ನಟ ರಿಷಬ್ ಶೆಟ್ಟಿಯವರೇ ಹ್ಯಾಟ್ಸಾಫ್. ಚಿತ್ರದ ಆಕ್ಷನ್, ಆಕ್ಟಿಂಗ್, ಮ್ಯೂಸಿಕ್, ಅಭಿನಯ.. ಎಲ್ಲವೂ ಬ್ರಿಲಿಯಂಟ್.. ಎಂದು ಚಿತ್ರದ ಬಗ್ಗೆ ಎಕ್ಸೈಟ್ ಆಗಿ ಮಾತನಾಡಿದ್ದಾರೆ ಕಂಗನಾ ರಣಾವತ್. ಇದೀಗ ತಾನೇ ಸಿನಿಮಾ ನೋಡಿ ಬಂದೆ. ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತಿದೆ. ಈ ಥ್ರಿಲ್‍ನಿಂದ ಹೊರಬರಲು ನನಗೆ ಇನ್ನೂ ಒಂದು ವಾರ ಬೇಕು. ಡೈರೆಕ್ಟರ್ ರಿಷಬ್ ಶೆಟ್ಟಿಯವರೇ ಹ್ಯಾಟ್ಸಾಫ್. ಕಥೆಗಾರ ರಿಷಬ್ ಶೆಟ್ಟಿಯವರೇ ಹ್ಯಾಟ್ಸಾಫ್. ಭಾರತೀಯ ಸಂಪ್ರದಾಯ, ಜನಪದ, ಇಲ್ಲಿನ ನೆಲದ ನಂಬಿಕೆ, ಸಮಸ್ಯೆಗಳನ್ನು ಚೆಂದದ ಕಥೆಯೊಂದಿಗೆ ಸಿನಿಮಾಗೆ ತಂದಿದ್ದೀರಿ. ಚಿತ್ರಮಂದಿರದಲ್ಲಿದ್ದ ಪ್ರತಿಯೊಬ್ಬರೂ ಇಂಥ ಅನುಭವ ಹಿಂದೆಂದೂ ಆಗಿರಲಿಲ್ಲ ಎಂದು ಥ್ರಿಲ್ ಆಗಿದ್ದರು ಎಂದು ಕಾಂತಾರ ಅನುಭವ ಹಂಚಿಕೊಂದ್ದಾರೆ ಕಂಗನಾ ರಣಾವತ್.

ಕಾಂತಾರ ಸೃಷ್ಟಿಸಿರುವ ಸಂಚಲನಕ್ಕೆ ಇಡೀ ಇಂಡಿಯನ್ ಚಿತ್ರಪ್ರೇಮಿಗಳಷ್ಟೇ ಅಲ್ಲ, ಚಿತ್ರರಂಗವೂ ಬೆರಗಾಗಿ ನೊಡುತ್ತಿದೆ. ದೈವೀಕ ಸಿನಿಮಾಗಳಿಗೆ ಇವತ್ತಿಗೂ ಪ್ರೇಕ್ಷಕರಿದ್ದಾರಾ ಎಂಬುದು ಜನರನ್ನು ಕಾಡುತ್ತಿರುವ ಪ್ರಶ್ನೆ. ಸರಿಯಾಗಿ ತೋರಿಸಿದ್ರೆ ಒಳ್ಳೆಯ ಸಿನಿಮಾ ತೋರಿಸಿದ್ರೆ ಇವತ್ತಿಗೂ ಜನ ಮೆಚ್ಚಿಕೊಳ್ತಾರೆ. ನೋಡ್ತಾರೆ ಅನ್ನೋದನ್ನು ಕಾಂತಾರ ಸಾಬೀತು ಮಾಡಿದೆ. ಕರ್ನಾಟಕದಲ್ಲಂತೂ ಬಿಡಿ, ಇನ್ನು ನಮ್ಮ ನೆಲದ ಕಥೆ. ನೋಡಿಲ್ಲದವರಿಗೂ ಕೇಳಿಯಾದರೂ ಗೊತ್ತಿರುತ್ತೆ. ಆದರೆ ಹಿಂದಿಯವರ ಕಥೆ ಬೇರೆ. ಸಿನಿಮಾ ನೋಡಿದ ಹಿಂದಿ ಪ್ರೇಕ್ಷಕರೇನೋ ಅದ್ಭುತ ಪ್ರತಿಕ್ರಿಯೆ ತೋರಿಸಿದ್ದಾರೆ. ಈಗಾಗಲೇ ಕಾಂತಾರ ಚಿತ್ರ ನೋಡಿ ಮಧುರ್ ಭಂಡಾರ್‍ಕರ್, ರಾಮ್ ಗೋಪಾಲ್ ವರ್ಮಾ ಮೊದಲಾದ ದಿಗ್ಗಜ ನಿರ್ದೇಶಕರು ಮೆಚ್ಚಿದ್ದಾರೆ. ಚಿತ್ರವನ್ನು ಬಿಡುವಾದ ತಕ್ಷಣ ನೋಡುತ್ತೇನೆ ಎಂದು ಹೇಳಿದ್ದರು ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್. ಈಗ ಸಿನಿಮಾ ನೋಡಿದ್ದಾರೆ. ವ್ಹೋವ್.. ಎಂದಿದ್ದಾರೆ. ಬಾಲಿವುಡ್ ಲೆವೆಲ್ಲಿನಲ್ಲಿ ಸ್ಟಾರ್ ನಟಿಯೊಬ್ಬರ ಮೊದಲ ರಿಯಾಕ್ಷನ್ ಇದು. ಇದಕ್ಕೂ ಮುನ್ನ ನಟಿ ಶಿಲ್ಪಾಶೆಟ್ಟಿ ಕೂಡಾ ನಮ್ಮ ಊರಿನ ಕಥೆ ಎಂದು ಮೆಚ್ಚಿಕೊಂಡಿದ್ದರು.



