ದೈವ, ಭೂತಕೋಲಗಳನ್ನು ಕರಾವಳಿಯ ಜನ ನಂಬುತ್ತಾರೆ. ಹೀಗಾಗಿಯೇ ಹುಟ್ಟೂರು ಬಿಟ್ಟು ದೇಶವಿದೇಶಗಳಲ್ಲಿ ನೆಲೆ ಕಂಡುಕೊಂಡಿದ್ದರೂ ದೈವಾರಾಧನೆ, ಭೂತಕೋಲಗಳನ್ನು ತಪ್ಪಿಸಿಕೊಳ್ಳೋದಿಲ್ಲ.ಕರಾವಳಿಯಿಂದ ಹೊರಗೆ ಸ್ಟಾರ್ ಆಗಿರುವ ಯಾರನ್ನೇ ನೋಡಿ.. ಸಂಪ್ರದಾಯ, ಪದ್ಧತಿ ತಪ್ಪಿಸುವುದಿಲ್ಲ. ನಟಿ ಅನುಷ್ಕಾ ಶೆಟ್ಟಿ ಕೂಡಾ ಅದಕ್ಕೆ ಹೊರತಲ್ಲ. ಇತ್ತೀಚೆಗೆ ಅವರು ತಮ್ಮ ಹುಟ್ಟೂರಿನಲ್ಲಿ ಭೂತಕೋಲ ನೆರವೇರಿಸಿದ್ದಾರೆ.

ಅನುಷ್ಕಾ ಶೆಟ್ಟಿ ಮೂಲ ಹೆಸರು ಸ್ವೀಟಿ. ಹುಟ್ಟೂರು ದ.ಕನ್ನಡ ಜಿಲ್ಲೆಯ ಬೆಳ್ಳಿಪಾಡಿ ಗ್ರಾಮ. ಮಾತೃಭಾಷೆ ತುಳು. ಪ್ರತಿ ವರ್ಷದಂತೆಯೇ ಈ ವರ್ಷವೂ ಭೂತಕೋ ನಡೆಸಿಕೊಟ್ಟಿದ್ದಾರೆ ಅನೂಷ್ಕಾಶೆಟ್ಟಿ. ತಂದೆ ವಿಠ್ಠಲ್ ಶೆಟ್ಟಿ, ತಾಯಿ ಪ್ರಫುಲ್ಲ ಹಾಗೂ ಇಬ್ಬರೂ ಸೋದರರ ಜೊತೆ ಭೂತಕೋಲ ಮಾಡಿಕೊಟ್ಟಿದ್ದಾರೆ.
ಅನುಷ್ಕಾ ಶೆಟ್ಟಿ ದ.ಭಾರತದ ಲೇಡಿ ಸೂಪರ್ ಸ್ಟಾರ್‍ಗಳಲ್ಲಿ ಒಬ್ಬರು. ಆದರೆ ಕರಾವಳಿಯ ಹಲವರಂತೆಯೇ ಅನುಷ್ಕಾ ಶೆಟ್ಟಿ ಕೂಡಾ ತಮ್ಮ ಮೂಲದ ದೈವಾರಾಧನೆ, ಭೂತಕೋಲಗಳನ್ನು ಬಿಟ್ಟಿಲ್ಲ.



