ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ತಮ್ಮ ವೈಯಕ್ತಿಕ ಜೀವನ ಹಾಗೂ ಸಿನಿಮಾ ಜೀವನ ಎರಡರಲ್ಲೂ ಮಾದರಿಯಾದವರು. ಅಪ್ಪು ಇದ್ದಿದ್ದರೆ.. ಎಂಬ ಭಾವ ಈಗಲೂ ಅಭಿಮಾನಿ ದೇವರುಗಳನ್ನು ಕಾಡುವುದು ಸತ್ಯ. ಮಾಡಿದ ದಾನ ಧರ್ಮಗಳನ್ನು ಎಡಗೈಲಿ ಕೊಟ್ಟಿದ್ದು ಬಲಗೈಗೆ ತಿಳಿಯದಂತೆ ಬದುಕಿದ್ದ ಅಪ್ಪು ಅವರ ಸಮಾಜಸೇವೆ ಜನರಿಗೆ ಗೊತ್ತಾಗಿದ್ದೇ ಆತ್ಮ ಪರಮಾತ್ಮನಾದಾಗ. ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಬೆನ್ನೆಲುಬಾಗಿದ್ದ, ರಿಯಲ್ ಲೈಫಿನಲ್ಲಿ ಅಶಕ್ತರಿಗೆ ಆಸರೆಯಾಗಿದ್ದ ಪುನೀತ್ ಚಿತ್ರಗಳ ಮೂಲಕವೂ ಸಂದೇಶ ಸಾರಿದರು. ಅವರ ಒಂದೊಂದು ಚಿತ್ರಗಳಲ್ಲೂ ಒಂದೊಂದು ಸಂದೇಶವಿತ್ತು. ಕೆಲವು ಚಿತ್ರಗಳನ್ನಷ್ಟೇ ಇಲ್ಲಿ ಗುರುತಿಸಿ ಪಟ್ಟಿ ಮಾಡಲಾಗಿದೆ.

ಭೂಮಿಗೆ ಬಂದ ಭಗವಂತ : ಚಿತ್ರದಲ್ಲಿ ಅಪ್ಪು ಬಾಲಕೃಷ್ಣನ ಪಾತ್ರ.
ಅಹಂಕಾರ ಬಿಟ್ಟವನು ದೇವರನ್ನು ಕಾಣುತ್ತಾನೆ ಎಂಬ ಸಂದೇಶವಿದೆ
ಭಾಗ್ಯವಂತ : ದುರದೃಷ್ಟವಂತನೆಂಬ ಹಣೆಪಟ್ಟಿ ಹೊತ್ತ ಬಾಲಕ ಕೃಷ್ಣ
ಸಂದೇಶ : ಮಕ್ಕಳನ್ನು ಹೀಯಾಳಿಸಬಾರದು. ದುರದೃಷ್ಟವಂತನೆಂದೇ ಬೈಯ್ಯುತ್ತಿದ್ದವರೇ ಬಾಲಕ ಕೃಷ್ಣನನ್ನು ಭಾಗ್ಯವಂತ ಎಂದು ಸನ್ಮಾನಿಸುತ್ತಾರೆ.
ಬೆಟ್ಟದ ಹೂವು : ರಾಮು ಎಂಬ ಬಾಲಕನ ಪಾತ್ರ

ಅಭಿ : ಅಂಗವಿಕಲ ತಾಯಿಯ ದತ್ತು ಮಗ ಅಭಿಷೇಕ್
ಸಂದೇಶ : ಅಂಗವಿಕಲರನ್ನು ಅವಮಾನಿಸಬಾರದು ಹಾಗೂ ಧರ್ಮಕ್ಕಿಂತ ಪ್ರೀತಿ ದೊಡ್ಡದು ಎಂದು ಸಾರುವ ಚಿತ್ರ. ಒಂದೇ ಒಂದು ವಿವಾದವಾಗಲಿಲ್ಲ ಎನ್ನುವುದು ಸಿನಿಮಾ ಮಾಡುವವರಿಗೆ ಒಂದು ಪಾಠ.

ಮೌರ್ಯ : ತಂದೆಯಿಲ್ಲದೆ ತಾಯಿಯ ಆರೈಕೆಯಲ್ಲೇ ಬೆಳೆಯುವ ಯುವಕ. ಮನು
ಸಂದೇಶ : ಚಿತ್ರವನ್ನು ನೋಡಿದವರು ದೂರದ ಊರಿನಲ್ಲಿದ್ದ ತಾಯಿಯನ್ನು ನೋಡಿಕೊಂಡು ಬಂದ ಕಥೆಗಳಿವೆ. ಜೀವನದ ಗುರಿಗಳಿಗಾಗಿ ಕುಟುಂಬವನ್ನು ತ್ಯಾಗ ಮಾಡಬಾರದು ಎಂಬ ಮೆಸೇಜ್ ಇದೆ.



