀಯ ಪಕ್ಷಗಳೇ ಅವರ ಬಳಿಗೆ ಹೋಗುತ್ತವೆ ಎಂದಿದ್ದಾರೆ ಅರ್ಜುನ್ ಗುರೂಜಿ.
ಕರ್ನಾಟಕದವರು ಪ್ರೀತಿಗೆ ಗೌರವ ನೀಡುತ್ತೇವೆ. ಒಳ್ಳೆಯ ನಟ ಎಂಬ ಅವರಿಗೆ ಪ್ರೀತಿ ಇದೆ. ಸಾಕಷ್ಟು ಜನರಿಗೆ ಮನೆ ಕಟ್ಟಿ ಕೊಟ್ಟಿದ್ದಾರೆ. ಮಾಡಿದ್ದು ಯಾರಿಗೂ ಗೊತ್ತಾಗದಂತೆ ನೋಡಿಕೊಂಡಿದ್ದಾರೆ. ಅವರು ಕೂಡ ಉತ್ತಮ ಪ್ರಜೆ ಆಗುತ್ತಾರೆ ಎಂದಿರುವ ಅರ್ಜುನ್ ಗುರೂಜಿ ಬೇಲ್ ತೀರ್ಪು ಬರುವ ದಿನ ದಿನಕರ್ ಕರೆ ಮಾಡಿದ್ದರು. ಬೇಲ್ ಏನಾಗುತ್ತೆ ಅಂತಾ ಕೇಳಿದ್ರು. ಸಂಜೆ ಸ್ವೀಟ್ ತಗೊಂಡು ಬನ್ನಿ ಎಂದು ಹೇಳಿದ್ದೆ ಎಂದಿದ್ದಾರೆ. ದರ್ಶನ್ ಅಭಿಮಾನಿಗಳು, ಅವರ ತಾಯಿ ಪತ್ನಿ, ತಮ್ಮನ ಪೂಜೆಗಳು ಫಲಿಸಿವೆ. ಹಾಗಾಗಿ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಕೆಟ್ಟ ಸಮಯ, ಕೆಲವು ಕೆಟ್ಟ ನಿರ್ಧಾರಗಳಿಂದ ಈ ರೀತಿ ಆಗಿದೆ ಅಷ್ಟೇ ಎಂದಿದ್ದಾರೆ.
ಇನ್ನು ದರ್ಶನ್ ಅವರ ತಾಯಿ, ತಮ್ಮನನನ್ನು ದೂರ ಇಟ್ಟಿದ್ದಾರೆ. ಅವರಿಗೆ ಏನೂ ಮಾಡಿಲ್ಲ ಎಂಬ ಮಾತಿಗೆ ಉತ್ತರ ನೀಡಿರುವ ಅರ್ಜುನ್ ಗುರೂಜಿ, ಕನ್ನಡಿಗರಿಗೆ ದರ್ಶನ್ ಮೇಲೆ ಅಪಾರ ಪ್ರೀತಿಯಿದೆ. ಅನೇಕರು ಹೇಳೋ ಪ್ರಕಾರ ದರ್ಶನ್ ಅವರು ತಾಯಿಯನ್ನು ನಿರ್ಲ್ಯಕ್ಷ ಮಾಡಿಲ್ಲ. ದರ್ಶನ್ ಕುಟುಂಬದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಯಾರೋ ನಿಮ್ಮ ಹಣವನ್ನು ಡಬಲ್ ಮಾಡಿಕೊಡುತ್ತೇನೆ ಅಂತಾ ಹೇಳ್ತಾರೆ. ಅವರನ್ನು ನಂಬಿ ಯಾವುದೋ ಷೇರುಗಳ ಮೇಲೆ ದುಡ್ಡು ಹಾಕ್ತಾರೆ. ಡಬಲ್ ಆಗೋದಿರಲಿ, ನಷ್ಟ ಆಗುತ್ತೆ. ಆಗ ಜಾತಕ ತಗೊಂಡು ಇನ್ಯಾರ ಹತ್ತಿರಾನೋ ಹೋದ್ರೆ, ಅವರು ಶನೀಶ್ವರನ ಕಾಟ ಇದೆ. ಸಾಡೇ ಸಾತಿ ನಡೀತಿದೆ ಅಂತಾರೆ. ಇಷ್ಟಕ್ಕೂ ಶನೀಶ್ವರ ಇಂಥದ್ದಕ್ಕೆ ದುಡ್ಡು ಹಾಕು ಎಂದು ಹೇಳಿರ್ತಾನಾ. ಎಲ್ಲದಕ್ಕೂ ದೇವರನ್ನು ಮಧ್ಯಕ್ಕೆ ಎಳೆದು ತರಬೇಡಿ. ನೀರಿಗೆ, ಗಾಳಿಗೆ, ದೇವರಿಗೆ ಜಾತಿ ತರಬೇಡಿ ಎಂದಿದ್ದಾರೆ ಅರ್ಜುನ್ ಗುರೂಜಿ.
ದರ್ಶನ್ ಅವರ ಬಗ್ಗೆ ಎದ್ದಿರುವ ಗಾಳಿ ಸುದ್ದಿಗಳು, ವಿಚಿತ್ರ ಕಥೆಗಳು, ಕುಟುಂಬವೇ ದೂರ ಇದೆ ಎಂಬ ಮಾತುಗಳಲ್ಲಿ ಸತ್ಯ ಇಲ್ಲ ಎಂದೂ ಹೇಳಿದ್ದಾರೆ.



